ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ ತಿಂಗಳಲ್ಲಿ 11 ದಿನಗಳ ಕಾಲ ಬ್ಯಾಂಕ್ ಬಂದ್

|
Google Oneindia Kannada News

Recommended Video

ನವೆಂಬರ್ ತಿಂಗಳಲ್ಲಿ 11 ದಿನಗಳು ಬ್ಯಾಂಕ್ ರಜೆ ಇರತ್ತಂತೆ ಹೌದಾ? | Oneindia Kannada

ಬೆಂಗಳೂರು, ಅಕ್ಟೋಬರ್ 26: ದಸರಾ ಹಬ್ಬಕ್ಕೆ ಹೊಂದಿಕೊಂಡಂತೆ ದೀಪಾವಳಿ ಹಬ್ಬವೂ ಬರುತ್ತಿದೆ. ಈ ಸಂದರ್ಭದಲ್ಲಿ ನವೆಂಬರ್ ತಿಂಗಳಿನಲ್ಲಿ ಸುಮಾರು 11 ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಿರಲಿವೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಏನಿದರ ಸತ್ಯಾಸತ್ಯತೆ?

ನವೆಂಬರ್ ತಿಂಗಳಿನಲ್ಲಿ ದೀಪಾವಳಿ ಜೊತೆಗೆ ಇನ್ನೂ ಅನೇಕ ಹಬ್ಬಗಳಿರುವ ಕಾರಣ, ಸರಣಿ ರಜೆ ಸಿಗಲಿದೆ. ಅನೇಕ ರಾಜ್ಯಗಳಲ್ಲಿ 11 ದಿನಗಳ ಕಾಲ ಬ್ಯಾಂಕ್ ಗಳು ಬಾಗಿಲು ಮುಚ್ಚುವ ಸಾಧ್ಯತೆಯಿದೆ. ಆದರೆ, ಕಡ್ಡಾಯ ರಜೆಗಳು ಕಡಿಮೆಯಿವೆ.

ಅಬ್ಬಬ್ಬಾ.. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಹನ್ನೊಂದು ದಿನ ರಜೆಅಬ್ಬಬ್ಬಾ.. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಹನ್ನೊಂದು ದಿನ ರಜೆ

ಆದರೆ, ಯಾವುದಕ್ಕೂ ಹಬ್ಬಕ್ಕೂ ಮುನ್ನವೇ ಹಣ ಹೊಂದಿಸಿಕೊಳ್ಳುವುದು, ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಎಟಿಎಂ ಮುಂದೆ ಪರದಾಡಬೇಕಾಗುತ್ತದೆ.

ಸರಣಿ ರಜೆ ಇರುವ ಹಿನ್ನಲೆಯಲ್ಲಿ ಎಟಿಎಂಗಳಿಗೆ ಅಗತ್ಯ ಹಣವನ್ನು ಜಮೆ ಮಾಡಲಾಗುವುದು ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಎಸ್ ಬಿಐ ಬ್ಯಾಂಕ್ ವಕ್ತಾರರು ಹೇಳಿದ್ದಾರೆ. ದಕ್ಷಿಣ ಭಾರತಕ್ಕೂ ಹಾಗೂ ಉತ್ತರ ಭಾರತಕ್ಕೂ ರಜೆ ದಿನಗಳಲ್ಲಿ ಕೊಂಚ ವ್ಯತ್ಯಾಸ ಕಂಡು ಬಂದರೂ ಬಹುತೇಕ ಎಲ್ಲೆಡೆ 11 ದಿನಗಳ ಕಾಲ ಬ್ಯಾಂಕ್ ವ್ಯವಹಾರ ಇರುವುದಿಲ್ಲ.

ಕರ್ನಾಟಕ ಹಾಗೂ ಕೇರಳದಲ್ಲಿ ಹೆಚ್ಚುವರಿ ರಜೆ

ಕರ್ನಾಟಕ ಹಾಗೂ ಕೇರಳದಲ್ಲಿ ಹೆಚ್ಚುವರಿ ರಜೆ

ಕರ್ನಾಟಕದಲ್ಲಿ ನವೆಂಬರ್ 01(ರಾಜ್ಯೋತ್ಸವ), 04,11,18,25 ಭಾನುವಾರ, 06 ಹಾಗೂ 08 ದೀಪಾವಳಿ, 10 ಎರಡನೇ ಶನಿವಾರ, 21 ಈದ್ ಮಿಲಾದ್, 23 ಗುರುನಾನಕ್ ಜಯಂತಿ, 24 ನಾಲ್ಕನೇ ಶನಿವಾರ ಹಾಗೂ 26ರಂದು ಕನಕದಾಸ ಜಯಂತಿ ರಜೆ ಇರುತ್ತದೆ. ಕೇರಳದಲ್ಲೂ ನವೆಂಬರ್ 01ರಂದು ರಾಜ್ಯ ಸಂಸ್ಥಾಪನಾ ದಿನಾಚರಣೆ ಇರುವುದರಿಂದ ಹೆಚ್ಚುವರಿ ರಜೆ ಸಿಗಲಿದೆ.

