ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಫ್ ಬೇಜೋಸ್ ಸಂಪತ್ತು ಈಗ 200 ಬಿಲಿಯನ್ ಡಾಲರ್: ಈ ಸಾಧನೆ ಮಾಡಿದ ವಿಶ್ವದ ಮೊದಲಿಗ

|
Google Oneindia Kannada News

ನವದೆಹಲಿ, ಆಗಸ್ಟ್‌ 27: ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಭಾರತದಲ್ಲಿ ಅನಿಲ್‌ ಅಂಬಾನಿ ಸಂಪತ್ತು ಹೇಗೆ ಹೆಚ್ಚಾಗ್ತಿದೆಯೋ ಹಾಗೇ ಇಡೀ ವಿಶ್ವದಲ್ಲಿ ಸಂಪತ್ತನ್ನ ಹೆಚ್ಚಿಸಿಕೊಂಡಿರುವ ವ್ಯಕ್ತಿ ಬೇರೆ ಯಾರು ಅಲ್ಲ, ಅಮೆಜಾನ್ ಸಿಇಒ ಜೆಫ್ ಬೇಜೋಸ್.

ಆಗಸ್ಟ್ 26 ರಂದು ಅಮೆಜಾನ್ ಸಿಇಒ ಜೆಫ್ ಬೆಜೋಸ್ ಅವರು 200 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಗಳಿಸಿದ ಮೊದಲ ವ್ಯಕ್ತಿ ಎನಿಸಿಕೊಂಡರು. ಅಮೆರಿಕಾದಲ್ಲಿ ಕೊರೊನಾವೈರಸ್ ಅತ್ಯಂತ ಹೆಚ್ಚು ಪೀಡಿಸಿದ್ದರೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಷೇರುಗಳು ಗಗನಕ್ಕೇರಿತು.

ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಜನಿಸಿದಾಗ, ಆತನ ತಾಯಿಯ ವಯಸ್ಸು 17ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೇಜೋಸ್ ಜನಿಸಿದಾಗ, ಆತನ ತಾಯಿಯ ವಯಸ್ಸು 17

ಆಗಸ್ಟ್ 26 ರಂದು, ಅಮೆಜಾನ್‌ನ ಪ್ರತಿ ಷೇರಿಗೆ ಶೇಕಡಾ 2.3ರಷ್ಟು ಏರಿಕೆಯಾಗಿ, 3,423 ಡಾಲರ್‌ಗೆ ತಲುಪಿದೆ, ಈ ಪ್ರಕ್ರಿಯೆಯಲ್ಲಿ ಬೆಜೋಸ್ ಸಂಪತ್ತು 200 ಬಿಲಿಯನ್ ನಿವ್ವಳ ಮೌಲ್ಯವನ್ನು ತಲುಪಿದೆ.

Jeff Bezos becomes the first person in the world to hit a net worth of $200 billion

ಬೇಜೋಸ್‌ರ ನಿವ್ವಳ ಮೌಲ್ಯವು ನೈಕ್, ಮೆಕ್‌ಡೊನಾಲ್ಡ್ಸ್ ಮತ್ತು ಪೆಪ್ಸಿಗಿಂತ ಹೆಚ್ಚಾಗಿದೆ. ಈ ಮೂರು ಕಂಪನಿಗಳ ಮೌಲ್ಯ 139 ಬಿಲಿಯನ್ ಡಾಲರ್ ಮತ್ತು 191 ಬಿಲಿಯನ್ ಡಾಲರ್‌ಗಳಷ್ಟಿದೆ ಎಂದು ದಿ ರಾಪ್(The Wrap's) ವರದಿ ತಿಳಿಸಿದೆ.

ಆಗಸ್ಟ್ 27 ರ ವೇಳೆಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಸಂಪತ್ತು 204.6 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಫೋರ್ಬ್ಸ್ ವರದಿಯ ಪ್ರಕಾರ, ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಬಿಲ್‌ಗೇಟ್ಸ್‌ಗಿಂತ , 90 ಬಿಲಿಯನ್ ಡಾಲರ್ ಹೆಚ್ಚಿನ ಶ್ರೀಮಂತರಾಗಿದ್ದಾರೆ. ಬಿಲ್‌ಗೇಟ್ಸ್‌ ಪ್ರಸ್ತುತ 116.1 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.

English summary
Amid a pandemic which has hurt businesses and economies alike, CEO of Amazon Jeff Bezos on August 26 became the first-ever individual to hit a net worth of $200 billion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X