ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

800 ಉದ್ಯೋಗಿಗಳನ್ನು ವಜಾಗೊಳಿಸಿದ ಟಾಟಾ ಟೆಕ್ನಾಲಜೀಸ್: ಕಂಪೆನಿ ವಿರುದ್ಧ ದೂರು

|
Google Oneindia Kannada News

ಪುಣೆ, ಮಾರ್ಚ್ 11: ಟಾಟಾ ಟೆಕ್ನಾಲಜೀಸ್ ಸಂಸ್ಥೆಯು ಸುಮಾರು 800 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದ್ದು, ಅದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಪುಣೆ ಮೂಲದ ಐಟಿ/ಟಿಇಎಸ್ ನಸ್ಕೆಂಟ್ ಇನ್ಫಾರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (ಎನ್‌ಐಟಿಇಎಸ್) ಉದ್ಯೋಗಿಗಳ ಒಕ್ಕೂಟವು ಪುಣೆಯಲ್ಲಿನ ಕಾರ್ಮಿಕ ಆಯುಕ್ತರಿಗೆ ದೂರು ಸಲ್ಲಿಸಿದೆ.

ಪುಣೆಯ ಹಿಂಜೆವಾಡಿಯಲ್ಲಿರುವ ಟಾಟಾ ಟೆಕ್ನಾಲಜೀಸ್ ಉದ್ಯೋಗಿಗಳಿಂದ ಅನೇಕ ದೂರುಗಳು ಬಂದಿವೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಲಾಭವನ್ನು ನಿಭಾಯಿಸುವ ನೆಪದಲ್ಲಿ ಅಕ್ರಮವಾಗಿ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಎನ್‌ಐಟಿಇಎಸ್ ಅಧ್ಯಕ್ಷ ಹರ್‌ಪ್ರೀತ್ ಸಲುಜಾ ಆರೋಪಿಸಿದ್ದಾರೆ.

ಅನಾರೋಗ್ಯಕ್ಕೊಳಗಾದ ಮಾಜಿ ಉದ್ಯೋಗಿಯನ್ನು ನೋಡಲು 150 ಕಿ.ಮೀ ದೂರದಿಂದ ಬಂದ ರತನ್ ಟಾಟಾಅನಾರೋಗ್ಯಕ್ಕೊಳಗಾದ ಮಾಜಿ ಉದ್ಯೋಗಿಯನ್ನು ನೋಡಲು 150 ಕಿ.ಮೀ ದೂರದಿಂದ ಬಂದ ರತನ್ ಟಾಟಾ

2020ರ ಜೂನ್ ತಿಂಗಳಲ್ಲಿ ಪುಣೆಯ ಐಟಿ ಕಂಪೆನಿಯು ಸುಮಾರು 400 ಉದ್ಯೋಗಿಗಳನ್ನು ಫರ್ಲೋದಲ್ಲಿ ಇರಿಸಿತ್ತು. ಅಂದರೆ ಅವರು ಸಂಸ್ಥೆಯ ಉದ್ಯೋಗಿಗಳಾಗಿರುತ್ತಾರೆ. ಅವರಿಗೆ ಕಾರ್ಪೊರೇಟ್ ವಿಮೆ ಲಭ್ಯವಿರುತ್ತದೆ. ಆದರೆ ಮಾಸಿಕ ಪರಿಹಾರ ಸಿಗುವುದಿಲ್ಲ. 2020ರ ಡಿಸೆಂಬರ್ 31ರವರೆಗೂ ಈ ಉದ್ಯೋಗಿಗಳಿಗೆ ಯಾವುದೇ ವೇತನ ಇಲ್ಲದೆ ರಜೆ ಮೇಲೆ ಕಳುಹಿಸಲಾಗಿತ್ತು.

ಫರ್ಲೋಗೆ ಅವಕಾಶವೇ ಇಲ್ಲ

ಫರ್ಲೋಗೆ ಅವಕಾಶವೇ ಇಲ್ಲ

ಟಾಟಾ ಟೆಕ್ನಾಲಜೀಸ್‌ನಂತಹ ಐಟಿ ಸಂಸ್ಥೆಗಳು ಕೈಗಾರಿಕಾ ವಿವಾದ ಕಾಯ್ದೆ ಹಾಗೂ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಅಡಿ ಬರುತ್ತವೆ. ಈ ಕಾಯ್ದೆಗಳಲ್ಲಿ ಫರ್ಲೋ ಪರಿಕಲ್ಪನೆಗೆ ಅವಕಾಶವೇ ಇಲ್ಲ. ಆದರೆ ಟಾಟಾ ಅಕ್ರಮವಾಗಿ ಅದನ್ನು ಇಲ್ಲಿ ಬಳಸಿದೆ ಎಂದು ಆರೋಪಿಸಲಾಗಿದೆ.

