ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿಸಿ ಇನ್ಫೋಟೆಕ್‍ನಿಂದ ಡಿಜಿಟಲ್ ವರ್ಕ್‍ಫೋರ್ಸ್ ಅಳವಡಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಐಟಿಸಿ ಲಿಮಿಟೆಡ್ ಒಡೆತನದ ಅಂಗಸಂಸ್ಥೆಯಾಗಿರುವ ಜಾಗತಿಕ ತಂತ್ರಜ್ಞಾನ ಸೇವೆಗಳು ಮತ್ತು ಪರಿಹಾರಗಳನ್ನು ಪೂರೈಸುವ ಐಟಿಸಿ ಇನ್ಫೋಟೆಕ್, ನೌಕರರಿಗೆಂದೇ ಡಿಜಿಟಲ್ ಬಿಒಟಿಯನ್ನು ಪರಿಚಯಿಸಿದೆ. ವಿಶ್ವದ ಮುಂಚೂಣಿಯಲ್ಲಿರುವ ಆರ್ ಪಿಎ ಪ್ಲಾಟ್‍ಫಾರ್ಮ್ ಪೂರೈಕೆದಾರ ಸಂಸ್ಥೆಗಳಲ್ಲಿ ಒಂದಾಗಿರುವ ಆಟೋಮೇಶನ್ ಎನಿವೇರ್ ಸಹಯೋಗದಲ್ಲಿ ಐಟಿಸಿ ಇನ್ಫೋಟೆಕ್ ಈ ವಿನೂತನವಾದ ಡಿಜಿಟಲ್ ವರ್ಕ್‍ಫೋರ್ಸ್ ಸಲ್ಯೂಷನ್ ಅನ್ನು ಪರಿಚಯಿಸಿದೆ.

ಇನ್ಫೋಸಿಸ್ 'ಆರೋಹಣ' ಇನ್ನೋವೇಷನ್ ಪ್ರಶಸ್ತಿಗೆ ಅರ್ಜಿ ಆಹ್ವಾನಇನ್ಫೋಸಿಸ್ 'ಆರೋಹಣ' ಇನ್ನೋವೇಷನ್ ಪ್ರಶಸ್ತಿಗೆ ಅರ್ಜಿ ಆಹ್ವಾನ

ಈ ಉಪಕ್ರಮದ ಬಗ್ಗೆ ಮಾತನಾಡಿದ ಐಟಿಸಿ ಇನ್ಫೋಟೆಕ್‍ನ ವ್ಯವಸ್ಥಾಪಕ ನಿರ್ದೇಶಕ & ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದೀಪ್ ಸಿಂಗ್ ಅವರು, "ಮುಂಚೂಣಿಯಲ್ಲಿರುವ ತಂತ್ರಜ್ಞಾನ ಕಂಪನಿಯಾಗಿರುವ ಐಟಿಸಿ ಇನ್ಫೋಟೆಕ್‍ನಲ್ಲಿ ಮಾನವ ಸಾಮರ್ಥ್ಯವನ್ನು ವೃದ್ಧಿ ಮಾಡುವ ದಿಸೆಯಲ್ಲಿ ಈ ಉಪಕ್ರಮವನ್ನು ಪರಿಚಯಿಸಿದ್ದೇವೆ. ಆಟೋಮೇಶನ್ ಅನ್ನು ಅಳವಡಿಸಿಕೊಳ್ಳಲು ಬದ್ಧತೆ ತೋರುವುದರಲ್ಲಿ ಮುಂಚೂಣಿಯಲ್ಲಿರುವ ನಾವು ನಮ್ಮ ಮಾನವ ಶಕ್ತಿಯ ಡಿಜಿಟಲ್ ವೃದ್ಧಿಗೆ ಅಪಾರ ಸಾಮರ್ಥ್ಯವನ್ನು ಹೊಂದಿದ್ದೇವೆ. ಈ ಉಪಕ್ರಮವು ಗ್ರಾಹಕರ ಸೇವೆಯಲ್ಲಿ ಅತ್ಯಧಿಕ ಕಾರ್ಯದಕ್ಷತೆಯನ್ನು ನೀಡುವಲ್ಲಿ ಸಹಕಾರಿಯಾಗುತ್ತದೆ. ಈ ಉಪಕ್ರಮವನ್ನು ಅಳವಡಿಸಿಕೊಳ್ಳಲು ನಾವು ಆಟೋಮೇಶನ್ ಎನಿವೇರ್ ಜತೆ ಸಹಯೋಗ ಹೊಂದುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಈ ಮೂಲಕ ಭವಿಷ್ಯದಲ್ಲಿ ನಿಜವಾದ ಡಿಜಿಟಲ್ ಮಾನವಶಕ್ತಿಯನ್ನು ಸೃಷ್ಟಿಸಲಿದ್ದೇವೆ" ಎಂದರು.

