ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಫೋನ್ X ಪ್ರಿ ಆರ್ಡರ್ ಆರಂಭ, ಫೋನ್ ಬಗ್ಗೆ ಗೊತ್ತಿರಬೇಕಾದ 5 ಅಂಶಗಳು

|
Google Oneindia Kannada News

ಐಫೋನ್ X ಅಥವಾ 10ರ ಪ್ರೀಬುಕಿಂಗ್ ಭಾರತದಲ್ಲೂ ಅಕ್ಟೋಬರ್ 27ರಿಂದ ಆರಂಭವಾಗಿದೆ. ಅಂದಹಾಗೆ ಫೋನಿನ ಬೆಲೆ ತಿಳಿದುಕೊಳ್ಳಬೇಕು ಅಲ್ಲವೆ? ಐಫೋನ್ X 64 ಹಾಗೂ 256 ಜಿಬಿ ಸಾಮರ್ಥ್ಯದಲ್ಲಿ ದೊರೆಯುತ್ತದೆ. ಅದರಲ್ಲಿ 64 ಜಿಬಿ ಸಾಮರ್ಥ್ಯದ ಮೊಬೈಲ್ ಫೋನ್ ಗೆ 89 ಸಾವಿರ ಬೆಲೆ ಇದ್ದರೆ, 256 ಜಿಬಿಯ ಫೋನ್ ಗೆ ರು. 1,02,000.

ಅಕ್ಟೋಬರ್ 27ರಂದು (ಶುಕ್ರವಾರ) ಪ್ರಿ ಆರ್ಡರ್ ಆರಂಭಿಸಿದ ಫ್ಲಿಪ್ ಕಾರ್ಟ್ ಕೆಲವೇ ನಿಮಿಷದಲ್ಲಿ ನಿಲ್ಲಿಸಿಬಿಟ್ಟಿತು. ಇದರರ್ಥ ಇನ್ನು ಫೋನ್ ಆರ್ಡರ್ ಮಾಡುವುದಕ್ಕೆ ಆಗಲ್ಲ ಅಂತೇನಲ್ಲ. ಈಗಲೂ ಕೆಲವು ಆಫ್ ಲೈನ್ ಮಾರಾಟಗಾರರು ಹಾಗೂ ಆಪಲ್ ನ ಅಧಿಕೃತ ಮಾರಾಟಗಾರರ ಬಳಿ ಖಂಡಿತಾ ಆರ್ಡರ್ ಮಾಡಬಹುದು.

ಆ್ಯಪಲ್ ಹೊಸ ಆಪರೇಟಿಂಗ್ ಸಿಸ್ಟಂ 'iOS 11' ವಿಶೇಷತೆಯೇನು?ಆ್ಯಪಲ್ ಹೊಸ ಆಪರೇಟಿಂಗ್ ಸಿಸ್ಟಂ 'iOS 11' ವಿಶೇಷತೆಯೇನು?

ಇವತ್ತು ನೀವು ಐಫೋನ್ X ಆರ್ಡರ್ ಮಾಡಿದ್ದೇ ಆದರೆ ಅದು ಬಿಡುಗಡೆಯಾಗುವ ಮೊದಲ ದಿನ, ಅಂದರೆ ನವೆಂಬರ್ 3ನೇ ತಾರೀಕು ನಿಮ್ಮ ಕೈ ಸೇರುತ್ತದೆ. ಆಪಲ್ ನವರು ಇಂತಿಷ್ಟೇ ಸಂಖ್ಯೆ ಎಂದು ನಿರ್ಧರಿಸಿದ್ದಾರೆ. ಆದ್ದರಿಂದ ಆ ದಿನ ಪ್ರಯತ್ನಿಸುವವರಿಗೆ ಸಿಗುವ ಸಾಧ್ಯತೆ ಕಡಿಮೆ ಅನ್ನುವವರೂ ಇದ್ದಾರೆ. ಆದರೆ ಈ ಬಗ್ಗೆ ಸತ್ಯಾಸತ್ಯತೆ ಖಚಿತವಾಗಿಲ್ಲ.