ಸಂಬಳವಿಲ್ಲ, ಈಗ ವಜಾ

ಸಂಬಳವಿಲ್ಲ, ಈಗ ವಜಾ

ಮಾರ್ಚ್ 1ರಂದು ಸುಮಾರು 800-1000 ಉದ್ಯೋಗಿಗಳಿಗೆ ಕೆಲಸದಿಂದ ವಜಾಗೊಳಿಸಿದ ಇ-ಮೇಲ್ ರವಾನೆಯಾಗಿದೆ. ಕಳೆದ ಎಂಟು ತಿಂಗಳಿನಿಂದ ಈ ಉದ್ಯೋಗಿಗಳಿಗೆ ಸಂಬಳ ನೀಡದ ಕಂಪೆನಿ, ಈಗ ಅವರನ್ನೆಲ್ಲ ಕೆಲಸದಿಂದ ಕಿತ್ತುಹಾಕಿದೆ. ಇದು ಕಾರ್ಮಿಕ ಕಾನೂನು ಹಾಗೂ ಮಹಾರಾಷ್ಟ್ರ ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿದೆ ಎಂದು ದೂರು ನೀಡಲಾಗಿದೆ.

ಟಾಟಾ ಸಮೂಹ ತೆಕ್ಕೆಗೆ ಬಿಗ್ ಬ್ಯಾಸ್ಕೆಟ್ ಸೂಪರ್ ಮಾರ್ಕೆಟ್ಟಾಟಾ ಸಮೂಹ ತೆಕ್ಕೆಗೆ ಬಿಗ್ ಬ್ಯಾಸ್ಕೆಟ್ ಸೂಪರ್ ಮಾರ್ಕೆಟ್

ಆರೋಪ ನಿರಾಕರಿಸಿದ ಕಂಪೆನಿ

ಆರೋಪ ನಿರಾಕರಿಸಿದ ಕಂಪೆನಿ

ಆದರೆ 800 ಉದ್ಯೋಗಿಗಳನ್ನು ವಜಾಗೊಳಿಸಿರುವ ಆರೋಪವನ್ನು ಟಾಟಾ ಟೆಕ್ನಾಲಜೀಸ್ ತಳ್ಳಿಹಾಕಿದೆ. ವೇತನ ಸಹಿತ ರಜೆ ಪಡೆದಿದ್ದ ನಮ್ಮ ಉದ್ಯೋಗಿಗಳ ಒಂದು ವರ್ಗದೊಂದಿಗೆ ಸಮಾಲೋಚನೆ ನಡೆಸಿ ಅವರಿಗೆ ಕೆಲವು ಸಮಯದವರೆಗೆ ವೇತನರಹಿತ ರಜೆ ನೀಡಲಾಗಿದೆ. ಆದರೆ ಅವರು ಕಂಪೆನಿಯ ತಮ್ಮ ಹುದ್ದೆಗಳಲ್ಲಿಯೇ ಮುಂದುವರಿಯಲಿದ್ದಾರೆ. ಜತೆಗೆ ಈ ಹಂತದಲ್ಲಿ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ವಿಮಾ ಸೌಲಭ್ಯ ಒದಗಿಸಲಾಗಿದೆ ಎಂದು ಅದು ತಿಳಿಸಿದೆ.

ನಿಯಮಗಳನ್ನು ಪಾಲಿಸುತ್ತಿದ್ದೇವೆ

ನಿಯಮಗಳನ್ನು ಪಾಲಿಸುತ್ತಿದ್ದೇವೆ

'ನಾವು ಸುಮಾರು ಶೇ 18ರಷ್ಟು ಪ್ರತಿಭಾವಂತ ಉದ್ಯೋಗಿಗಳನ್ನು ಪ್ರಾಜೆಕ್ಟ್‌ಗಳಿಗೆ ಮರು ನೇಮಕ ಮಾಡಿದ್ದೇವೆ. ಆದರೆ ಸಾಂಕ್ರಾಮಿಕ ಸಮಯದಲ್ಲಿನ ನಷ್ಟಗಳ ಕಾರಣ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಉಳಿದ ಎಲ್ಲ ಉದ್ಯೋಗಿಗಳೊಂದಿಗೆ ಕಂಪೆನಿ ಉತ್ತಮ ಬಾಂಧವ್ಯವನ್ನು ಮುಂದುವರಿಸಿದ್ದು, ಎಲ್ಲ ನಿಯಮಗಳಿಗೂ ಬದ್ಧವಾಗಿ ಅನುಸರಿಸುತ್ತಿದೆ' ಎಂದು ಕಂಪೆನಿ ವಕ್ತಾರರು ಹೇಳಿದ್ದಾರೆ.

English summary
IT employees union of Pune, NITES has filed a complaint against Tata Technologies, Hinjewadi for terminating around 800 workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X