ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಗಿತು ವಿಶ್ವದ ಟಾಪ್ ಶ್ರೀಮಂತರ ಸಂಪತ್ತು: ಒಂದೇ ದಿನದಲ್ಲಿ ಜೆಫ್ ಬೇಜೋಸ್, ಮಸ್ಕ್‌ ಕಳೆದುಕೊಂಡಿದೆಷ್ಟು?

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 04: ಜಾಗತಿಕ ಷೇರುಪೇಟೆಯಲ್ಲಿ ಮತ್ತೆ ತಲ್ಲಣ ಉಂಟಾಗಿದೆ. ವಿಶ್ವದ ಶ್ರೀಮಂತ ತಂತ್ರಜ್ಞಾನ ಬಿಲಿಯನೇರ್‌ಗಳ ಸಂಪತ್ತಿನ ಲಾಭ ಗುರುವಾರ ದಿಢೀರ್ ಎಂದು ಕುಸಿದಿದೆ.

ಟೆಕ್ ಬಿಲಿಯನೇರ್‌ಗಳಲ್ಲಿ ಟಾಪ್ 10 ಶ್ರೀಮಂತರು ತಮ್ಮ ಸಾಮೂಹಿಕ ನಿವ್ವಳ ಮೌಲ್ಯದಿಂದ ಸುಮಾರು 44 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಈಕ್ವಿಟಿ ಮೇಲಿನ ಹೂಡಿಕೆದಾರರ ಕಾಳಜಿಯ ಮೇಲೆ ಹೆಚ್ಚು ಕುಸಿತ ಕಂಡಿದೆ.

 ಜೆಫ್ ಬೇಜೋಸ್ ಸಂಪತ್ತು ಈಗ 200 ಬಿಲಿಯನ್ ಡಾಲರ್: ಈ ಸಾಧನೆ ಮಾಡಿದ ವಿಶ್ವದ ಮೊದಲಿಗ ಜೆಫ್ ಬೇಜೋಸ್ ಸಂಪತ್ತು ಈಗ 200 ಬಿಲಿಯನ್ ಡಾಲರ್: ಈ ಸಾಧನೆ ಮಾಡಿದ ವಿಶ್ವದ ಮೊದಲಿಗ

ಈ ವರ್ಷದಲ್ಲಿ ಅತಿ ಹೆಚ್ಚು ಸಂಪತ್ತನ್ನ ಹೆಚ್ಚಿಸಿರುವುದರಲ್ಲಿ ಮೊದಲಿಗರು ಅಮೆಜಾನ್.ಕಾಮ್ ಸಂಸ್ಥಾಪಕ ಜೆಫ್ ಬೇಜೋಸ್ ಹಾಗೂ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್‌. ಆದರೆ ಗುರುವಾರ ಈ ಇಬ್ಬರು ಖ್ಯಾತ ನಾಮರ ಸಂಪತ್ತು ಭಾರೀ ಇಳಿಕೆ ಕಂಡಿತು. ಜೆಫ್ ಬೇಜೋಸ್‌ರ ಸಂಪತ್ತು 9 ಬಿಲಿಯನ್ ಡಾಲರ್ ಇಳಿಕೆಯಾಗಿದೆ. ಅಂದರೆ ಸುಮಾರು 66,000 ಕೋಟಿ ರೂಪಾಯಿ.

Jeff Bezos, Elon Musk Lead Tech Wealth Retreat As $44 Billion Erases

ಟೆಸ್ಲಾ ಸಂಸ್ಥಾಪಕ ಎಲೋನ್‌ ಮಸ್ಕ್‌ ಅವರ ನಿವ್ವಳ ಮೌಲ್ಯವು ಕೂಡ 8.5 ಬಿಲಿಯನ್ ಡಾಲರ್‌ನಷ್ಟು ಕುಸಿದಿದೆ. ಇದು ಅವರ ಮೂರನೇ ನೇರ ದಿನದ ಕುಸಿತವನ್ನು ಸೂಚಿಸುತ್ತದೆ.

