ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

80 ಟನ್ ಚಿನ್ನವನ್ನು ಮಾರಾಟ ಮಾಡಿದ ಜಪಾನ್!

|
Google Oneindia Kannada News

ಟೊಕಿಯೋ, ಡಿಸೆಂಬರ್ 17: ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟನ್ನು ಎದುರಿಸಲು ಜಪಾನ್ ತನ್ನ ಬೃಹತ್ ಆರ್ಥಿಕ ಪ್ಯಾಕೇಜ್‌ಗಾಗಿ ಹಣವನ್ನು ಹೊಂದಿಸಲು ಸರ್ಕಾರದ ನಾಣ್ಯಗಳನ್ನು ತಯಾರಿಸಲು ಬಳಸುವ 80 ಟನ್‌ ಚಿನ್ನವನ್ನು ಮಾರಾಟ ಮಾಡಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಸಾಂಕ್ರಾಮಿತ ಪ್ರೇರಿತ ಆರ್ಥಿಕ ಹಿಂಜರಿತದಿಂದಾಗಿ ಉಂಟಾದ ಆದಾಯ ಕೊರತೆ, ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಹೆಚ್ಚುತ್ತಿರುವ ಖರ್ಚನ್ನು ಸರಿದೂಗಿಸಲು ತೆರಿಗೆಯೇತರ ಆದಾಯವನ್ನು ಪಡೆಯಲು ಹಣಕಾಸು ಸಚಿವಾಲಯ ಒತ್ತಡದಲ್ಲಿದ್ದು, 80 ಟನ್‌ ಚಿನ್ನವನ್ನು ಮಾರಾಟ ಮಾಡಿದೆ ಎಂದು ಸರ್ಕಾರಿ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಜಗತ್ತು ಮಾತನಾಡಿತು, ಆದರೆ ಜಪಾನ್ ಮಾಡಿ ತೋರಿಸಿತು..!ಜಗತ್ತು ಮಾತನಾಡಿತು, ಆದರೆ ಜಪಾನ್ ಮಾಡಿ ತೋರಿಸಿತು..!

ಕೇಂದ್ರ ಸಚಿವಾಲಯವು ಸಾಮಾನ್ಯವಾಗಿ ವಿವಿಧ ಮೂಲಗಳ ಆದಾಯ ಮತ್ತು ಮೀಸಲುಗಳನ್ನು ಮತ್ತು ಬ್ಯಾಂಕ್ ಆಫ್ ಜಪಾನ್ ಸೇರಿದಂತೆ ಇತರೆ ಏಜೆನ್ಸಿಗಳಿಂದ ಹಣಕಾಸು ವಾರ್ಷಿಕ ಮುಕ್ತಾಯಕ್ಕೆ ಬರುವ ಹಣವು ರಾಜ್ಯ ಬೊಕ್ಕಸಕ್ಕೆ ತಲುಪುತ್ತದೆ. ಆದರೆ ಈ ಸಮಯದಲ್ಲಿ ಸರ್ಕಾರವು ಅಪರೂಪದ ರೀತಿಯಲ್ಲಿ ಕೇಂದ್ರ ಬ್ಯಾಂಕ್‌ ಅನ್ನು ಒಳಗೊಂಡ ಚಿನ್ನವನ್ನು ಆಶ್ರಯಿಸಿದೆ.

Japan Sells 80 Tons Of Gold To Balance Huge Stimulus Package

ಅಂತರರಾಷ್ಟ್ರೀಯ ವ್ಯವಹಾರಗಳ ಉಸ್ತುವಾರಿ ಸಚಿವಾಲಯದ ವಿಭಾಗವು ಡಾಲರ್ ನಿಕ್ಷೇಪಗಳ ಒಂದು ಭಾಗವನ್ನು ಬ್ಯಾಂಕ್ ಆಫ್ ಜಪಾನ್‌ಗೆ ಮಾರಾಟ ಮಾಡಿತು. ಅದು ಪಡೆದ ಯೆನ್‌ನೊಂದಿಗೆ, ಸಾಲ ನಿರ್ವಹಣೆಯ ಉಸ್ತುವಾರಿ ಸಚಿವಾಲಯದ ಮತ್ತೊಂದು ವಿಭಾಗದಿಂದ ಚಿನ್ನವನ್ನು ಖರೀದಿಸಿತು.

ಚಿನ್ನದ ಮಾರಾಟದಿಂದ, ಸಾಲ ನಿರ್ವಹಣೆಯ ಉಸ್ತುವಾರಿ ವಿಭಾಗವು 500 ಬಿಲಿಯನ್ ಯೆನ್ (4.84 ಬಿಲಿಯನ್ ಡಾಲರ್) ಆದಾಯವನ್ನು ಗಳಿಸಿತು. ಇದನ್ನು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹೊಸ ನಿಧಿಗೆ ಹಣಕಾಸು ಒದಗಿಸಲು ಬಳಸಲಾಗುತ್ತದೆ.

English summary
Japan has sold 80 tons of gold used for minting coins to another arm of the government to fund part of its huge Stimulus Package to combat the coronavirus crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X