ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ

|
Google Oneindia Kannada News

ನವದೆಹಲಿ, ಜೂನ್ 21: ಆನ್ ಲೈನ್ ಟಿಕೆಟ್ ರದ್ದುಗೊಳಿಸುವುದು, ರೀಫಂಡ್ ವ್ಯವಸ್ಥೆಯಲ್ಲಿ IRCTC ಬದಲಾವಣೆ ಮಾಡಿದೆ.

ಸದ್ಯದ ಪರಿಸ್ಥಿತಿಯಲ್ಲಿ ಎರಡು-ಮೂರು ದಿನಗಳವರೆಗೆ ರೀಫಂಡ್ ಗಾಗಿ ಪ್ರಯಾಣಿಕರು ಕಾಯಬೇಕಾಗಿದೆ. ಐಆರ್ ಸಿಟಿಸಿಗಳ ಪಾವತಿ ಗೇಟ್ ವೇ ಐಆರ್ ಸಿಟಿಸಿ-ipay ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಗೊಳಿಸಿದ ತಕ್ಷಣ ತಮ್ಮ ಮರುಪಾವತಿಯನ್ನು ಪಡೆಯಲಿದ್ದಾರೆ.

ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ 2019ರಲ್ಲಿ ಐಆರ್ ಸಿಟಿಸಿ-ಐಪೇ ಅನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಹೊಸ ವ್ಯವಸ್ಥೆಗಳು ಪ್ರಯಾಣಿಕರನ್ನು ರದ್ದುಗೊಳಿಸುವುದರ ಜೊತೆಗೆ ತತ್ಕಾಲ್ ಮತ್ತು ನಿಯಮಿತ ಟಿಕೆಟ್ ಗಳನ್ನು ತ್ವರಿತವಾಗಿ ಕಾಯ್ದಿರಿಸಲು ಅವಕಾಶ ನೀಡುತ್ತದೆ ಎಂದು ಐಆರ್ ಸಿಟಿಸಿ ಹೇಳಿದೆ.

IRCTC Latest Update: Railway Introduces Major Changes For Online Ticket Booking. Details Inside

ಐಆರ್ ಸಿಟಿಸಿ-ಐಪೇ ಮೂಲಕ ಕಡಿಮೆ ಸಮಯದಲ್ಲಿ ಟಿಕೆಟ್ ಗಳನ್ನು ಕಾಯ್ದಿರಿಸಬಹುದಾಗಿದ್ದು, ಟಿಕೆಟ್ ಐಪೇ ಮೂಲಕ ಬುಕ್ ಮಾಡುವ ವಿಧಾನ ಇಲ್ಲಿದೆ;
1. ಐಆರ್ ಸಿಟಿಸಿ ಅಧಿಕೃತ ವೆಬ್ ತಾಣಕ್ಕೆ ಭೇಟಿ ಕೊಡಿ www.irctc.co.in
2. ಪ್ರಯಾಣಕ್ಕೆ ಸಂಬಂಧಿಸಿದ ವಿವರಗಳನ್ನು ದಾಖಲಿಸಿ
3. ಪ್ರಯಾಣಿಕರ ವಿವರ ನಮೂದಿಸಿ
4. ಪೇ ಹಾಗೂ ಬುಕ್ ಮಾಡಿ
5. ಕ್ರೆಡಿಟ್/ ಡೆಬಿಟ್/ ಪ್ರೀಪೇಯ್ಡ್ ಕಾರ್ಡ್/ಯುಪಿಐ ಬಳಸಿ ಹಣ ಪಾವತಿಸಿ
6. ಟಿಕೆಟ್ ಬುಕ್ ನಂತರ ಎಸ್ಎಂಎಸ್/ ಇಮೇಲ್ ಬರಲಿದೆ.

English summary
IRCTC Latest Update: Railway Introduces Major Changes For Online Ticket Booking. Details Inside
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X