ಏಕೆಂದರೆ ಈಕ್ವಿಟಿಗಳು ಸುಮಾರು ಮೂರು ತಿಂಗಳಲ್ಲಿ ನಯವಾದ ಮೌಲ್ಯಮಾಪನಗಳ ಬಗ್ಗೆ ಹೂಡಿಕೆದಾರರ ಕಾಳಜಿಯ ಮೇಲೆ ಹೆಚ್ಚು ಕುಸಿದವು.

ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಆರ್ಥಿಕತೆ ಮೇಲೆ ಪರಿಣಾಮ ಬೀರಿರುವಾಗ ವಿಶ್ವದ ಕೆಲವು ಶ್ರೀಮಂತರು ವೈಯಕ್ತಿಕ ಸಂಪತ್ತಿನಲ್ಲಿ ಅಸಾಧಾರಣ ಲಾಭಗಳನ್ನು ಗಳಿಸಿದ್ದಾರೆ. ಅದರಲ್ಲಿ ಬೇಜೋಸ್ ಮತ್ತು ಮಸ್ಕ್‌ ಪ್ರಮುಖರು. ಭಾರತದ ಮುಕೇಶ್ ಅಂಬಾನಿ ಕೂಡ ಈ ಸಾಂಕ್ರಾಮಿಕದ ವೇಳೆ ತಮ್ಮ ಸಂಪತ್ತನ್ನು ಹೆಚ್ಚಿಸಿದ್ದಾರೆ .

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಬೆಜೋಸ್ ಎರಡು ಪಟ್ಟು ಹೆಚ್ಚು ಸಂಪತ್ತನ್ನು ಗಳಿಸಿದರೆ, ಅವರ ಮಾಜಿ ಪತ್ನಿ ಮ್ಯಾಕೆಂಜಿ ಸ್ಕಾಟ್ ಸಂಪತ್ತ ಕೂಡ ಏರುತ್ತಲೇ ಸಾಗಿತ್ತು.
ಕಂಪೆನಿಗಳ ಉತ್ಪನ್ನಗಳು ಗ್ರಾಹಕರನ್ನು ವೆಬ್‌ನತ್ತ ತಿರುಗಿಸುವುದರಿಂದ ಲಾಭ ಹೆಚ್ಚಾಗಿ ಹೂಡಿಕೆದಾರರು ಈ ವರ್ಷ ಟೆಕ್ ಸ್ಟಾಕ್‌ಗಳಿಗೆ ಹೂಡಿಕೆ ಹೆಚ್ಚಿಸಿದ್ದಾರೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಈ ವರ್ಷ 500 ಶ್ರೀಮಂತ ಜನರು 830 ಬಿಲಿಯನ್ ಡಾಲರ್ ಸಂಪತ್ತನ್ನು ಸೇರಿಸಿದ್ದಾರೆ. ಇದರಲ್ಲಿ ಮೊದಲಿಗೆ ಜೆಫ್ ಬೇಜೋಸ್ 83 ಬಿಲಿಯನ್ ಗಳಿಸಿದ್ರೆ, ಮಸ್ಕ್ ಅವರ ಸಂಪತ್ತು ಸುಮಾರು 69 ಬಿಲಿಯನ್ ಡಾಲರ್ ಗಗನಕ್ಕೇರಿದೆ.

ಇದೀಗ ಅಮೆಜಾನ್ ಸಿಇಒ ಜೆಫ್ ಬೇಜೋಸ್ 9 ಬಿಲಿಯನ್ ಡಾಲರ್ ಕಳೆದುಕೊಂಡರೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೇ ಮುಂದುವರಿದಿದ್ದಾರೆ.

English summary
The industry’s 10 wealthiest people had $44 billion erased from their collective net worth as U.S. equities tumbled the most in almost three months over investor concerns about frothy valuations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X