ಭಾರತದಲ್ಲಿ ಐಫೋನ್ ಲಭ್ಯತೆ ಹಾಗೂ ಆಫರ್ಭಾರತದಲ್ಲಿ ಐಫೋನ್ ಲಭ್ಯತೆ ಹಾಗೂ ಆಫರ್

ಆದರೆ, ಪ್ರಶ್ನೆ ಏನೆಂದರೆ, ಒಂದು ಮೊಬೈಲ್ ಫೋನ್ ಗೆ 89 ಸಾವಿರ ಕೊಡಬೇಕಾ? ಇದು ಖರೀದಿಸುವವರಿಗೆ ಬಿಟ್ಟ ವಿಚಾರ. ಈ ಫೋನ್ ಬಗ್ಗೆ ಇರುವ ವಿಶೇಷ ಮಾಹಿತಿಗಳನ್ನಷ್ಟೇ ನಿಮಗೆ ತಲುಪಿಸಬಹುದು.

ಐಫೋನ್ ನ ಹತ್ತನೇ ವಾರ್ಷಿಕೋತ್ಸವ ವಿಶೇಷ

ಐಫೋನ್ ನ ಹತ್ತನೇ ವಾರ್ಷಿಕೋತ್ಸವ ವಿಶೇಷ

ಐಫೋನ್ X ಮೊಬೈಲ್ ಫೋನ್ ಹೊರಬರುತ್ತಿರುವುದು ವಿಶೇಷ ಸಂದರ್ಭದಲ್ಲಿ. ಇದು ಐಫೋನ್ ನ ಹತ್ತನೇ ವಾರ್ಷಿಕೋತ್ಸವಕ್ಕಾಗಿ ತಯಾರಿಸಿರುವ ವಿಶೇಷ ಮೊಬೈಲ್ ಫೋನ್. ಇದರಲ್ಲೇನಿದೆ ವಿಶೇಷ ಅಂತೀರಾ? ಅದರ ರಚನೆಯಿಂದ ಆರಂಭಿಸಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಐಫೋನ್ ನಲ್ಲಿ ಹೋಮ್ ಬಟನ್ ಇಲ್ಲ. 5.8 ಇಂಚಿನ ಸ್ಕ್ರೀನ್ ಇದೆ. ಮತ್ತು ಇದೇ ಮೊದಲ ಐಫೋನ್ ಗೆ ಒಎಲ್ ಇಡಿ ಸ್ಕ್ರೀನ್ ತರಲಾಗಿದೆ.

ನೀವು ಐಫೋನ್ X ಸ್ಕ್ರೀನ್ ಮೇಲೆ ನೋಡುವ ಬಣ್ಣ ನಿರ್ದಿಷ್ಟವಾಗಿರುತ್ತದೆ. DCI-P3 ಬಣ್ಣವನ್ನು ಬೆಂಬಲಿಸುತ್ತದೆ.

ಐಫೋನ್ 8 ಮತ್ತು 8 ಪ್ಲಸ್ ಗಿಂತ ದೊಡ್ಡದು

ಐಫೋನ್ 8 ಮತ್ತು 8 ಪ್ಲಸ್ ಗಿಂತ ದೊಡ್ಡದು

ಐಫೋನ್ X ಮೊಬೈಲ್ ಫೋನ್ ಐ ಫೋನ್ 8ಕ್ಕಿಂತ ದೊಡ್ಡದಾಗಿರುತ್ತದೆ. ಸಣ್ಣ ಕೈಗಳಿರುವ ಬಳಕೆದಾರರಿಗೆ ಇದು ಅಷ್ಟಾಗಿ ಸೂಕ್ತ ಆಗುವುದಿಲ್ಲ. ಐಫೋನ್ 8 ಪ್ಲಸ್ ಗಿಂತ ತುಂಬ ಉತ್ತಮವಾದ ಡಿಸೈನ್ ಹೊಂದಿರುತ್ತದೆ. ಐಫೋನ್ 8 ಮತ್ತು 8 ಪ್ಲಸ್ ಗೆ ಹೋಲಿಸಿದರೆ ಐಫೋನ್ X ಮೊಬೈಲ್ ಫೋನ್ ನಲ್ಲಿ ಗಾಜಿನ ಬಳಕೆ ಹೆಚ್ಚು ಮಾಡಲಾಗಿದೆ. ಫೋನ್ ನ ಸ್ಕ್ರೀನ್ ಹಾಗೂ ರಚನೆ ಈ ಎಲ್ಲದರಿಂದ ತುಂಬ ಅದ್ಭುತವಾಗಿ ಕಾಣುತ್ತದೆ.

