ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಇಸ್ರೇಲ್ ಎಂಬಸಿಗೆ ಇರಾನ್ ಬೆಂಬಲಿತ ಉಗ್ರರಿಂದ ದಾಳಿ ಭೀತಿ

|
Google Oneindia Kannada News

ನವದೆಹಲಿ, ಮೇ 8: ರಾಷ್ಟ್ರರಾಜಧಾನಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ (Israeli Embassy) ಮೇಲೆ ಇರಾನ್ ಬೆಂಬಲಿತ ಉಗ್ರರಿಂದ ದಾಳಿ ಸಾಧ್ಯತೆ ಇದೆ ಎಂದು ಗುಪ್ತಚರರ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ದಹೆಲಿಯ ಲುಟ್ಯೆನ್ಸ್ ಪ್ರದೇಶದಲ್ಲಿರುವ ಇಸ್ರೇಲಿ ಎಂಬಸಿ ಕಚೇರಿಯಲ್ಲಿ ಹೈ ಅಲರ್ಟ್ ಜಾರಿ ಮಾಡಲಾಗಿದೆ.

ಕಳೆದ ವರ್ಷ ಜನವರಿಯಂದು ಇಸ್ರೇಲ್ ದೂತಾವಾಸ ಕಚೇರಿಯ ಹೊರಗೆ ಐಇಡಿ ಬಾಂಬ್ ಬ್ಲಾಸ್ಟ್ ಆಗಿತ್ತು. ಕಡಿಮೆ ತೀವ್ರತೆ ಬಾಂಬ್ ಆದ್ದರಿಂದ ಸಾವು ಸಂಭವಿಸಿರಲಿಲ್ಲ. ಆದರೆ, ಕಚೇರಿ ಹೊರಗೆ ನಿಂತಿದ್ದ ಮೂರು ಕಾರುಗಳ ಕಿಟಕಿಗಾಜುಗಳು ಚಿಂದಿಯಾಗಿದ್ದವು. ಆರಂಭದಲ್ಲಿ ಇದು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಕೃತ್ಯ ಎಂದು ಬಗೆಯಲಾಗಿತ್ತು. ಆದರೆ, ಇಸ್ರೇಲ್ ವಿರುದ್ಧ ಇರಾನ್ ರೂಪಿಸಿರುವ ಪಡೆಯಿಂದ ಈ ಕೆಲಸ ಆಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯ ಶಿಯಾ ಉಗ್ರ ಸಂಘಟನೆಯೊಂದನ್ನ ಬಳಸಿಕೊಂಡು ದಾಳಿ ಮಾಡಿರುವ ಸಾಧ್ಯತೆ ಇದೆ.

ಇಸ್ರೇಲ್‌ನಲ್ಲಿ ಕಾಣಿಸಿಕೊಂಡ ಕೊರೊನಾವೈರಸ್ ಹೊಸ ರೂಪಾಂತರಿ ಜಗತ್ತಿಗೆ ಅಪಾಯಕಾರಿಯೇ? ಇಸ್ರೇಲ್‌ನಲ್ಲಿ ಕಾಣಿಸಿಕೊಂಡ ಕೊರೊನಾವೈರಸ್ ಹೊಸ ರೂಪಾಂತರಿ ಜಗತ್ತಿಗೆ ಅಪಾಯಕಾರಿಯೇ?

ಕಾಕತಾಳೀಯವೆಂದರೆ, ಕಳೆದ ವರ್ಷದಂದು ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ ರೂಪುಗೊಂಡು 29 ವರ್ಷ ಪೂರ್ಣಗೊಂಡಿತ್ತು. ಅದೇ ಸಂಖ್ಯೆಯ ದಿನವಾದ ಜನವರಿ 29ರಂದು ಇಸ್ರೇಲ್ ಎಂಬಸಿ ಮೇಲೆ ದಾಳಿಯಾಗಿತ್ತು.

