ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC IPO: ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ, ಷೇರಿಗೆ ಭಾರೀ ಬೇಡಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC)ನ 645 ಕೋಟಿ ರುಪಾಯಿ ಮೌಲ್ಯದ ಸಾರ್ವಜನಿಕ ಆರಂಭಿಕ ಕೊಡುಗೆ (ಐಪಿಒ)ಯು ಆರಂಭದ ದಿನವಾದ ಸೋಮವಾರ ಕೆಲವೇ ಗಂಟೆಯಲ್ಲಿ ಶೇಕಡಾ 76ರಷ್ಟು ಖರೀದಿಗೆ ಬೇಡಿಕೆ ಪಡೆದಿದೆ.

IRCTC ಐಪಿಒ ಸೆಪ್ಟೆಂಬರ್ 30ರಿಂದ ಆರಂಭವಾಗಿದೆ. ಒಟ್ಟು 1.53 ಕೋಟಿ ಈಕ್ವಿಟಿ ಷೇರುಗಳಿಗೆ ಬೇಡಿಕೆ ಬಂದಿದೆ. ಒಟ್ಟು 2.016 ಕೋಟಿ ಷೇರುಗಳನ್ನು ಮಾರಾಟಕ್ಕೆ ಇಡಲಾಗಿದೆ. ರೀಟೇಲ್ ಹೂಡಿಕೆದಾರರಿಗೆ ಮೀಸಲಿಟ್ಟಿರುವ ಷೇರಿನ ಪ್ರಮಾಣದ ಎರಡರಷ್ಟು ಬೇಡಿಕೆ ಬಂದಿದೆ. ಇನ್ನು IRCTC ಉದ್ಯೋಗಿಗಳಿಗಾಗಿ ಮೀಸಲಿಟ್ಟ ಷೇರುಗಳಿಗೆ ಪೂರ್ಣ ಪ್ರಮಾಣದಲ್ಲಿ ಬೇಡಿಕೆ ಬಂದಿದೆ. ಇನ್ನು ಸಂಸ್ಥೆಯೇತರ ಹೂಡಿಕೆದಾರರು ಶೇಕಡಾ 15ರಷ್ಟು ಷೇರುಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ.

IRCTC ಐಪಿಒ ಮೂಲಕ ಐನೂರರಿಂದ ಆರು ನೂರು ಕೋಟಿ ಸಂಗ್ರಹIRCTC ಐಪಿಒ ಮೂಲಕ ಐನೂರರಿಂದ ಆರು ನೂರು ಕೋಟಿ ಸಂಗ್ರಹ

ಈ ಐಪಿಒ ಅಕ್ಟೋಬರ್ 3ನೇ ತಾರೀಕಿನ ತನಕ ಇರುತ್ತದೆ. 2019-20ನೇ ಸರ್ಕಾರದ ಬಂಡವಾಳ ಹಿಂತೆಗೆತದಲ್ಲಿ ಇದು ಕೂಡ ಒಂದು. ಈ ಐಪಿಒನಲ್ಲಿ 2,01,60,000 ಷೇರುಗಳನ್ನು ಮಾರಾಟಕ್ಕೆ ಇಡಲಾಗಿದೆ. ಆ ಮೂಲಕ IRCTCಯಲ್ಲಿ ಸರ್ಕಾರದ ಪಾಲು ಶೇ 87.40ಗೆ ಇಳಿಕೆ ಆಗಲಿದೆ.

IRCTC IPO: Strong Demand From Retail Investors

ಇನ್ನು 1,60,000 ಷೇರುಗಳನ್ನು ಉದ್ಯೋಗಿಗಳಿಗೆ ಮೀಸಲಿಡಲಾಗಿದೆ. ರೀಟೇಲ್ ಹೂಡಿಕೆದಾರರ ಜತೆಗೆ ಉದ್ಯೋಗಿಗಳಿಗೂ ಅಂತಿಮ ಆಫರ್ ಬೆಲೆಯಲ್ಲಿ 10 ಪರ್ಸೆಂಟ್ ರಿಯಾಯಿತಿ ಸಿಗಲಿದೆ. ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು IRCTC ಷೇರುಗಳ ಬಗ್ಗೆ ಬಹುತೇಕ ಷೇರು ದಲ್ಲಾಳಿಗಳು ಖರೀದಿಗೆ ಸಲಹೆ ಮಾಡಿದ್ದಾರೆ. ವಿತರಣೆ ಬೆಲೆ 315ರಿಂದ 320ಕ್ಕೆ ನಿಗದಿ ಮಾಡಲಾಗಿದೆ.

ಭಾರತೀಯ ರೈಲ್ವೆಗೆ ಕ್ಯಾಟರಿಂಗ್ ಸೇವೆ ಮಾಡಲು ಅನುಮತಿ ಇರುವ ಏಕೈಕ ಸಂಸ್ಥೆ IRCTC. ಆನ್ ಲೈನ್ ಟಿಕೆಟ್ ಗಳು, ರೈಲು ನಿಲ್ದಾಣದಲ್ಲಿ ಹಾಗೂ ರೈಲುಗಳ ಒಳಗೆ ಪ್ಯಾಕೇಜ್ಡ್ ಕುಡಿಯುವ ನೀರನ್ನು IRCTC ಮಾರಾಟ ಮಾಡುತ್ತದೆ. ಸರ್ಕಾರ ನಡೆಸುವ ಈ ಸಂಸ್ಥೆಯು ಇಂಟರ್ ನೆಟ್ ಟಿಕೆಟಿಂಗ್, ಕ್ಯಾಟರಿಂಗ್, ಪ್ಯಾಕೇಜ್ಡ್ ಕುಡಿಯುವ ನೀರು ಮತ್ತು ಪ್ರಯಾಣ ಹಾಗೂ ಪ್ರವಾಸೋದ್ಯಮವನ್ನು ನಿರ್ವಹಿಸುತ್ತದೆ.

English summary
IRCTC IPO opened on September 30th. 76% of shares subscribed On day 1. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X