ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಐಟಿ, ನವೋದ್ಯಮದಿಂದ 2019ರಿಂದ 5 ಲಕ್ಷ ಉದ್ಯೋಗ ಸೃಷ್ಟಿ'

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ಭಾರತದ ಮಾಹಿತಿ ತಂತ್ರಜ್ಞಾನ, ನವೋದ್ಯಮ ಕ್ಷೇತ್ರಗಳಿಂದ 2019ರಲ್ಲಿ ಸರಿ ಸುಮಾರು 5 ಲಕ್ಷ ಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಇನ್ಫೋಸಿಸ್ ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ. ಮೋಹನದಾಸ್ ಪೈ ಅವರು ಅಭಿಪ್ರಾಯಪಟ್ಟಿದ್ದಾರೆ.

ಐಟಿ ಕ್ಷೇತ್ರದಲ್ಲಿ ಪ್ರವೇಶ ಹಂತದ ಪ್ಯಾಕೇಜುಗಳು ಹೆಚ್ಚಾಗಿದ್ದು, 2018 ರಲ್ಲಿ ಶೇ. 20 ಏರಿಕೆ ಕಂಡಿದೆ.ಫ್ರೆಶರ್ಸ್ ಗೆ ವಾರ್ಷಿಕವಾಗಿ 4.5 ಲಕ್ಷ ರು ನಿಂದ 5 ಲಕ್ಷ ರು ತನಕ ಪ್ಯಾಕೇಜ್ ಸಿಕ್ಕಿದೆ ಎಂದರು.

IT firms, start-ups expected to create 5 lakh jobs in 2019: Mohandas Pai

ಭಾರತೀಯ ಐಟಿ ಕ್ಷೇತ್ರ ಮತ್ತೆ ಪ್ರಗತಿಯತ್ತ ಸಾಗುತ್ತಿದೆ, ಎಚ್1ಬಿ ವೀಸಾ ನಿಯಮ ಕಠಿಣವಾಗಿರುವುದರಿಂದ ಭಾರತೀಯ ಕಂಪನಿಗಳು ಜಪಾನ್ ಮತ್ತು ಆಗ್ನೇಯ ಏಷ್ಯಾಗಳತ್ತ ಮುಖಮಾಡಿವೆ, ಉದ್ಯಮ ಕ್ಷೇತ್ರದಲ್ಲಿ ವಿಸ್ತಾರ ಕಾಣುವ ಜೊತೆಗೆ ಕೊಡು-ಕೊಳ್ಳುವ ಭಾರಿ ವಹಿವಾಟು ನಡೆಯುತ್ತಿದೆ ಎಂದಿದ್ದಾರೆ.

'ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು''ಬೇಕೆಂತಲೇ ಹೊಸಬರಿಗೆ ಕಡಿಮೆ ಸಂಬಳ ಕೊಡುತ್ತಿವೆ ಐಟಿ ಕಂಪೆನಿಗಳು'

ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್ ತನ್ನ ಐಟಿ ಸಿಟಿ ಟ್ಯಾಗ್ ಉಳಿಸಿಕೊಂಡಿದೆ. ಅಲ್ಲಿನ ಐಟಿ ಸಚಿವ ಕೆಟಿ ರಾಮರಾವ್ ಅವರು ಮೂಲ ಸೌಕರ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ ಎಂದರು.

ಭಾರತದಲ್ಲಿ ಸದ್ಯ 39000ಕ್ಕೂ ಅಧಿಕ ಸ್ಟಾರ್ಟ್ ಅಪ್ ಗಳಿದ್ದು, ಕನಿಷ್ಟ 2 ಲಕ್ಷ ಮಂದಿಯ ನೇಮಕಾತಿಯನ್ನು ಈ ಕ್ಷೇತ್ರದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.(ಪಿಟಿಐ)

English summary
India's information technology (IT) services sector and start-ups together are expected to hire up to five lakh people in 2019 as demand for freshers is on the upswing, an industry veteran said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X