ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಉದ್ಯೋಗಿಗಳಿಗೆ ಬೋನಸ್ ನೀಡಿದ ಆಕ್ಸೆಂಚರ್

|
Google Oneindia Kannada News

ಮುಂಬೈ, ಮೇ 30: ಜಾಗತಿಕ ಐಟಿ ಸೇವಾ ಸಂಸ್ಥೆ ಆಕ್ಸೆಂಚರ್ ತನ್ನ ಉದ್ಯೋಗಿಗಳಿಗೆ ಬೋನಸ್ ನೀಡಿದೆ. ಕೊವಿಡ್ 19 ಲಾಕ್ಡೌನ್ ಜಾರಿಯಲ್ಲಿರುವಾಗಲೇ ಬೋನಸ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಹಲವು ಐಟಿ ಕಂಪನಿಗಳು ಸಂಬಳ ಏರಿಕೆ, ಬಡ್ತಿ, ಬೋನಸ್ ನೀಡುವ ಪ್ರಕ್ರಿಯೆಗೆ ತಡೆ ನೀಡಿವೆ.

ಆದರೆ, ಆಕ್ಸೆಂಚರ್ ಸುಮಾರು 1 ಲಕ್ಷಕ್ಕೂ ಅಧಿಕ ಭಾರತೀಯ ಉದ್ಯೋಗಿಗಳಿಗೆ ವಿವಿಧ ಹಂತದಲ್ಲಿ ಬೋನಸ್ ನೀಡಿದೆ. ತಂತ್ರಜ್ಞಾನ, ಮ್ಯಾನೇಜ್ಮೆಂಟ್ ಸೇರಿದಂತೆ ವಿವಿಧ ವಿಭಾಗದ ಉದ್ಯೋಗಿಗಳಿಗೆ ಬಡ್ತಿ, ಬೋನಸ್ ನೀಡಲಾಗಿದೆ ಎಂದು ಆಕ್ಸೆಂಚರ್ ವಕ್ತಾರರು ಹೇಳಿದ್ದಾರೆ.

ಉದ್ಯೋಗ ಕಡಿತ ಕುರಿತಂತೆ ಟಿಸಿಎಸ್ ಸಂಸ್ಥೆಯಿಂದ ಮಹತ್ವದ ಘೋಷಣೆಉದ್ಯೋಗ ಕಡಿತ ಕುರಿತಂತೆ ಟಿಸಿಎಸ್ ಸಂಸ್ಥೆಯಿಂದ ಮಹತ್ವದ ಘೋಷಣೆ

ಕಳೆದ ವರ್ಷ ತಿಂಗಳಿಗೆ 2,500ರಷ್ಟು ಮಂದಿ ನೇಮಕಾತಿ ದರ ಹೊಂದಿದ್ದ ಐಟಿ ಕಂಪನಿ, ಭಾರತದಲ್ಲಿ ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿದೆ. ನ್ಯಾಸ್ ಕಾಂ ವರದಿಯಂತೆ ಮಾರ್ಚ್ 2020ಕ್ಕೆ ಅನ್ವಯವಾಗುವಂತೆ ಕಳೆದ ವರ್ಷ ಐಟಿ ಕ್ಷೇತ್ರದಲ್ಲಿ 205, 000 ಹೊಸ ನೇಮಕಾತಿಯಾಗಿದೆ.

IT Compnay Accenture gives bonuses to its staff

ಸಂಕಟದ ಸಂದರ್ಭದಲ್ಲೂ ಹೆಚ್ಚುವರಿ ಸಂಬಳ ಘೋಷಿಸಿದ ಐಟಿ ಕಂಪನಿ ಸಂಕಟದ ಸಂದರ್ಭದಲ್ಲೂ ಹೆಚ್ಚುವರಿ ಸಂಬಳ ಘೋಷಿಸಿದ ಐಟಿ ಕಂಪನಿ

ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ ಮುಂತಾದ ಸಂಸ್ಥೆಗಳು ಸಂಬಳ ಏರಿಕೆ, ಬಡ್ತಿ ನೀಡುವುದನ್ನು ಸದ್ಯಕ್ಕೆ ತಡೆ ಹಿಡಿದಿವೆ. ಕ್ಯಾಪ್ ಜೆಮಿನಿ ವೇರಿಯಬಲ್ ಪೇ, ಬೋನಸ್ ನೀಡಿದೆ. ಇಂಥ ಸಂದರ್ಭದಲ್ಲಿ ಆಕ್ಸೆಂಚರ್ ತನ್ನ ಉದ್ಯೋಗಿಗಳಿಗೆ ಬಡ್ತಿ, ಬೋನಸ್ ನೀಡಿದೆ.

English summary
Global IT company Accenture gives bonuses to more than half its 2,00,000 employees in India amid of Covid 19 pandemic lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X