• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?

By ಕ್ರೀಡಾ ಡೆಸ್ಕ್
|

ದೆಹಲಿ, ಫಲೋಡಿ (ರಾಜಸ್ಥಾನ), ಇಂದೋರ್, ಕೋಲ್ಕತ್ತಾ, ಆಗ್ರಾ, ಭಾವ್ನಗರ್, ಮುಂಬೈ, ಬೆಂಗಳೂರು ಹಾಗೂ ನಾಗ್ಪುರ್ ಸೇರಿದಂತೆ ದೇಶದ ಹಲವೆಡೆ ವಿಸ್ತರಿಸಿರುವ ಬೆಟ್ಟಿಂಗ್ ಬಜಾರಿನ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಸೆ. 19ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಮಲಗಿರುವ ಈ ಅಡ್ಡಾಗಳಿಗೆ ಕಿಕ್ ಕೊಡಲಿದೆ. ಭಾರತದಲ್ಲಿ ಎಲ್ಲಾ ಬಗೆಯ ಜೂಜು, ಬೆಟ್ಟಿಂಗ್ ದಂಧೆ ನಿಷಿದ್ಧ.

ಬೆಟ್ಟಿಂಗ್ ನಲ್ಲಿ ತೊಡಗಿರುವುದು ಕಂಡು ಬಂದರೆ ಗೂಂಡಾ ಕಾಯ್ದೆ, ಕೋಕಾ ಕಾಯ್ದೆಯಡಿಯಲ್ಲಿ ಬಂಧಿಸಿ ಜಾಮೀನು ರಹಿತ ಸೆಕ್ಷನ್ ಗಳಡಿಯಲ್ಲಿ ಕೊಳೆಯುವಂತೆ ಮಾಡಬಹುದು. ಆದರೆ, ಕಪ್ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿಯುವುದನ್ನು ತಪ್ಪಿಸಲು ಸಾಧ್ಯವಿಲ್ಲ, ಬುಕ್ಕಿಗಳ ಪ್ರಕಾರ ಯಾವ ತಂಡ ಫೇವರಿಟ್? ಮುಂದೆ ಓದಿ..

ಆದರೆ, ಈಗೆಲ್ಲ ಆನ್ ಲೈನ್ ಬೆಟ್ಟಿಂಗ್ ಜಮಾನ, ಇಂದು ಗೂಗಲ್ ತನ್ನ ಪ್ಲೇ ಸ್ಟೋರಿನಿಂದ ಪೇಟಿಎಂ ಡಿಜಿಟಲ್ ವ್ಯಾಲೆಟ್, ಆಪ್ ಆಧಾರಿತ ಗ್ಯಾಂಬ್ಲಿಂಗ್ ವ್ಯವಸ್ಥೆಯನ್ನು ತೆಗೆದು ಹಾಕಿದೆ.

ಐಪಿಎಲ್ ಮಹಾಸಮರ 2020 ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸರಿ ಪೀಠಿಕೆ ಸಾಕು, ವಿಷ್ಯಕ್ಕೆ ಬರೋಣ.. ಪ್ರತಿ ಸಲದಂತೆ ಈ ಐಪಿಎಲ್ ಟೂರ್ನಮೆಂಟ್ ಗೆಲ್ಲಬಲ್ಲ ನೆಚ್ಚಿನ ತಂಡ ಯಾವುದು? ಎಂಬ ಪ್ರಶ್ನೆಗೆ ಬುಕ್ಕಿಗಳು, ಆನ್ ಲೈನ್ ಬೆಟ್ಟಿಂಗ್ ವೆಬ್ ತಾಣಗಳು ನೀಡುವ ವರದಿಯ ಸಾರ ಸಂಗ್ರಹ ಇಲ್ಲಿದೆ

