ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC ಷೇರು: 320ಕ್ಕೆ ವಿತರಿಸಿದ್ದು ಮೊದಲ ದಿನವೇ 728 ತಲುಪಿತು

|
Google Oneindia Kannada News

ಮುಂಬೈ, ಅಕ್ಟೋಬರ್ 14: ಐಆರ್ ಸಿಟಿಸಿ ಷೇರುಗಳನ್ನು ಐಪಿಒನಲ್ಲಿ ಪಡೆದವರು ಭರ್ಜರಿ ಲಾಭದಲ್ಲಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಸೋಮವಾರ ಲಿಸ್ಟಿಂಗ್ ಆದ ಮೊದಲ ದಿನವೇ ಷೇರಿನ ಬೆಲೆಯು ವಿತರಣೆ ಮಾಡಿದ್ದಕ್ಕಿಂತ 400 ರುಪಾಯಿಗೂ ಹೆಚ್ಚು ಏರಿಕೆ ಆಗಿದೆ. ಪರ್ಸೆಂಟೇಜ್ ಲೆಕ್ಕದಲ್ಲಿ ಹೇಳಬೇಕು ಅಂದರೆ, 127% ಹೆಚ್ಚಳವಾಗಿ 728 ರುಪಾಯಿಗೆ ದಿನಾಂತ್ಯದ ವಹಿವಾಟು ಮುಗಿಸಿದೆ.

IRCTC IPO: 645 ಕೋಟಿ ಹಣ ಸಂಗ್ರಹ ಗುರಿಗೆ 72,000 ಕೋಟಿ ಬಂತುIRCTC IPO: 645 ಕೋಟಿ ಹಣ ಸಂಗ್ರಹ ಗುರಿಗೆ 72,000 ಕೋಟಿ ಬಂತು

ಸೆಪ್ಟೆಂಬರ್ 30ರಿಂದ ಅಕ್ಟೋಬರ್ 3ರ ಮಧ್ಯೆ ಐಆರ್ ಸಿಟಿಸಿ ಷೇರುಗಳನ್ನು ಐಪಿಒ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಮಾಡಲಿದ್ದ ಷೇರುಗಳ ಸಂಖ್ಯೆಗಿಂತ 112 ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು. ರೀಟೇಲ್ ಹೂಡಿಕೆದಾರರಿಗೆ ಮೀಸಲಾಗಿ ಇರಿಸಿದ್ದಕ್ಕಿಂತ ಹದಿನೈದು ಪಟ್ಟು ಹೆಚ್ಚು, ಕ್ವಾಲಿಫೈಡ್ ಇನ್ ಸ್ಟಿಟ್ಯೂಷನಲ್ ಖರೀದಿದಾರರಿಂದ 109 ಪಟ್ಟು, ನಾನಾ ಇನ್ ಸ್ಟಿಟ್ಯೂಷನಲ್ ಹೂಡಿಕೆದಾರರಿಂದ 355 ಪಟ್ಟು ಬೇಡಿಕೆ ಬಂದಿತ್ತು.

IRCTC IPO: 128 Percent Gain On First Day Of Listing In Stock Market

10 ರುಪಾಯಿ ಮುಖ ಬೆಲೆಯ ಷೇರಿಗೆ 310ರಿಂದ 320 ರುಪಾಯಿ ಮಧ್ಯೆ ದರ ನಿಗದಿ ಮಾಡಲಾಗಿತ್ತು. ರೀಟೇಲ್ ಹೂಡಿಕೆದಾರರಿಗೆ ಹತ್ತು ರುಪಾಯಿ ರಿಯಾಯಿತಿ ಕೂಡ ಇತ್ತು. 32,000 ರುಪಾಯಿಯಷ್ಟು ಷೇರನ್ನು ಐಪಿಒನಲ್ಲಿ ಖರೀದಿ ಮಾಡಿದವರಿಗೆ ಹತ್ತು- ಹನ್ನೊಂದು ದಿನದಲ್ಲಿ ಆದೇ ಷೇರಿನ ಮೌಲ್ಯ 72,800 ಅದಂತಾಗಿದೆ.

English summary
IRCTC share closed for 728 rupees on it's first day of listing on Monday (October 14, 2019). Issue price of share was 320.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X