ಐಫೋನ್ X ಆರಂಭದ ಬೆಲೆ 89 ಸಾವಿರ

ಐಫೋನ್ X ಆರಂಭದ ಬೆಲೆ 89 ಸಾವಿರ

ಐಫೋನ್ X ಆರಂಭದ ಬೆಲೆ 89 ಸಾವಿರ. ಐಫೋನ್ 8 ಮತ್ತು 8 ಪ್ಲಸ್ ರ ಆರಂಭಿಕ ಬೆಲೆಗಿಂತ ತುಂಬ ಹೆಚ್ಚು. ಬೆಲೆ ಅಷ್ಟೇ ಅಲ್ಲ, ಬಳಕೆ ವಿಚಾರದಲ್ಲೂ ಬಹಳ ವ್ಯತ್ಯಾಸ ಇದೆ. ಐ ಫೋನ್ 8ನ 64 ಜಿಬಿ ಸಾಮರ್ಥ್ಯದ ಫೋನ್ ಗೆ 64 ಸಾವಿರ ರುಪಾಯಿ ದರ ನಿಗದಿಯಾಗಿದ್ದರೆ, ಅಷ್ಟೇ ಸಾಮರ್ಥ್ಯದ ಐಫೋನ್ 8 ಪ್ಲಸ್ ನ ಬೆಲೆ 73 ಸಾವಿರ.

ಟಚ್ ಐಡಿ ಬದಲಿಗೆ ಫೇಸ್ ಐಡಿ

ಟಚ್ ಐಡಿ ಬದಲಿಗೆ ಫೇಸ್ ಐಡಿ

ಇಷ್ಟು ದಿನ ಇದ್ದ ಟಚ್ ಐಡಿ ಬದಲಿಗೆ ಐಫೋನ್ Xನಲ್ಲಿ ಫೇಸ್ ಐಡಿ ಪರಿಚಯಿಸಲಾಗುತ್ತಿದೆ. ಫೋನ್ ನ ನೋಡಿದಾಗ ಅದು ತನ್ನ ಮಾಲೀಕರ ಮುಖವನ್ನು ಗುರುತಿಸಿ, ಅನ್ ಲಾಕ್ ಆಗುತ್ತದೆ. ಹೀಗೆ ಕತ್ತಲೆಯಲ್ಲೂ ಕೆಲಸ ಮಾಡುತ್ತದೆ. ಎಲ್ಲೋ ಹತ್ತು ಲಕ್ಷ ಪ್ರಯತ್ನದಲ್ಲಿ ಒಮ್ಮೆ ವಿಫಲವಾಗಬಹುದು ಅಷ್ಟೇ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಟಚ್ ಐಡಿಗಿಂತ ಫೇಸ್ ಐಡಿ ಹೆಚ್ಚು ಸುರಕ್ಷಿತ, ವೇಗ ಹಾಗೂ ನಿಖರ ಎಂದು ಕೂಡ ಆಪಲ್ ಕಂಪನಿ ಹೇಳಿಕೊಂಡಿದೆ.

ಕ್ಯಾಮೆರಾ ಚೆನ್ನಾಗಿದೆ

ಕ್ಯಾಮೆರಾ ಚೆನ್ನಾಗಿದೆ

ಐಫೋನ್ 8 ಪ್ಲಸ್ ಹಾಗೂ ಐಫೋನ್ X ಎರಡೂ ಮೊಬೈಲ್ ಫೋನ್ ನ ಹಾರ್ಡ್ ವೇರ್ ಒಂದೇ ಥರನಾಗಿರುತ್ತದೆ. ಆದರೆ ಐಫೋನ್ Xನಲ್ಲಿ ಇನ್ನೂ ಉತ್ತಮ ಅಂಶಗಳಿವೆ. ಉದಾಹರಣೆಗೆ ಐಫೋನ್ Xನ ಕ್ಯಾಮೆರಾ ತುಂಬಾ ಚೆನ್ನಾಗಿದೆ. ಮೂರು ಜಿಬಿ ರಾಮ್ ಹಾಗೂ ಉತ್ತಮ ಸ್ಟಿರಿಯೋ ಸ್ಪೀಕರ್ ಇನ್ನಷ್ಟು ಉತ್ತಮ ಫೀಚರ್ ಗಳಿವೆ.

English summary
The iPhone X -- that is 10 and not ex -- is here. The phone can be now pre-ordered in India, that is if you are lucky. The pre-orders in India for the iPhone X, which costs Rs 89,000 for the 64GB variant and Rs 1,02,000 for the 256GB version. But apparently the number of units are so low for this phone right now that within minutes Flipkart stopped taking the pre-orders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X