ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕಂಪನಿಗಳಿಂದ 40 ಸಾವಿರ ಉದ್ಯೋಗ ಕಡಿತ ನಿರೀಕ್ಷೆ

|
Google Oneindia Kannada News

ನವದೆಹಲಿ, ನವೆಂಬರ್ 19: ಮಾಹಿತಿ ಮತ್ತು ತಂತ್ರಜ್ಞಾನ ಸೇವಾ ಕ್ಷೇತ್ರದಲ್ಲಿ ಪ್ರಗತಿ ಕುಂಠಿತಗೊಂಡಿದೆ. ಹೀಗಾಗಿ, ಈ ವರ್ಷ 30,000ದಿಂದ 40,0000ದಷ್ಟು ಮಧ್ಯಮ ಸ್ತರದಲ್ಲಿರುವ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು ಎಂದು ಉದ್ಯಮ ತಜ್ಞ, ಇನ್ಫೋಸಿಸ್ ನ ಮಾಜಿ ಎಚ್ ಆರ್ ಮುಖ್ಯಸ್ಥ ಟಿ.ವಿ.ಮೋಹನದಾಸ ಪೈ ಅಭಿಪ್ರಾಯಪಟ್ಟಿದ್ದಾರೆ.

''ಪ್ರತಿ ಕ್ಷೇತ್ರದಲ್ಲೂ ಐದು ವರ್ಷಗಳಿಗೊಮ್ಮೆ ಸಂಭವಿಸುವ ಸಹಜ ವಿದ್ಯಮಾನವಾಗಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿರುವಂತೆ ಭಾರತದಲ್ಲಿಯೂ ಮಧ್ಯಮ ಸ್ತರದಲ್ಲಿ ತಾವು ಪಡೆಯುವ ವೇತನಕ್ಕೆ ಸರಿಯಾದ ನ್ಯಾಯ ಒದಗಿಸದವರು ಇರುತ್ತಾರೆ" ಎಂದು ಪೈ ಹೇಳಿದ್ದಾರೆ.

ಇನ್ಫೋಸಿಸ್​​ ಸಂಸ್ಥೆಯಿಂದ 10,000 ಉದ್ಯೋಗ ಕಡಿತ ಸಾಧ್ಯತೆಇನ್ಫೋಸಿಸ್​​ ಸಂಸ್ಥೆಯಿಂದ 10,000 ಉದ್ಯೋಗ ಕಡಿತ ಸಾಧ್ಯತೆ

ಸಂಸ್ಥೆಗಳು ಪ್ರಗತಿ ಹೊಂದುವಾಗ ಬಡ್ತಿಗಳನ್ನು ನೀಡುವುದು ಸರಿಯಾದ ಕ್ರಮ, ಆದರೆ ಬೆಳವಣಿಗೆ ಕುಂಠಿತಗೊಂಡಾಗ ಹೆಚ್ಚು ವೇತನ ಪಡೆಯುವವರು ಉನ್ನತ ಸ್ತರದಲ್ಲಿರುತ್ತಾರೆ. ಹೀಗಾಗಿ ಕಂಪನಿಗಳಿಗೆ ತಮ್ಮ ಉದ್ಯೋಗ ಸ್ವರೂಪಗಳ ಪರಿಷ್ಕರಣೆ ಮತ್ತು ಉದ್ಯೋಗ ಕಡಿತ ಮಾಡುವುದು ಸಾಮಾನ್ಯ ಸಂಗತಿ ಎಂದು ಇನ್ಫೋಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಹಾಗೂ ಅರಿನ್ ಕ್ಯಾಪಿಟಲ್ ಆ್ಯಂಡ್ ಮಣಿಪಾಲ ಗ್ಲೋಬಲ್ ಎಜ್ಯುಕೇಶನ್ ಸರ್ವಿಸಸ್‌ನ ಅಧ್ಯಕ್ಷ ಪೈ ಹೇಳಿದರು.

IT companies may shed 40,000 mid-level staff says Mohandas Pai

ಸಂಸ್ಥೆಯ ಪ್ರಗತಿ ಜೊತೆಗೆ ವಿಶೇಷ ತಜ್ಞರಾದರೆ ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳುವ ಅವಕಾಶವೂ ಇಂಥವರಿಗೆ ಸಿಗಲಿದೆ ಎಂದು ಪೈ ಅಭಿಪ್ರಾಯಪಟ್ಟರು.

2020ರ ಜೂನ್ ಹೊತ್ತಿಗೆ ಕಾಗ್ನಿಜಂಟ್ ನ 7000 ಹುದ್ದೆಗಳಿಗೆ ಕತ್ತರಿ2020ರ ಜೂನ್ ಹೊತ್ತಿಗೆ ಕಾಗ್ನಿಜಂಟ್ ನ 7000 ಹುದ್ದೆಗಳಿಗೆ ಕತ್ತರಿ

ಭಾರತದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ, ಬೆಂಗಳೂರು ಮೂಲದ ಇನ್ಫೋಸಿಸ್ ವಿವಿಧ ಸ್ತರದ ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಿದೆ. ಸುಮಾರು 10,000 ಉದ್ಯೋಗ ಕಡಿತ ಮುಂದಾಗಿದೆ ಎಂದು ವರದಿ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.

English summary
India's information technology services companies may shed 30,000 to 40,000 middle-level employees this year as growth slows down, IT industry veteran T V Mohandas Pai said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X