ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ್‌ಧನ್ ಯೋಜನೆಯಡಿಯಲ್ಲಿ 40 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆ ಓಪನ್

|
Google Oneindia Kannada News

ನವದೆಹಲಿ, ಆಗಸ್ಟ್‌ 04: ಸುಮಾರು ಆರು ವರ್ಷಗಳ ಹಿಂದೆ ನರೇಂದ್ರ ಮೋದಿ ಸರ್ಕಾರವು ಪ್ರಾರಂಭಿಸಿದ ಸರ್ಕಾರದ ಪ್ರಮುಖ ಹಣಕಾಸು ಸೇರ್ಪಡೆ ಪ್ರಧಾನ ಮಂತ್ರಿ ಜನ ಧನ್ ಯೋಜನೆ (ಪಿಎಂಜೆಡಿವೈ) ಅಡಿಯಲ್ಲಿ ಇದುವರೆಗೂ 40 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಈ ಯೋಜನೆಯ 40.05 ಕೋಟಿ ಫಲಾನುಭವಿಗಳಿದ್ದಾರೆ ಮತ್ತು ಜನ ಧನ್ ಬ್ಯಾಂಕ್ ಖಾತೆಗಳಲ್ಲಿ ಠೇವಣಿ 1.30 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ.

ಬ್ಯಾಂಕ್ ಆಫ್ ಇಂಡಿಯಾ ತ್ರೈಮಾಸಿಕ ಲಾಭ ಮೂರು ಪಟ್ಟು ಏರಿಕೆಬ್ಯಾಂಕ್ ಆಫ್ ಇಂಡಿಯಾ ತ್ರೈಮಾಸಿಕ ಲಾಭ ಮೂರು ಪಟ್ಟು ಏರಿಕೆ

"ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಉಪಕ್ರಮದ ಅಡಿಯಲ್ಲಿ ಸಾಧಿಸಿದ ಮತ್ತೊಂದು ಮೈಲಿಗಲ್ಲು ಇದಾಗಿದ್ದು, ಪಿಎಂಜೆಡಿವೈ ಯೋಜನೆಯಡಿಯಲ್ಲಿ ತೆರೆಯಲಾದ ಒಟ್ಟು ಖಾತೆಗಳು 40 ಕೋಟಿ ಗಡಿ ದಾಟಿದೆ. ಕೊನೆಯ ಮೈಲಿಗೆ ಆರ್ಥಿಕ ಸೇರ್ಪಡೆ ತೆಗೆದುಕೊಳ್ಳಲು ಬದ್ಧವಾಗಿದೆ" ಎಂದು ಹಣಕಾಸು ಸೇವೆಗಳ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ.

Jan Dhan Yojana: Bank Accounts Crosses 40 Crore Mark

ಪಿಎಂಜೆಡಿವೈ ಆರನೇ ವಾರ್ಷಿಕೋತ್ಸವದ ಮುನ್ನ ಈ ಸಾಧನೆ ಕಂಡು ಬಂದಿದೆ. ದೇಶದ ಜನರಿಗೆ ಬ್ಯಾಂಕಿಂಗ್ ಸೌಲಭ್ಯಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆಗಸ್ಟ್ 28, 2014 ರಂದು ಪ್ರಾರಂಭಿಸಲಾಯಿತು.

ಪಿಎಂಜೆಡಿವೈ ಅಡಿಯಲ್ಲಿ ತೆರೆಯಲಾದ ಖಾತೆಗಳು ರುಪೇ ಪೇ ಡೆಬಿಟ್ ಕಾರ್ಡ್ ಮತ್ತು ಓವರ್‌ಡ್ರಾಫ್ಟ್‌ನ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆಗಳಾಗಿವೆ. ಬಿಎಸ್‌ಬಿಡಿ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಕಾಯ್ದುಕೊಳ್ಳುವ ಅಗತ್ಯವಿಲ್ಲ.

English summary
More than 40 crore bank accounts have been opened under the government's flagship financial inclusion drive Pradhan Mantri Jan Dhan Yojana (PMJDY).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X