ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC IPO: 645 ಕೋಟಿ ಹಣ ಸಂಗ್ರಹ ಗುರಿಗೆ 72,000 ಕೋಟಿ ಬಂತು

|
Google Oneindia Kannada News

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ ನ (IRCTC) IPO ಗುರುವಾರದಂದು ಮುಕ್ತಾಯವಾಗಿದ್ದು, ಷೇರು ಹೂಡಿಕೆದಾರರಿಂದ ಭಾರೀ ಬೇಡಿಕೆ ಕಂಡುಬಂದಿದೆ. ಐಪಿಒ ಮೂಲಕ 645 ಕೋಟಿ ರುಪಾಯಿ ಸಂಗ್ರಹಿಸಲು ಮುಂದಾಗಿದ್ದರೆ, ಬಿಡುಗಡೆ ಮಾಡಲಿರುವ ಷೇರುಗಳ ಸಂಖ್ಯೆಗಿಂತ 112 ಪಟ್ಟು ಹೆಚ್ಚು ಬೇಡಿಕೆ ಬಂದಿದೆ ಎಂಬುದನ್ನು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನ ಮಾಹಿತಿ ನೀಡುತ್ತಿದೆ.

ಐಆರ್ ಸಿಟಿಸಿ ವೆಬ್ ಸೇವೆಗೆ ಇನ್ನಷ್ಟು ಸೌಲಭ್ಯಗಳು ಸೇರ್ಪಡೆಐಆರ್ ಸಿಟಿಸಿ ವೆಬ್ ಸೇವೆಗೆ ಇನ್ನಷ್ಟು ಸೌಲಭ್ಯಗಳು ಸೇರ್ಪಡೆ

ಐಪಿಒ ಮೂಲಕ ಮಾರಾಟಕ್ಕೆ ಇಟ್ಟಿರುವುದು 2.02 ಕೋಟಿ ಷೇರುಗಳನ್ನು. ಆದರೆ ಹೂಡಿಕೆದಾರರಿಂದ 225 ಕೋಟಿ ಷೇರುಗಳಿಗೆ ಬೇಡಿಕೆ ಬಂದಿದೆ. ಆ ಮೂಲಕ IRCTCಗೆ 72,000 ಕೋಟಿ ರುಪಾಯಿ ಹಣ ಹರಿದುಬಂದಿದೆ. ಭಾರತೀಯ ರೈಲ್ವೆಯ ಟಿಕೆಟ್ ಗಳನ್ನು ಅಧಿಕೃತವಾಗಿ ಆನ್ ಲೈನ್ ನಲ್ಲಿ ಮಾರಾಟ ಮಾಡುವ, ಕ್ಯಾಟರಿಂಗ್ ಸೇವೆ ನೀಡುವ ಹಾಗೂ ಪ್ಯಾಕೇಜ್ಡ್ ಕುಡಿಯುವ ನೀರಿನ ಉತ್ಪಾದನೆ ಮತ್ತು ಮಾರಾಟ ಮಾಡುವ ಸಂಸ್ಥೆ ಐಆರ್ ಸಿಟಿಸಿ.

IRCTC IPO

ಭಾರತದಾದ್ಯಂತ ಇರುವ ರೈಲು ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ ಈ ಸೇವೆಯನ್ನು IRCTC ನೀಡುತ್ತಿದೆ. ಅಪನಗದೀಕರಣದ ನಂತರ ಸೇವಾಶುಲ್ಕ ಹಾಕುವುದನ್ನು ಐಆರ್ ಸಿಟಿಸಿ ನಿಲ್ಲಿಸಿತ್ತು. ಆದರೆ ಮುಂದಿನ ಆರ್ಥಿಕ ವರ್ಷದಿಂದ ಮತ್ತೆ ಸೇವಾ ಶುಲ್ಕವನ್ನು ವಿಧಿಸಲಿದ್ದು, ಅದರಿಂದ ಆದಾಯದಲ್ಲಿ ಹೆಚ್ಚಳ ಆಗಲಿದೆ. ಜತೆಗೆ ಕಾರ್ಪೊರೇಟ್ ತೆರಿಗೆಯಲ್ಲಿ ಸಹ ಇಳಿಕೆ ಮಾಡಿರುವುದು ಅನುಕೂಲವಾಗಿ ಪರಿಣಮಿಸಲಿದೆ.

English summary
IRCTC IPO on last day, that is October 3rd over subscribed by 112 times. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X