ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರಲ್ಲೂ ಇನ್ಫೋಸಿಸ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಉಂಟಾಗಿರುವ ಅನಿಶ್ಚಿತತೆಯ ಕಾರಣದಿಂದ ಮುಂದಿನ ವರ್ಷವೂ ಅಂದರೆ 2021ರಲ್ಲೂ, ತನ್ನ ಕಂಪನಿಯ ಉದ್ಯೋಗಿಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ಮನೆ ಅಥವಾ ಕಚೇರಿಯಿಂದ ಕೆಲಸ ಮಾಡಲು ಅವಕಾಶ ನೀಡುತ್ತದೆ ಎಂದು ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಹೇಳಿದೆ.

ಮುಂದಿನ ವರ್ಷದಿಂದ ತನ್ನ ಉದ್ಯೋಗಿಗಳಿಗೆ ಹೊಂದಿಕೊಳ್ಳುವ ಹೈಬ್ರಿಡ್ ಕೆಲಸದ ಮಾದರಿಯನ್ನು ಅನ್ವೇಷಿಸುವುದಾಗಿ ಇನ್ಫೋಸಿಸ್ ಹೇಳಿದೆ. ಈ ಮೂಲಕ ಮುಂದಿನ ಆರು ತಿಂಗಳಿನಲ್ಲಿ ಎಲ್ಲಾ ದಿನಗಳಲ್ಲಿ ನೌಕರರು ಕಚೇರಿಯಲ್ಲಿ ಹಾಜರಾಗಬೇಕಾಗಿಲ್ಲ.

ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಪ್ರಶಸ್ತಿ; ಆರು ವರ್ಗಗಳ ವಿಜೇತರಿಗೆ ಇನ್ಫೋಸಿಸ್‌ ಪ್ರಶಸ್ತಿ 2020 ಪ್ರದಾನಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ ಪ್ರಶಸ್ತಿ; ಆರು ವರ್ಗಗಳ ವಿಜೇತರಿಗೆ ಇನ್ಫೋಸಿಸ್‌ ಪ್ರಶಸ್ತಿ 2020 ಪ್ರದಾನ

ಸಾಂಕ್ರಾಮಿಕ ರೋಗದ ಪರಿಸ್ಥಿತಿ ಮತ್ತು ವ್ಯಾಕ್ಸಿನೇಷನ್ ಸ್ಥಿತಿಯನ್ನು ಅವಲಂಬಿಸಿ ಹೇಗೆ ಮುಂದುವರಿಯುವುದು ಎಂಬುದರ ಕುರಿತು ಜೂನ್ ನಂತರ ಕಂಪನಿಯು ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

IT Major Infosys To Allow Employees To Work From Home Or Office From 2021

ಇನ್ಫೋಸಿಸ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ಅವರು ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಕಂಪನಿಯು ಮನೆಯಿಂದ ಕೆಲಸಕ್ಕೆ ಸಂಬಂಧಿಸಿದಂತೆ ಹೊಂದಿಕೊಳ್ಳುವ ಮಾದರಿಯನ್ನು ನಿರ್ಮಿಸಿದ್ದರೂ, 'ಸಾಮಾಜಿಕ ಬಂಡವಾಳ' ನಿರ್ಮಾಣದ ಕೆಲಸವನ್ನು ಪ್ರಾರಂಭಿಸುವ ಸಮಯ ಬಂದಿದೆ ಎಂದಿದ್ದಾರೆ.

''ಭವಿಷ್ಯದಲ್ಲಿ ಹೆಚ್ಚಿನ ಕಂಪನಿಗಳು ಹೈಬ್ರಿಡ್ ರೀತಿಯ ಕೆಲಸದ ಮಾದರಿಯೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ. ಆದರೆ ಇದು ಕೆಲಸದ ಸ್ವರೂಪಕ್ಕೆ ಅನುಗುಣವಾಗಿ ಭಿನ್ನವಾಗಿರುತ್ತದೆ'' ಎಂದು ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಸಮೂಹ ಮುಖ್ಯಸ್ಥ ಕ್ರಿಶ್ ಶಂಕರ್ ಹೇಳಿದ್ದಾರೆ.

ಹೊಸ ಕೆಲಸದ ಮಾದರಿಯು ವಿಶೇಷವಾಗಿ ಮನೆಗಳಲ್ಲಿ ಆರೈಕೆ ಮಾಡುವ ಪಾತ್ರಗಳಲ್ಲಿ ತೊಡಗಿರುವ ಹೆಚ್ಚಿನ ಮಹಿಳೆಯರಿಗೆ ಉದ್ಯೋಗದಲ್ಲಿ ಭಾಗವಾಗಲು ಅವಕಾಶವನ್ನು ನೀಡುತ್ತದೆ ಎಂದು ಶಂಕರ್ ಹೇಳಿದರು.

ಭಾರತದಲ್ಲಿ 2 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್‌ನಲ್ಲಿ, ಪ್ರಸ್ತುತ ಕೇವಲ ಶೇಕಡಾ 2ರಷ್ಟು ಜನರು ಕಚೇರಿಯಿಂದ ಕೆಲಸ ಮಾಡುತ್ತಿದ್ದರೆ, ಉಳಿದ ಶೇಕಡಾ 98ರಷ್ಟು ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

ಅಮೆರಿಕನ್ ಜಾಕ್‌ಪಾಟ್‌ನಲ್ಲಿ 520 ಮಿಲಿಯನ್ ಡಾಲರ್ ಗೆಲ್ಲಲು ಅವಕಾಶ

English summary
IT bellwether Infosys has said that it will explore a flexible hybrid work model for its employees starting from next year on account of the uncertainty due to the COVID-19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X