ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಕಾರಿ ಬ್ಯಾಂಕುಗಳಿಗೆ ಬ್ಯಾಂಕರ್ ಆಗಲಿದೆ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಬೆಂಗಳೂರು ಮೂಲದ ಸಣ್ಣ ಹಣಕಾಸು ಬ್ಯಾಂಕ್ ಆಗಿರುವ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಆರ್‌ಬಿಐನ ಬ್ಯಾಂಕ್ ಪ್ರಾಯೋಜಕತ್ವ ಕಾರ್ಯಕ್ರಮದ ಅಡಿಯಲ್ಲಿ ಆಯಾ ಬ್ಯಾಂಕ್‍ಗಳಿಗೆ ಡಿಜಿಟಲ್ ಮೂಲಸೌಕರ್ಯ ಮತ್ತು ಪಾವತಿ ಸೇವೆಗಳನ್ನು ಒದಗಿಸಲು ಲಕ್ನೋ ಮೂಲದ ಎಚ್‍ಸಿಬಿಎಲ್ ಸಹಕಾರ ಬ್ಯಾಂಕ್ ಮತ್ತು ಮೈಸೂರಿನ ಮೈಸೂರು ಮರ್ಚೆಂಟ್ಸ್-ಕೋ-ಆಪರೇಟಿವ್ ಬ್ಯಾಂಕ್ ಜತೆಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಮೈತ್ರಿಯು ಸಹಕಾರಿ ಬ್ಯಾಂಕುಗಳ ಗ್ರಾಹಕರಿಗೆ ಜನ ಎಸ್‍ಎಫ್‍ಬಿಯಿಂದ ನಡೆಸಲ್ಪಡುವ ಡಿಜಿಟಲ್ ವಹಿವಾಟುಗಳನ್ನು ಆನಂದಿಸಲು ಸಹಾಯ ಮಾಡುತ್ತದೆ.

ಎಚ್‍ಸಿಬಿಎಲ್ ಸಹಕಾರಿ ಬ್ಯಾಂಕ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಹಯೋಗದೊಂದಿಗೆ ಎಟಿಎಂ, ಪಿಒಎಸ್ ಮತ್ತು ಇ-ಕಾಮರ್ಸ್ ಸೇವೆಗಳನ್ನು ತನ್ನ ಗ್ರಾಹಕರಿಗೆ ವಿಸ್ತರಿಸಬಹುದಾಗಿದೆ. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇದರ ಜತೆಗೆ ಮೊದಲ ಬಾರಿಗೆ ಸಹಕಾರಿ ಬ್ಯಾಂಕಿನೊಂದಿಗೆ ಐಎಂಪಿಎಸ್ ಸೇವೆಗಳನ್ನು ಒದಗಿಸಲು ತನ್ನ ಗ್ರಾಹಕರಿಗೆ ತಡೆರಹಿತ ಪಾವತಿ ಆಯ್ಕೆಗಳನ್ನು ನೀಡುತ್ತಿದೆ.

ಮೈಸೂರು ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಜೊತೆಗಿನ ಒಪ್ಪಂದದ ಅಡಿಯಲ್ಲಿ, ಜನ ಎಸ್‍ಎಫ್‍ಬಿ ಬ್ರಾಂಡೆಡ್ ಡೆಬಿಟ್ ಕಾರ್ಡ್‍ಗಳನ್ನು ಅದರ ಗ್ರಾಹಕರಿಗೆ ವಿತರಿಸಲಿದೆ. ಹೆಚ್ಚುವರಿಯಾಗಿ, ಎಟಿಎಂ, ಪಿಒಎಸ್ ಮತ್ತು ಇ-ಕಾಮರ್ಸ್ ಸೇವೆಗಳಂತಹ ಸೇವೆಗಳನ್ನು ಕೂಡಾ ಅವರಿಗೆ ವಿಸ್ತರಿಸಲಾಗಿದೆ.

Jana Small Finance Bank becomes a banker to Co-operative banks

ಈ ಸಹಯೋಗವು ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಗ್ರಾಮೀಣ ಗ್ರಾಹಕರು ನಿಜವಾದ ಅರ್ಥದಲ್ಲಿ ವಿತ್ತೀಯ ಸೇರ್ಪಡೆಯ ವ್ಯಾಪ್ತಿಗೆ ಬರುವಂತೆ ಮಾಡುವಲ್ಲಿ ನೆರವಾಗಲಿದೆ. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಡಿಜಿಟಲ್ ಸಾಮರ್ಥ್ಯವು ಈಗ ಅದರ ಎಲ್ಲ ಪಾಲುದಾರ ಬ್ಯಾಂಕುಗಳಿಗೆ ಲಭ್ಯವಿರುತ್ತದೆ.

