ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್‌ಸಿಎಲ್ ಉದ್ಯೋಗಿಗಳಿಗೆ ಬಂಪರ್, ಬೆಂಜ್ ಕಾರು ಗಿಫ್ಟ್

|
Google Oneindia Kannada News

ಬೆಂಗಳೂರು, ಜುಲೈ 21: ಪ್ರಮುಖ ಐಟಿ ಸಂಸ್ಥೆ ಎಚ್ ಸಿ ಎಲ್ ತನ್ನ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಲು ಈ ಹಿಂದೆ ನೀಡುತ್ತಿದ್ದಂತೆ ಮತ್ತೊಮ್ಮೆ ಬೆಂಜ್ ಕಾರು ಗಿಫ್ಟ್ ಮಾಡಲು ಮುಂದಾಗಿದೆ.

ಕೋವಿಡ್ 19 ಸಾಂಕ್ರಾಮಿಕದ ಎರಡೂ ಅಲೆಗಳಲ್ಲೂ ಉದ್ಯೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಎಚ್ ಸಿ ಎಲ್ ಸಂಸ್ಥೆ ಹೆಚ್ಚಿನ ಕಾಳಜಿ ವಹಿಸಿತ್ತು. ಹೊಸ ನೇಮಕಾತಿಗೆ ತಗುಲುವ ವೆಚ್ಚ ಶೇ 20% ಅಧಿಕವಾಗಲಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಎಚ್ ಸಿ ಎಲ್ ಜನಪ್ರಿಯ ಯೋಜನೆಯನ್ನು ಪುನಃ ಆರಂಭಿಸಿದೆ.

16 ಸಾವಿರ ಉದ್ಯೋಗಿಗಳಿಗೆ ಬೋನಸ್ ಕೊಟ್ಟ ಎಚ್‌ಸಿಎಲ್16 ಸಾವಿರ ಉದ್ಯೋಗಿಗಳಿಗೆ ಬೋನಸ್ ಕೊಟ್ಟ ಎಚ್‌ಸಿಎಲ್

''2013ರಲ್ಲಿ ಸಂಸ್ಥೆಯ ಉತ್ತಮ ಕಾರ್ಯನಿರ್ವಹಣೆ ತೋರಿದ ಉದ್ಯೋಗಿಗಳಿಗೆ 50 ಮರ್ಸಿಡಿಸ್ ಬೆಂಜ್ ಕಾರುಗಳನ್ನು ಉಡುಗೊರೆಯನ್ನು ನೀಡಲಾಗಿತ್ತು. ಆದರೆ, ನಂತರ ಈ ಬೋನಸ್ ವಿಧಾನ ಸ್ಥಗಿತಗೊಳಿಸಲಾಗಿತ್ತು. ಆದರೆ, ಮತ್ತೊಮ್ಮೆ ಈ ರೀತಿ ಬೋನಸ್ ನೀಡಲು ಸಂಸ್ಥೆ ಮುಂದಾಗಿದೆ,'' ಎಂದು ಮಾನವ ಸಂಪನ್ಮೂಲ ಅಧಿಕಾರಿ ಅಪ್ಪಾರಾವ್ ವಿವಿ ಹೇಳಿದ್ದಾರೆ.

IT firm HCL plans to give Mercedes-Benz to performers

ಸಿಟಿಸಿ (Cost-to-company)ಗೆ ಅನುಗುಣವಾಗಿ ಶೇ 25 ರಿಂದ 30 ರಷ್ಟು ಕೌಶಲ್ಯ ಆಧಾರಿತ ಭತ್ಯೆ ನೀಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಈ ರೀತಿ ಭತ್ಯೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಅಪ್ಪಾರಾವ್ ವಿವಿ ಹೇಳಿದ್ದಾರೆ.

ಬದಲಿ ನೇಮಕಾತಿ ವೆಚ್ಚ ಶೇ 15-20 ರಷ್ಟು ಅಧಿಕವಾಗಿದೆ. ಕೌಶಲ್ಯಕ್ಕೆ ತಕ್ಕಂತೆ ನೇಮಕಾತಿ ನಡೆದಿದೆ. ಜಾವಾ ಡೆವಲಪರ್ ನೇಮಕಕ್ಕೆ ತಗುಲುವ ವೆಚ್ಚಕ್ಕೆ ಕ್ಲೌಡ್ ವೃತ್ತಿಪರರನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 22,000 ಫ್ರೆಶರ್ಸ್ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಕಳೆದ ವರ್ಷ 15,600 ನೇಮಕ ಮಾಡಿಕೊಳ್ಳಲಾಗಿತ್ತು.

ಐಟಿ ಫ್ರೆಶರ್ಸ್ ಗಮಕ್ಕೆ: ಈ ವರ್ಷ 1 ಲಕ್ಷಕ್ಕೂ ಅಧಿಕ ಉದ್ಯೋಗವಕಾಶಐಟಿ ಫ್ರೆಶರ್ಸ್ ಗಮಕ್ಕೆ: ಈ ವರ್ಷ 1 ಲಕ್ಷಕ್ಕೂ ಅಧಿಕ ಉದ್ಯೋಗವಕಾಶ

ಮೂರು ವರ್ಷಗಳ ಕ್ಯಾಶ್ ಬೋನಸ್ ಯೋಜನೆ ಜಾರಿಗೊಳಿಸಲಾಗಿದೆ. ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕೋವಿಡ್ ಕಾಲದಲ್ಲೂ ಬೋನಸ್ ನೀಡಲಾಗುತ್ತಿದೆ. ಶೇ 11.8ರಷ್ಟು ಆಟ್ರಿಷನ್ ದರ ಉಳಿಸಿಕೊಂಡಿದೆ. ಎಚ್‌ಸಿಎಲ್ ಒಟ್ಟಾರೆ 1,68, 977 ಉದ್ಯೋಗಿಗಳನ್ನು ಹೊಂದಿದ್ದು, ಆಟ್ರಿಷನ್ ದರ ಶೇ 16 ರಿಂದ ಶೇ 11.8ಕ್ಕೆ ಇಳಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಟಾಪ್ 3 ಕಂಪನಿಗಳಲ್ಲದೆ ಎಚ್‌ಸಿಎಲ್ ಟೆಕ್ ಸೇರಿದಂತೆ ಸುಮಾರು 1 ಲಕ್ಷ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ.

ಇನ್ಫೋಸಿಸ್ ಶೇ 13.9 ರಷ್ಟು ಆಟ್ರಿಷನ್ ಹೊಂದಿದೆ. ಆನ್ ಸೈಟ್ ಆಟ್ರಿಷನ್ ದರ ಶೇ 24.3 ರಷ್ಟಿದೆ. ವಿಪ್ರೋ ಆಟ್ರಿಷನ್ ದರ ಶೇ 15.5 ಕ್ಕೇರಿದೆ. 10,000 ಉದ್ಯೋಗಿಗಳಿಗೆ ಬಡ್ತಿ ನೀಡಿದೆ. 12,000 ಫ್ರೆಶರ್ಸ್, 30,000 ಕ್ಯಾಂಪಸ್ ಆಫರ್ಸ್ ಮುಂದಿನ ಪ್ರಸಕ್ತ ವರ್ಷಕ್ಕೆ ನೇಮಕಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.

English summary
IT firm HCL plans to give Mercedes-Benz to performers. The company had given out 50 Mercedes Benz cars to top performers in 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X