ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆಯಲ್ಲಿ 304 ಕೋಟಿ ರೂಪಾಯಿ ಕಳೆದುಕೊಂಡ ಜಪಾನ್‌ನ ಉದ್ಯಮಿ

|
Google Oneindia Kannada News

ಟೋಕಿಯೊ, ಸೆಪ್ಟೆಂಬರ್ 7: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಪರಿಣಾಮವು ಷೇರುಪೇಟೆಯಲ್ಲಿ ನಕಾರಾತ್ಮಕವಾಗಿ ಪ್ರಭಾವ ಬೀರಿದ್ದು, ಷೇರುಗಳ ವಹಿವಾಟಿನಿಂದ ತಾನು 4.4 ಬಿಲಿಯನ್ ಯೆನ್ (41.4 ಮಿಲಿಯನ್ ಡಾಲರ್)ಕಳೆದುಕೊಂಡಿದ್ದೇನೆ ಎಂದು ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

"ತೀವ್ರ ಬೇಸರ" ಎಂಬ ಟ್ವೀಟ್ ನಲ್ಲಿ, ಆನ್‌ಲೈನ್ ಫ್ಯಾಶನ್ ಚಿಲ್ಲರೆ ವ್ಯಾಪಾರಿ, ZoZO ಸಂಸ್ಥೆಯ ಸ್ಥಾಪಕ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಾಹಕ ಯುಸಾಕು ಮೇಜಾವಾ ಅವರು ದಿನದ ವಹಿವಾಟಿನಲ್ಲಿ ಭಾರೀ ಹಣವನ್ನು ಕಳೆದುಕೊಂಡಿದ್ದೇನೆ ಎಂದು ಹೇಳಿದರು. ಭಾರತದ ರೂಪಾಯಿಗಳಲ್ಲಿ ಯುಸಾಕು ಸುಮಾರು 304 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಒಂದೇ ತಿಂಗಳಲ್ಲಿ ಹೂಡಿಕೆದಾರರ ಹಣವನ್ನ ದ್ವಿಗುಣಗೊಳಿಸಿದ ಷೇರು: ಯಾವುದು ಗೊತ್ತೆ?ಒಂದೇ ತಿಂಗಳಲ್ಲಿ ಹೂಡಿಕೆದಾರರ ಹಣವನ್ನ ದ್ವಿಗುಣಗೊಳಿಸಿದ ಷೇರು: ಯಾವುದು ಗೊತ್ತೆ?

ಬ್ಲೂಮ್‌ಬರ್ಗ್ ಮಾಹಿತಿಯ ಪ್ರಕಾರ ಈ ವರ್ಷ ನಿವ್ವಳ ಮೌಲ್ಯವು ಸುಮಾರು 215 ಮಿಲಿಯನ್‌ ಡಾಲರ್‌ ಕುಸಿದು 3.5 ಬಿಲಿಯನ್‌ಗೆ ತಲುಪಿದೆ.

Japanese Billionaire Had Lost 41 Million Dollar By Trading Stocks

ಈ ವರ್ಷದ ಆರಂಭದಲ್ಲಿ, 2023 ರಲ್ಲಿ ಎಲೋನ್ ಮಸ್ಕ್‌ನ ರಾಕೆಟ್‌ ಯೋಜನೆಯಲ್ಲಿ ತನ್ನ ಚಂದ್ರನ ಪ್ರವಾಸ ಯೋಜನೆಗೆ ಸಂಗಾತಿಯನ್ನಾಗಿ ಹುಡುಕುತ್ತಿದ್ದೇನೆ ಎಂದು ಮೇಜಾವಾ ಹೇಳಿದರು. ಅಲ್ಲದೆ ಈ ಕುರಿತು ಮಹಿಳಾ ಸಂದರ್ಶಕರನ್ನು ನೇಮಿಸಿದ್ದರು. ಆದರೆ ಈ ಪ್ರಕ್ರಿಯೆ ಮೇಲೆ ಹಿನ್ನಡೆ ಎದುರಾದ ನಂತರ ಅವರು ಯೋಜನೆಯನ್ನು ರದ್ದುಗೊಳಿಸಿದರು.

1 ವರ್ಷದ ಹಿಂದೆ 43 ರೂಪಾಯಿ ಮೌಲ್ಯದ ಷೇರು, ಇಂದು 573 ರೂಪಾಯಿ: ಯಾವ ಕಂಪನಿ ಷೇರು ಗೊತ್ತೆ?1 ವರ್ಷದ ಹಿಂದೆ 43 ರೂಪಾಯಿ ಮೌಲ್ಯದ ಷೇರು, ಇಂದು 573 ರೂಪಾಯಿ: ಯಾವ ಕಂಪನಿ ಷೇರು ಗೊತ್ತೆ?

ಷೇರು ನಷ್ಟದ ಕುರಿತು ಅವರ ಇತ್ತೀಚಿನ ಟ್ವೀಟ್‌ಗೆ ಫಾಲೋವರ್ಸ್ ಮಿಶ್ರ ಪ್ರತಿಕ್ರಿಯೆಗಳನ್ನು ತೋರಿಸಿದ್ದಾರೆ. ಕೆಲವರು ಅಯ್ಯೋ ಪಾಪ ಎಂದರೆ, ಮತ್ತೆ ಕೆಲವರು ನಷ್ಟದ ವ್ಯಾಪ್ತಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

English summary
A Japanese billionaire said on Twitter that he had lost 4.4 billion yen ($41.4 million) by trading stocks amid volatile swings triggered by the covid pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X