ITC Infotech and ‘Automation Anywhere’ Pioneer Digital Workforce

ಆಟೋಮೇಶನ್ ಎನಿವೇರ್ ನ ಈ ಡಿಜಿಟಲ್ ವರ್ಕ್‍ಫೋರ್ಸ್ ಪ್ಲಾಟ್‍ಫಾರ್ಮ್‍ನ್ನು ಐಟಿಸಿ ಇನ್ಫೋಟೆಕ್ ತನ್ನ ಜಾಗತಿಕ ಮಾನವಶಕ್ತಿ ಸಾಮಥ್ರ್ಯ ವೃದ್ಧಿಗೆ ಬಳಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ವೈಯಕ್ತಿಕ ಡಿಜಿಟಲ್ ಬಿಒಟಿಗಳನ್ನು ಹೊಂದುವ ಮೂಲಕ ನೌಕರರು ತಮ್ಮ ಪುನರಾವರ್ತಿತ ಕಾರ್ಯಗಳನ್ನು ಸ್ವಯಂಚಾಲಿತವಾಗಿ ಕಾರ್ಯರೂಪಕ್ಕೆ ತರಲು ಅನುವು ಮಾಡಿಕೊಡುತ್ತದೆ. ಒಟ್ಟಾರೆ ಪರಿಹಾರದ ಭಾಗವಾಗಿ, ಐಟಿಸಿ ಇನ್ಫೋಟೆಕ್ ಮತ್ತು ಆಟೋಮೇಶನ್ ಎನಿವೇರ್ ಸಹಯೋಗದಲ್ಲಿ ಐಟಿಸಿ ಇನ್ಫೋಟೆಕ್‍ನ ವಿವಿಧ ಉದ್ಯೋಗ ಪಾತ್ರಗಳು, ಕಾರ್ಯಗಳು ಮತ್ತು ವಿಭಾಗಗಳಿಗೆ ಕಸ್ಟಮೈಸ್ಡ್ ಬಿಒಟಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಆಟೋಮೇಶನ್ ಎನಿವೇರ್‍ನ ಇವಿಪಿ ಐಎಂಇಎ ಮಿಲನ್ ಶೇಥ್ ಅವರು ಮಾತನಾಡಿ, "ಆಟೋಮೇಶನ್ ಎನಿವೇರ್‍ನಲ್ಲಿ ನಮ್ಮ ದೂರದೃಷ್ಟಿಯೆಂದರೆ ವಿಶ್ವದ ಪ್ರತಿಯೊಬ್ಬ ನೌಕರನೂ ಸಾಫ್ಟ್‍ವೇರ್ ಆಧಾರಿತ ಬಿಒಟಿ ಅಥವಾ ಡಿಜಿಟಲ್ ವರ್ಕರ್ ಆಗಿ ಕೆಲಸ ಮಾಡಬೇಕೆಂಬುದಾಗಿದೆ. ಈ ಮೂಲಕ ನೌಕರರು ಮತ್ತಷ್ಟು ಉತ್ಪಾದಕವಾಗುವಂತೆ ಮಾಡುವುದಾಗಿದೆ. ಈ ನಿಟ್ಟಿನಲ್ಲಿ ಐಟಿಸಿ ಇನ್ಫೋಟೆಕ್‍ನ ಪ್ರವರ್ತಕ ಯೋಜನೆಗಳು ಇಂಟಲಿಜೆಂಟ್ ಡಿಜಿಟಲ್ ವರ್ಕ್‍ಫೋರ್ಸ್ ರಚಿಸುವ ನಮ್ಮ ಭರವಸೆಯೊಂದಿಗೆ ನಿಕಟ ಹೊಂದಾಣಿಕೆಯನ್ನು ಹೊಂದಲಿದೆ'' ಎಂದು ತಿಳಿಸಿದರು.

English summary
ITC Infotech will create an Intelligent Digital Workforce to ‘Amplify Human Potential’ and foster employee centricity in the new digital world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X