• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಗ್ನಿಜೆಂಟ್ ಸಂಸ್ಥೆ ಉದ್ಯೋಗಿಗಳಿಗೆ ಬೋನಸ್, ಬಡ್ತಿ ಘೋಷಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 5: ಪ್ರಮುಖ ಐಟಿ ಸಂಸ್ಥೆ ಕಾಗ್ನಿಜೆಂಟ್ ತನ್ನ ಉದ್ಯೋಗಿಗಳಿಗೆ ಬೋನಸ್, ಬಡ್ತಿ ಘೋಷಿಸಿದೆ. ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರಿ ಸುಮಾರು 24000ಕ್ಕೂ ಅಧಿಕ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ.

2019ರಲ್ಲಿ ಸಿಕ್ಕ ಬೋನಸ್ ಮೀರಿಸುವ ಕೊಡುಗೆ ಉದ್ಯೋಗಿಗಳಿಗೆ ಸಿಗಲಿದೆ ಎಂದು ಕಾಗ್ನಿಜೆಂಟ್ ಹೇಳಿದೆ. ತ್ರೈಮಾಸಿಕ ಅವಧಿ ಬಡ್ತಿ ಮಾದರಿಯನ್ನು ಕಾಗ್ನಿಜೆಂಟ್ ಅಳವಡಿಸಿಕೊಳ್ಳಲು ಮುಂದಾಗಿದ್ದು, ಉದ್ಯೋಗಿಗಳ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಆದರೆ, ಈ ಪ್ರಕ್ರಿಯೆ ಸೀಮಿತ ವರ್ಗಕ್ಕೆ ಮಾತ್ರ ಜಾರಿಯಲ್ಲಿರಲಿದೆ. ಆದರೆ, ವಾರ್ಷಿಕ ಬೋನಸ್ ಹಲವು ಸ್ತರದ ಉದ್ಯೋಗಿಗಳಿಗೆ ಸಿಗಲಿದೆ ಎಂಬ ಮಾಹಿತಿ ಸಿಕ್ಕಿದೆ.

700 ಕೋಟಿ ರು ವಿಶೇಷ ಬೋನಸ್ ! ಎಚ್‌ಸಿಎಲ್ ಟೆಕ್ನಾಲಜೀಸ್ ಘೋಷಣೆ 700 ಕೋಟಿ ರು ವಿಶೇಷ ಬೋನಸ್ ! ಎಚ್‌ಸಿಎಲ್ ಟೆಕ್ನಾಲಜೀಸ್ ಘೋಷಣೆ

2020ರಲ್ಲಿ ಕಠಿಣ ಪರಿಸ್ಥಿತಿಯಲ್ಲೂ ನಮ್ಮ ಉದ್ಯೋಗಿಗಳ ಶ್ರಮವಹಿಸಿ ಕಾರ್ಯ ನಿರ್ವಹಿಸಿದ್ದಾರೆ. ಸಂಸ್ಥೆಯ ಪ್ರಗತಿಗೆ ಕಾರಣರಾದ ಉದ್ಯೋಗಿಗಳಿಗೆ ಬೋನಸ್ ನೀಡಲಾಗುತ್ತಿದೆ ಎಂದು ಕಾಗ್ನಿಜೆಂಟ್ ಇಂಡಿಯಾ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ನಂಬಿಯಾರ್ ಪ್ರತಿಕ್ರಿಯಿಸಿದ್ದಾರೆ. ಜಾಗತಿಕವಾಗಿ 1,60,000 ಉದ್ಯೋಗಿಗಳಿಗೆ ಕೌಶಲ್ಯ ಆಧಾರದ ಮೇಲೆ ಬೋನಸ್ ಸಿಗಲಿದ್ದು, 24000ಕ್ಕೂ ಅಧಿಕ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ.

ಯುಎಸ್ ಮೂಲದ ಕಂಪನಿಯಲ್ಲಿ ಡಿಸೆಂಬರ್ 2020ರ ಎಣಿಕೆಯಂತೆ ಭಾರತದಲ್ಲಿ 2.9 ಲಕ್ಷ ಉದ್ಯೋಗಿಗಳಿದ್ದು, ಆಟ್ರಿಷನ್ ದರ ಶೇ 19ರಷ್ಟಿದ್ದು, ಕೊವಿಡ್ 19 ಪರಿಸ್ಥಿತಿಯಲ್ಲಿ ಉದ್ಯೋಗಿಗಳನ್ನು ಕಾಯ್ದಿಟ್ಟುಕೊಳ್ಳಲು ಬೋನಸ್, ಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

English summary
IT services major Cognizant offering bonuses that are "substantially higher than 2019" and has promoted more than 24,000 employees across levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X