ಈ ಸಹಯೋಗದ ಕುರಿತು ಮಾತನಾಡಿದ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‍ನ ಎಂಡಿ ಮತ್ತು ಸಿಇಒ ಅಜಯ್ ಕನ್ವಲ್, ''ಎಚ್‍ಸಿಬಿಎಲ್ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಮೈಸೂರು ಮಚೆರ್ಂಟ್ಸ್ ಕೋ-ಆಪರೇಟಿವ್ ಬ್ಯಾಂಕ್‍ನೊಂದಿಗೆ ಕೈಜೋಡಿಸುವುದು ಅದ್ಭುತ ಅನುಭವವಾಗಿದೆ. ಸೇವಾ ವಂಚಿತ ವರ್ಗಕ್ಕೆ ಸ್ಮಾರ್ಟ್ ಮತ್ತು ಸರಳ ಬ್ಯಾಂಕಿಂಗ್ ಪರಿಹಾರಗಳನ್ನು ಒದಗಿಸುವ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ನಮ್ಮ ಬದ್ಧತೆಯಾಗಿದೆ. ಈ ಮೂಲಕ ವಿಸ್ತೃತ ಜನ ಸಮುದಾಯಕ್ಕೆ ಬ್ಯಾಂಕಿಂಗ್ ಡಿಜಿಟಲ್ ಬ್ಯಾಂಕಿಂಗ್ ತಲುಪುವಂತೆ ಮಾಡುವುದು ನಮ್ಮ ಉದ್ದೇಶ. ಈ ಪಾಲುದಾರಿಕೆಯು ಬ್ಯಾಂಕಿಂಗ್ ಉತ್ಪನ್ನಗಳನ್ನು ಎಲ್ಲರಿಗೂ ಸುಲಭವಾಗಿ ತಲುಪುವಂತೆ ಮಾಡಲು ನಮ್ಮ ಪ್ರಾಯೋಜಕ ಬ್ಯಾಂಕ್ ನೆಟ್‍ವರ್ಕ್ ಅನ್ನು ಬೆಳೆಸುವ ಇನ್ನೊಂದು ಪ್ರಯತ್ನವಾಗಿದೆ" ಎಂದು ನುಡಿದರು,

ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ಎಚ್‍ಸಿಬಿಎಲ್ ಸಹಕಾರಿ ಬ್ಯಾಂಕಿನ ಸಿಇಒ ಎಕೆ ಶ್ರೀವಾಸ್ತವ, "ನಮ್ಮ ಗ್ರಾಹಕರಿಗೆ 'ರುಪೇ ಡೆಬಿಟ್ ಕಾರ್ಡ್' ಸೌಲಭ್ಯವನ್ನು ಒದಗಿಸಲು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕಿನೊಂದಿಗೆ ಸೇರಿಕೊಂಡಿರುವುದಕ್ಕೆ ನಮಗೆ ಸಂತೋಷವಾಗಿದೆ. ನಾವು ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲು ನಿಜವಾಗಿಯೂ ಸಹಾಯ ಮಾಡುವಂಥ ಐಎಂಪಿಎಸ್ ಮತ್ತು ಇ-ಕಾಮರ್ಸ್ ವಹಿವಾಟುಗಳನ್ನು ಪರಿಚಯಿಸುವ ಯೋಜನೆಗಳ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಸೇವೆಗಳು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ನಮ್ಮ ಎಲ್ಲ ಗ್ರಾಹಕರಿಗೆ ಅನುಕೂಲಕರವಾಗಿ ಮತ್ತು ಯಾವುದೇ ಅಡೆತಡೆ ಇಲ್ಲದೇ ಹಣ ವರ್ಗಾವಣೆಯನ್ನು ಮಾಡಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿದರು.

English summary
Jana Small Finance Bank, a Bengaluru-based small finance bank, signed an MOU with HCBL Co-operative Bank, Lucknow and Mysore Merchants Co-operative Bank, Mysore to provide digital infrastructure and payments services to the respective banks under the bank sponsorship programme of RBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X