ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಆರ್‌ಎಫ್‌ಸಿ 4,600 ಕೋಟಿ ರೂಪಾಯಿ ಐಪಿಒ: ಮುಂದಿನ ವಾರ ಆರಂಭ

|
Google Oneindia Kannada News

ನವದೆಹಲಿ, ಜನವರಿ 13: ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ (IRFC) 4,600 ಕೋಟಿ ರುಪಾಯಿಯ ಇನ್ಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಮುಂದಿನ ವಾರದಿಂದ ಆರಂಭವಾಗಲಿದೆ.

ಮುಖಬೆಲೆಯ ತಲಾ 10 ರೂ.ಗಳ ಪ್ರತಿ ಷೇರಿಗೆ 25 ರಿಂದ 26 ರೂ. ದರವನ್ನು ಬ್ಯಾಂಡ್ ನಿಗದಿ ಮಾಡಲಾಗಿದೆ. ಜನವರಿ 18ರಂದು ಆರಂಭವಾಗುವ ಐಪಿಒ ಜನವರಿ 20ರಂದು ಮುಕ್ತಾಯ ಆಗಲಿದೆ.

ಭಾರತೀಯ ಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್, ನಿಫ್ಟಿ ಮತ್ತಷ್ಟು ಎತ್ತರಕ್ಕೆ ಜಿಗಿತಭಾರತೀಯ ಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್, ನಿಫ್ಟಿ ಮತ್ತಷ್ಟು ಎತ್ತರಕ್ಕೆ ಜಿಗಿತ

ಐಆರ್‌ಎಫ್‌ಸಿ ಸಂಚಿಕೆ ಒಟ್ಟು 4,600 ಕೋಟಿ ರೂ.ಗಳ 178.20 ಕೋಟಿ ಷೇರುಗಳನ್ನು ಒಳಗೊಂಡಿದೆ. ವೆಬ್ ಸೈಟ್ ಮಾಹಿತಿಯಂತೆ, ಐಆರ್‌ಎಫ್‌ಸಿ ಎಂಬುದು ಷೆಡ್ಯೂಲ್ 'A' ಸಾರ್ವಜನಿಕ ಸ್ವಾಮ್ಯದ ಸಂಸ್ಥೆ. ರೈಲ್ವೆ ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹತೋಟಿಯಲ್ಲಿ ಬರುತ್ತದೆ.

IRFC IPO To Open On January 18: Know More

ಬಿಡ್‌ಗಳನ್ನು ಕನಿಷ್ಠ 575 ಈಕ್ವಿಟಿ ಷೇರುಗಳಿಗೆ ಮತ್ತು ನಂತರದ ಗುಣಾಕಾರಗಳಲ್ಲಿ ಮಾಡಬಹುದು. ವಿತರಣೆಯ ಶೇಕಡಾ 50ಕ್ಕಿಂತ ಹೆಚ್ಚು ಅರ್ಹತಾ ಸಾಂಸ್ಥಿಕ ಖರೀದಿದಾರರಿಗೆ (ಕ್ಯೂಐಬಿ) ಮೀಸಲಿಡಲಾಗುವುದಿಲ್ಲ, ಆದರೆ ಶೇಕಡಾ 35ರಷ್ಟು ಚಿಲ್ಲರೆ ಹೂಡಿಕೆದಾರರಿಗೆ ಮತ್ತು 15ರಷ್ಟು ಸಂಚಿಕೆ ಸಾಂಸ್ಥಿಕೇತರ ವರ್ಗಕ್ಕೆ ಮೀಸಲಿಡಲಾಗುತ್ತದೆ.

English summary
The Rs 4,600-crore Indian Rail Finance Corporation (IRFC)’s initial public offering (IPO) will open for subscription next week on January 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X