ನಾಲ್ಕು ಭಾನುವಾರ, 2 ಶನಿವಾರ

ನಾಲ್ಕು ಭಾನುವಾರ, 2 ಶನಿವಾರ

ದಕ್ಷಿಣ ಭಾರತ ಹಾಗೂ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ 5 ರಿಂದ 9ರವರೆಗೂ ಸರ್ಕಾರಿ ರಜೆಯಿರಲಿದೆ. ನವೆಂಬರ್ 4, 11, 18 ಹಾಗೂ 25 ಭಾನುವಾರದಂದು ಬ್ಯಾಂಕ್ ರಜೆ. ನವೆಂಬರ್ 10 ರಂದು ಎರಡನೇ ಶನಿವಾರ, 24ರಂದು ನಾಲ್ಕನೇ ಶನಿವಾರ ಹೀಗಾಗಿ ರಜೆ ಸಿಗಲಿದೆ.

ಸರ್ಕಾರಿ ರಜೆ ದಿನಗಳು

ಸರ್ಕಾರಿ ರಜೆ ದಿನಗಳು

* ಅಕ್ಟೋಬರ್ 27 : ನಾಲ್ಕನೇ ಶನಿವಾರ
* ನವೆಂಬರ್ 06 : ದೀಪಾವಳಿ ನರಕ ಚತುರ್ದಶಿ (ಕೆಲ ರಾಜ್ಯಗಳಿಗೆ ಸೀಮಿತ)
* ನವೆಂಬರ್ 07 : ದೀಪಾವಳಿ ಅಮಾವಾಸ್ಯೆ (ಬಹುತೇಕ ಎಲ್ಲಾ ರಾಜ್ಯಗಳಿಗೆ ಅನ್ವಯ)
* ನವೆಂಬರ್ 08: ದೀಪಾವಳಿ ಬಲಿಪಾಡ್ಯಮಿ (ಕೆಲ ರಾಜ್ಯಗಳಲ್ಲಿ ರಜೆ)
* ನವೆಂಬರ್ 21 : ಈದ್ ಇ ಮಿಲಾದ್
* ನವೆಂಬರ್ 23 : ಗುರು ನಾನಕ್ ಜಯಂತಿ (ಕೆಲ ರಾಜ್ಯಗಳಿಗೆ ಅನ್ವಯ)

ಬ್ಯಾಂಕ್ ರಜೆ ದಿನಗಳ ಪಟ್ಟಿಯನ್ನು ಇಲ್ಲಿ ನೋಡಿ

ಸರ್ಕಾರಿ ಜತೆಗೆ ಖಾಸಗಿ ಬ್ಯಾಂಕ್ ಗಳು ಬಂದ್

ಸರ್ಕಾರಿ ಜತೆಗೆ ಖಾಸಗಿ ಬ್ಯಾಂಕ್ ಗಳು ಬಂದ್

ನವೆಂಬರ್ 13, 14 ರಂದು ಬಿಹಾರ, ಜಾರ್ಖಂಡದಲ್ಲಿ ಛತ್ ಪೂಜೆ ಸಂಭ್ರಮದ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ಬ್ಯಾಂಕ್ ಗಳು ಬಾಗಿಲು ಮುಚ್ಚಲಿವೆ. ನವೆಂಬರ್ 21 ರಂದು ಈದ್ -ಎ-ಮಿಲಾದ್, ನವೆಂಬರ್ 23 ರಂದು ಗುರುನಾನಕ್ ಜಯಂತಿ. ಹಾಗಾಗಿ ಕೆಲ ರಾಜ್ಯಗಳಲ್ಲಿ ಮಾತ್ರ ಬ್ಯಾಂಕ್ ಗಳಿಗೆ ರಜೆಯಿರಲಿದೆ.

English summary
Is that banks will remain closed for 11 days in October end and November are triggering confusion. Here is the truth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X