ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ ಟೈಟಲ್ ಪ್ರಾಯೋಜಕತ್ವ ರೇಸಿನಲ್ಲಿ ಟಾಟಾ ಸನ್ಸ್ ಮುಂದೆ!

|
Google Oneindia Kannada News

ಬೆಂಗಳೂರು, ಆ. 17: ಚೀನಾ ಮೂಲದ ಸಂಸ್ಥೆ ವಿವೊ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಮುಖ್ಯ ಪ್ರಾಯೋಜಕರಾಗಲು ಹತ್ತು ಹಲವು ಸಂಸ್ಥೆಗಳು ಬಿಡ್ ಸಲ್ಲಿಸಿವೆ. ಈ ನಡುವೆ ಟಾಟಾ ಸನ್ಸ್ ಸಂಸ್ಥೆ ಈ ರೇಸಿನಲ್ಲಿ ಉಳಿದ ಕಂಪನಿಗಳಿಗಿಂತ ಮುಂದಿದೆ ಎಂಬ ಸುದ್ದಿ ಬಂದಿದೆ.

ಗರಿಷ್ಠ ಮೌಲ್ಯದ ಬಿಡ್ ಮಾಡಿದ ಸಂಸ್ಥೆಗೆ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಸಿಗುವುದಿಲ್ಲ, ಐಪಿಎಲ್ ಬ್ರ್ಯಾಂಡ್ ಮೌಲ್ಯ ಎಲ್ಲವನ್ನು ಪರಿಗಣಿಸಿ ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ವಿವೋ ಕಂಪನಿ ವಾರ್ಷಿಕ 440 ಕೋಟಿ ರೂ. ಒಪ್ಪಂದ ಹೊಂದಿತ್ತು. ಹಾಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಬಿಸಿಸಿಐ ಮುಂದಿನ 4 ತಿಂಗಳ ಅವಧಿಯ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕಿಗೆ 300ರಿಂದ 350 ಕೋಟಿ ರೂ. ಮೊತ್ತದ ಒಪ್ಪಂದದ ನಿರೀಕ್ಷೆಯಲ್ಲಿದೆ. ಇದಲ್ಲದೆ, ರಾಷ್ಟ್ರೀಯತೆ, ಸ್ಥಳೀಯ ಕಂಪನಿ, ಚೀನಾ ಸಂಪರ್ಕವಿಲ್ಲದ ಸಂಸ್ಥೆಯ ಹುಡುಕಾಟ ನಡೆದಿದೆ.

IPL 2020 title sponsorship: Tata Sons leading the race

ಯಾವ ಯಾವ ಸಂಸ್ಥೆಗಳು ರೇಸಿನಲ್ಲಿವೆ: ಟಾಟಾ ಗ್ರೂಪ್ ಅಲ್ಲದೆ ದೇಶದ ಅತಿದೊಡ್ಡ ಮತ್ತು ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಪತಂಜಲಿ ಹೊರತುಪಡಿಸಿ, ಇನ್ನೂ ಅನೇಕ ಕಂಪನಿಗಳು ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ವ್ಯವಹಾರಗಳನ್ನು ಪಡೆಯಲು ಬಯಸುತ್ತವೆ. ಇವುಗಳಲ್ಲಿ ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್, ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ಡ್ರೀಮ್ 11 ಮತ್ತು ಭಾರ್ತಿ ಕ್ರಿಕೆಟ್ ತಂಡಕ್ಕೆ ಜರ್ಸಿ ಪ್ರಾಯೋಜಕ ಬೈವ್ಸ್ ಸೇರಿದೆ.

ಇತ್ತೀಚೆಗೆ ಬೆಂಗಳೂರು ಮೂಲದ ಅನ್ ಅಕಾಡೆಮಿ ಕೂಡಾ ಈ ಪಟ್ಟಿಗೆ ಸೇರಿದೆ. ಅನ್‌ಅಕಾಡೆಮಿ ಈಗಾಗಲೆ ಐಪಿಎಲ್‌ನಲ್ಲಿ 2023ರವರೆಗೆ ಕೇಂದ್ರಿಯ ಪ್ರಾಯೋಜಕತ್ವ ಹೊಂದಿದೆ ಆದರೆ, ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಈಗ ಬಿಡ್ ಸಲ್ಲಿಸಲು ಮುಂದಾಗಿದೆ. ಶೀರ್ಷಿಕೆ ಪ್ರಾಯೋಜಕತ್ವ ಪಡೆದ ಕಂಪನಿಯ ಲೋಗೋ ತಂಡಗಳ ಆಟಗಾರರ ಜೆರ್ಸಿಯಲ್ಲಿ ಎದ್ದು ಕಾಣಲಿದೆ. ಪ್ರಶಸ್ತಿ ವಿತರಣಾ ಸಮಾರಂಭಲ್ಲೂ ಪ್ರಮುಖವಾಗಿ ಕಾಣಿಸಲಿದೆ.

English summary
Tata Sons is leading the race to bag the title sponsorship of the Indian Premier League (IPL), a month before its scheduled start in the UAE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X