ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC ಐಪಿಒ ಮೂಲಕ ಐನೂರರಿಂದ ಆರು ನೂರು ಕೋಟಿ ಸಂಗ್ರಹ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಸರ್ಕಾರಿ ಸ್ವಾಮ್ಯದ ಇಂಡಿಯನ್ ರೈಲ್ವೆ ಕೆಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಮುಂದಾಗಿದೆ. ಸೆಪ್ಟೆಂಬರ್ ಮೂವತ್ತನೇ ತಾರೀಕು ಐಪಿಒ ಆರಂಭವಾಗುವ ನಿರೀಕ್ಷೆ ಇದೆ. ಭಾರತೀಯ ರೈಲ್ವೆಯ ಟಿಕೆಟ್ ಬುಕ್ಕಿಂಗ್ ಹಾಗೂ ಕೆಟರಿಂಗ್ ಸೇವೆಯನ್ನು IRCTC ನೋಡಿಕೊಳ್ಳುತ್ತದೆ.

IRCTC ಐಪಿಒ ಮೂಲಕ ಎರಡು ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದೆ. ಆ ಮೂಲಕ ಐನೂರರಿಂದ ಆರು ನೂರು ಕೋಟಿ ರುಪಾಯಿ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ. ಈ ಐಪಿಒ ಮೂಲಕ IRCTCಯಲ್ಲಿ ಸರ್ಕಾರದ ಷೇರಿನ ಪ್ರಮಾಣವು ಹನ್ನೆರಡೂವರೆ ಪರ್ಸೆಂಟ್ ಕಡಿಮೆ ಆಗಲಿದೆ.

IRCTC IPO: 500 to 600 Crore Raising By Central Government

ಹತ್ತು ರುಪಾಯಿ ಮುಖಬೆಲೆಯ ಎರಡು ಕೋಟಿ ಈಕ್ವಿಟಿ ಷೇರುಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡಲಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇನ್ನು ಐಆರ್ ಎಫ್ ಸಿ ಐಪಿಒ ಕೂಡ ಬರಲಿದೆ ಎನ್ನಲಾಗಿದ್ದು, ಆ ಮೂಲಕ ಸಾವಿರ ಕೋಟಿ ಸಂಗ್ರಹ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.

English summary
State owned IRCTC IPO likely to launch on September 30th. Which is likely to raise 500 to 600 crore by central government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X