Israel embassy in Delhi on high alert amid fear of terror attack

ಕಳೆದ ಸೆಪ್ಟೆಂಬರ್‌ನಲ್ಲೂ ಉಗ್ರ ದಾಳಿಗಳಾಗಬಹುದು ಎಂದು ದೇಶಾದ್ಯಂತ ಅಲರ್ಟ್ ಮಾಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಯಹೂದಿಗಳಿಗೆ ರಜೆಗಳು ಇರುವುದರಿಂದ ಆ ತಿಂಗಳಲ್ಲಿ ದಾಳಿಯಾಗುವ ಸಾಧ್ಯತೆ ಇದೆ. 2021ರ ಎಂಬಸಿ ಬ್ಲಾಸ್ಟ್ ರೀತಿಯ ದಾಳಿಗಳಾಗಬಹುದು ಎಂದು ಮೊಸಾದ್ ಗುಪ್ತಚರರು ಎಚ್ಚರಿಸಿದ್ದರು. ಹೀಗಾಗಿ, ಸೆಪ್ಟೆಂಬರ್‌ನಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಿಸಲಾಗಿತ್ತು.

 ಆರು ತಿಂಗಳು ಗಗನಯಾನ ಯಶಸ್ಸಿನ ನಂತರ ಭೂಮಿಗೆ ಮರಳಿದ ರಾಜಾ ಚಾರಿ ಆರು ತಿಂಗಳು ಗಗನಯಾನ ಯಶಸ್ಸಿನ ನಂತರ ಭೂಮಿಗೆ ಮರಳಿದ ರಾಜಾ ಚಾರಿ

ಇಸ್ರೇಲ್ ದೇಶಕ್ಕೆ ಸುತ್ತಮುತ್ತಲಿನ ಬಹುತೇಕ ಮುಸ್ಲಿಮ್ ರಾಷ್ಟ್ರಗಳು ಟಾಪ್ ಶತ್ರುಗಳಾಗಿವೆ. ಹೀಗಾಗಿ, ಇಸ್ರೇಲ್ ನೆತ್ತಿಯ ಮೇಲೆ ಸದಾ ಕತ್ತಿ ತೂಗುತ್ತಿರುತ್ತದೆ. 2012, ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಇಸ್ರೇಲಿ ರಾಜತಾಂತ್ರಿಕರೊಬ್ಬರ ಕಾರಿನ ಮೇಲೆ ಬಾಂಬ್ ಸ್ಫೋಟವಾಗಿತ್ತು. ಒಬ್ಬ ಎಂಬಸಿ ಸಿಬ್ಬಂದಿ ಸೇರಿ ನಾಲ್ವರು ಗಾಯಗೊಂಡಿದ್ದರು. ವಿಶ್ವಾದ್ಯಂತವೂ ಇಸ್ರೇಲಿ ರಾಜತಾಂತ್ರಿಕ ಕಚೇರಿಗಳು ಉಗ್ರರ ದಾಳಿಗೆ ಟಾರ್ಗೆಟ್ ಆಗುತ್ತಲೇ ಇವೆ. 2008ರ ಮುಂಬೈ ಉಗ್ರ ದಾಳಿ ಘಟನೆಯಲ್ಲಿ ಯಹೂದಿಗಳಿದ್ದ ಹೋಟೆಲ್‌ವೊಂದನ್ನೂ ದಾಳಿಕೋರರು ಗುರಿಯಾಗಿಸಿದ್ದರು.

Israel embassy in Delhi on high alert amid fear of terror attack

ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಇಸ್ರೇಲ್ ಎಂಬಸಿ ಕಚೇರಿ ಮೇಲೆ ಈ ವರ್ಷ ದಾಳಿಯಾಗಬಹುದು ಎಂದು ಗುಪ್ತಚರರು ನೀಡಿರುವ ಅಲರ್ಟ್ ಅನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ಇದು ಕಳೆದ ಕೆಲ ವಾರಗಳಿಂದಲೂ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
The Israel embassy in New Delhi has reportedly been on high alert in recent weeks amid “serious” fears of a possible terror attack by Iran-backed perpetrators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X