ಸಾವಿರಾರು ಕೋಟಿ ರು ವ್ಯವಹಾರ

ಸಾವಿರಾರು ಕೋಟಿ ರು ವ್ಯವಹಾರ

ಭಾರತದಲ್ಲಿ ವಾರ್ಷಿಕ 10 ಲಕ್ಷ ಕೋಟಿ ರು ಮೊತ್ತದ ಬೆಟ್ಟಿಂಗ್ ನಡೆದರೆ ಅದರಲ್ಲಿ ಕ್ರಿಕೆಟ್ ನದ್ದೇ ಸಾವಿರಾರು ಕೋಟಿ ರು ಇರುತ್ತದೆ. ಮಿಕ್ಕಂತೆ ಗ್ರಾಮ ಪಂಚಾಯಿತಿಯಿಂದ ಪಾರ್ಲಿಮೆಂಟ್ ಎಲೆಕ್ಷನ್ ತನಕ ಎಲ್ಲವೂ ಬೆಟ್ಟಿಂಗ್ ಗೆ ಒಳಪಟ್ಟಿವೆ. ಐಪಿಎಲ್ ಸಂದರ್ಭದಲ್ಲಿ ಬುಕ್ಕಿಗಳಿಗೆ, ಗ್ರಾಹಕರಿಗೆ ಡಿಜಿಟಲ್ ಪೇಮೆಂಟ್ ವರದಾನ. ಭಾರತದಲ್ಲಿ ಇನ್ನೂ ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಶೈಶವಾವಸ್ಥೆಯಲ್ಲಿದೆ. ಹೀಗಾಗಿ ಡಿಜಿಟಲ್ ಪೇಮೆಂಟ್ ಮೂಲಕವೇ ಹೆಚ್ಚಿನ ವ್ಯವಹಾರ ನಡೆಯುತ್ತವೆ.

ಕೊರೊನಾ ಕರಿನೆರಳಿನಲ್ಲಿ ಬೆಟ್ಟಿಂಗ್

ಕೊರೊನಾ ಕರಿನೆರಳಿನಲ್ಲಿ ಬೆಟ್ಟಿಂಗ್

ಮೈದಾನದಲ್ಲಿ ಪ್ರೇಕ್ಷಕರಿಲ್ಲದೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಈ ಬಾರಿ ಐಪಿಎಲ್ ಆಯೋಜಿಸಲಾಗುತ್ತಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಲಿವೆ. ಬುಕ್ಕಿಗಳ ಪ್ರಕಾರ ಈ ಎರಡು ತಂಡಗಳೇ ಅಂತಿಮ ಹಣಾಹಣಿಯಲ್ಲೂ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಕ್ರಮವಾಗಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ಟಾಪ್ ತಂಡಗಳಾಗಿ ಹೊರ ಹೊಮ್ಮಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಬಾರಿಯೂ ನಿರಾಶೆ ಕಾದಿದೆ ಎಂದು ಬುಕ್ಕಿಗಳು ಹೇಳಿದ್ದಾರೆ. ಭವಿಷ್ಯ ಏನಾಗುತ್ತೋ ಕಾದು ನೋಡೋಣ ಎಂದು ಅಭಿಮಾನಿಗಳು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಪಾಯಕಾರಿ ಆಟಗಾರರು, ವೇಳಾಪಟ್ಟಿ, ಮಾಹಿತಿ

ಟಾಪ್ ಬೆಟ್ಟಿಂಗ್ ತಾಣದ ಪ್ರಕಾರ

ಟಾಪ್ ಬೆಟ್ಟಿಂಗ್ ತಾಣದ ಪ್ರಕಾರ

ಕ್ರಿಕೆಟ್ ಐಸಿಎಸ್ ಬೆಟ್ಟಿಂಗ್ ತಾಣದ ಪ್ರಕಾರ ಮುಂಬೈ ಇಂಡಿಯನ್ ಹಾಗೂ ಚೆನ್ನೈ ತಂಡಗಳು ಐಪಿಎಲ್ 2020 ಗೆಲ್ಲ ಬಲ್ಲ ನೆಚ್ಚಿನ ತಂಡಗಳೆನಿಸಿವೆ. ಸನ್ ರೈಸರ್ಸ್ ಹೈದರಾಬಾದ್ ಮೂರನೇ ಸ್ಥಾನದಲ್ಲಿದ್ದರೆ, ದೆಹಲಿ ಕ್ಯಾಪಿಟಲ್ಸ್ ಅಚ್ಚರಿಯ ಆಯ್ಕೆಯಾಗಿದ್ದು, ನಾಲ್ಕನೇ ಸ್ಥಾನಕ್ಕೇರಿದೆ. ಮಿಕ್ಕಂತೆ ಬುಕ್ಕಿಗಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲೆ ಯಾವುದೇ ನಿರೀಕ್ಷೆಯಿಲ್ಲ. ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ಲೆಕ್ಕಕ್ಕೇ ಇಲ್ಲ. ಒಂದು ಪಕ್ಷ ಈ ತಂಡಗಳು ಕಪ್ ಗೆದ್ದರೆ ಬುಕ್ಕಿಗಳು ಬರ್ಬಾದ್ ಆದ್ರು ಅಂಥಾನೇ ಲೆಕ್ಕ.

