ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ಟೆಕ್ಕಿಗಳಿಂದ ಹೂಡಿಕೆ ಹೆಚ್ಚು

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಕರ್ನಾಟಕದಲ್ಲಿ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡುವ ಬಹುತೇಕ ಮಂದಿ ಪದವೀಧರರು ಮತ್ತು ಐಟಿ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಿರುವವರೇ ಆಗಿದ್ದಾರೆ. ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆಯಾಗುತ್ತಿರುವುದು ಗಣನೀಯವಾಗಿ ಹೆಚ್ಚಿದೆ ಎಂದು ಕಾಯಿನ್‍ಡಿಸಿಎಕ್ಸ್(CoinDCX) ಅಂಕಿ ಅಂಶ ಮೂಲಕ ವರದಿ ನೀಡಿದೆ.

ಈ ಅಂಕಿ ಅಂಶಗಳ ಪ್ರಕಾರ, ಬಹುಪಾಲು ಹೂಡಿಕೆದಾರರು 35 ವರ್ಷಕ್ಕಿಂತ ಕೆಳಗಿನವರು. ಕ್ರಿಪ್ಟೊಕರೆನ್ಸಿಯಲ್ಲಿ ಆರಂಭಿಕವಾಗಿ ಹೂಡಿಕೆ ಮಾಡುತ್ತಿರುವವರು ವಂಚನೆಗೆ ಒಳಗಾಗಬಾರದು ಎನ್ನುವುದನ್ನು ಖಾತರಿಪಡಿಸುವ ಸಲುವಾಗಿ, ಕಾಯಿನ್‍ಡಿಸಿಎಕ್ಸ್, ಅತ್ಯಧಿಕ ಸುರಕ್ಷಾ ಲಕ್ಷಣಗಳನ್ನು ಹೊಂದಿರುವ ಕ್ರಿಪ್ಟೊ ಆಧರಿತ ಸುಲಭ ಹೂಡಿಕೆ ಪ್ಲಾಟ್‍ಫಾರಂ ಕಾಯಿನ್‍ಡಿಸಿಎಕ್ಸ್ ಗೋ ಆರಂಭಿಸಿದೆ.

''ಯುಎಸ್ ವಿರುದ್ಧ ಚೀನಾದ ವಾಣಿಜ್ಯ ಅಸ್ತ್ರವೇ ಬಿಟ್ ಕಾಯಿನ್''''ಯುಎಸ್ ವಿರುದ್ಧ ಚೀನಾದ ವಾಣಿಜ್ಯ ಅಸ್ತ್ರವೇ ಬಿಟ್ ಕಾಯಿನ್''

ಕಾಯಿನ್‍ಡಿಸಿಎಕ್ಸ್ ಸಿಇಓ ಸುಮಿತ್ ಗುಪ್ತಾ ಅವರ ಪ್ರಕಾರ, ಬೆಂಗಳೂರು, ಚೆನ್ನೈ ಮತ್ತು ಹೈದ್ರಾಬಾದ್ ನಗರಗಳು ಕ್ರಿಪ್ಟೋ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಪ್ರಮಾಣ ಹೆಚ್ಚುತ್ತಿರುವ ಕೆಲ ನಗರಗಳಾಗಿವೆ. ಈ ನಗರಗಳ ಮಹಿಳೆಯರು ಕೂಡಾ ಹೆಚ್ಚು ಹೆಚ್ಚಾಗಿ ಕ್ರಿಪ್ಟೊ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತಿದ್ದು, ಪೈಚಾರ್ಟ್‍ನ 20% ದಷ್ಟು ಮಂದಿ ಮಹಿಳೆಯರು.

IT Professionals are the key crypto investors in Karnataka: CoinDCX

ಕಾಯಿನ್‍ಡಿಸಿಎಕ್ಸ್ ಇತ್ತೀಚೆಗೆ ಕಾಯಿನ್‍ಡಿಸಿಎಕ್ಸ್ ಗೋ ಎಂಬ ಆ್ಯಪ್ ಬಿಡುಗಡೆ ಮಾಡಿದ್ದು, ಇದರ ಮೂಲಕ ಕ್ರಿಪ್ಟೊ ಬಗ್ಗೆ ಜ್ಞಾನ ಹೊಂದಿಲ್ಲದವರು ಮತ್ತು ತಮ್ಮ ಹೂಡಿಕೆಗಳು ಸುರಕ್ಷಿತ ಮತ್ತು ಸುಭದ್ರವಾಗಿರಬೇಕು ಎಂಬ ಕಳಕಳಿ ಹೊಂದಿರುವವರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದೆ.

ಕಾಯಿನ್‍ಡಿಸಿಎಕ್ಸ್ ಗೋ ಆ್ಯಪ್, ಆ್ಯಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳಿಗೆ ಲಭ್ಯವಿದ್ದು, ಇದನ್ನು ಕ್ರಿಪ್ಟೊ ಕ್ಷೇತ್ರಕ್ಕೆ ಆಗಮಿಸುವ ಹೊಸ ಬಳಕೆದಾರರಿಗಾಗಿ ಇದನ್ನು ಮುಕ್ತಗೊಳಿಸಿದ ಬಳಿಕ 1,50,000ಕ್ಕೂ ಅಧಿಕ ಬಾರಿ ಡೌನ್‍ಲೋಡ್ ಮಾಡಿಕೊಳ್ಳಲಾಗಿದೆ.

ಇಂದು ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ನಾಲ್ಕು ಸಾವಿರಕ್ಕೂ ಅಧಿಕ ಕ್ರಿಪ್ಟೊ ಆಸ್ತಿಗಳ ಪೈಕಿ ಅತ್ಯುತ್ತಮ ಎನಿಸಿದ 14ನ್ನು ಮಾತ್ರ ಈ ಆ್ಯಪ್ ಬಳಕೆದಾರರಿಗಾಗಿ ಪ್ಲಾಟ್‍ಫಾರಂನಲ್ಲಿ ಸೇರಿಸಿಕೊಂಡಿದೆ.

ಕೋವಿಡ್-19 ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಕ್ರಿಪ್ಟೊ ಉದ್ಯಮ ಮಹತ್ವದ ವಹಿವಾಟು ಬೆಳವಣಿಗೆಯನ್ನು ಕಂಡಿದೆ. ಹೆಚ್ಚು ಹೆಚ್ಚು ಜಾಗತಕ ಹೂಡಿಕೆ ಸಂಸ್ಥೆಗಳು ಮತ್ತು ಹೂಡಿಕೆದಾರರು ಕಳೆದ ಕೆಲ ತಿಂಗಳುಗಳಲ್ಲಿ ಕ್ರಿಪ್ಟೊ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಈ ಎಲ್ಲದರ ಪೈಕಿ ಬಿಟ್‍ಕಾಯಿನ್ ಮುಂಚೂಣಿಯಲ್ಲಿದೆ. ಇಂದು ಇದು ಸುಮಾರು 1.3 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಜಾಗತಿಕವಾಗಿ ಹಲವು ಅರ್ಥಶಾಸ್ತ್ರಜ್ಞರು ಮತ್ತು ಹೂಡಿಕೆದಾರರು ಬಿಟ್‍ಕಾಯಿನ್ ಡಿಜಿಟಲ್ ಚಿನ್ನ ಎಂದು ಅಭಿಪ್ರಾಯಪಡುತ್ತಾರೆ.

English summary
As per the internal data of CoinDCX majority of investors investing in cryptocurrency in Karnataka are graduates and working IT professionals. The company has witnessed spike in investments in cryptocurrency from the state of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X