ಕನ್ನಡಿಗರ ತಂಡ ಕಿಂಗ್ಸ್ XI ಪಂಜಾಬ್‌ನ ಬಲ-ದೌರ್ಬಲ್ಯ, ವೇಳಾಪಟ್ಟಿ, ವಿಶೇಷತೆ

ಮತ್ತೊಂದು ಬೆಟ್ಟಿಂಗ್ ಅಡ್ಡಾದಿಂದ ಮಾಹಿತಿ

ಮತ್ತೊಂದು ಬೆಟ್ಟಿಂಗ್ ಅಡ್ಡಾದಿಂದ ಮಾಹಿತಿ

ಸ್ಫೋರ್ಟ್ಸ್ ಪೆಸಾ ಎಂಬ ಬೆಟ್ಟಿಂಗ್ ತಾಣದ ಪ್ರಕಾರ ಮುಂಬೈ ಇಂಡಿಯನ್ಸ್ ಗೆಲ್ಲುವ ನೆಚ್ಚಿನ ಕುದುರೆಯಾಗಿದೆ. ಆದರೆ, ಸನ್ ರೈಸರ್ಸ್ ಹೈದರಾಬಾದ್ ಎರಡನೇ ನೆಚ್ಚಿನ ತಂಡವೆನಿಸಿಕೊಂಡಿದ್ದು ,ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ನಾಲ್ಕನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದು ಹಾಗೂ ಮಿಕ್ಕ ತಂಡಗಳು ನಂತರದ ಸ್ಥಾನದಲ್ಲಿವೆ.

ಅಂತಾರಾಷ್ಟ್ರೀಯ ಬೆಟ್ಟಿಂಗ್ ತಾಣಗಳು

ಅಂತಾರಾಷ್ಟ್ರೀಯ ಬೆಟ್ಟಿಂಗ್ ತಾಣಗಳು

ಫುಟ್ಬಾಲ್ ನಂತೆ ಅಂತಾರಾಷ್ಟ್ರೀಯ ಬೆಟ್ಟಿಂಗ್ ತಾಣಗಳು ಈ ಬಾರಿ ಐಪಿಎಲ್ ನಲ್ಲಿ ಆಸಕ್ತಿ ವಹಿಸಿವೆ. ಬೆಟ್ 365, ಬೆಟ್ ವೇ, ವಿಲಿಯಂ ಹಿಲ್ಸ್, ಬೆಟ್ ಫೇರ್ ಮುಂತಾದ ಜನಪ್ರಿಯ ತಾಣಗಳೂ ಕೂಡಾ ಮುಂಬೈ ಇಂಡಿಯನ್ಸ್ ತಂಡದ ಪರವೇ ಹೆಚ್ಚು ಹಣ ಬೀಳಲಿದೆ ಎಂದಿವೆ. ಅದರಲ್ಲೂ ಬೆಟ್ 365 ತಾಣ ಒಂದು ಹೆಜ್ಜೆ ಮುಂದೆ ಹೋಗಿ ಸೆ. 19ರಂದು ಅಬುದಾಭಿಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಸೋಲಿಸಲಿದೆ ಎಂದು ವರದಿ ನೀಡಿದೆ.

ಬ್ಯಾಟ್ಸ್ ಮನ್, ಬೌಲರ್ ಗಳ ಮೇಲೆ ಬೆಟ್ಟಿಂಗ್

ಬ್ಯಾಟ್ಸ್ ಮನ್, ಬೌಲರ್ ಗಳ ಮೇಲೆ ಬೆಟ್ಟಿಂಗ್

ಬುಕ್ಕಿಗಳ ಪ್ರಕಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಮತ್ತೆ ಮಿಂಚಲಿದ್ದಾರೆ. ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. ಬೌಲರ್ ಗಳ ಪೈಕಿ ಜಸ್ ಪ್ರೀತ್ ಬೂಮ್ರಾ, ಜೋಫ್ರಾ ಆರ್ಚರ್, ರಶೀದ್ ಖಾನ್ ಹೆಚ್ಚು ಹಣ ಹೂಡಿಕೆ ಪಡೆಯಬಲ್ಲ ಬೌಲರ್ ಗಳೆನಿಸಿದ್ದಾರೆ. ಅಂದ ಹಾಗೆ ಟಾಪ್ ತಂಡಗಳ ಕಥೆ ಹೀಗಾದರೆ ಬಾಟಮ್ ನಲ್ಲಿ ಯಾವ ಎರಡು ತಂಡಗಳು ಬರಬಹುದು ಎಂಬುದನ್ನು ಬುಕ್ಕಿಗಳು ಉತ್ತರಿಸಿದ್ದು ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ಕೊನೆ ಎರಡು ಸ್ಥಾನಕ್ಕೆ ತೃಪ್ತಿ ಪಡಬೇಕಾಗುತ್ತದೆ ಎಂದಿದ್ದಾರೆ.

ಐಪಿಎಲ್ ಮಹಾಸಮರ 2020 ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

English summary
IPL 2020: Mumbai Indians and Chennai Super Kings are most favorite teams to win tournament according to multiple betting sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X