ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಇಂಧನ ದರ ಇಳಿಕೆ ಮಾಡಿದ ಇಂಡಿಯನ್ ಆಯಿಲ್

|
Google Oneindia Kannada News

ನವದೆಹಲಿ, ಜೂನ್ 1: ರಷ್ಯಾ- ಉಕ್ರೇನ್ ನಡುವಿನ ಯುದ್ಧ, ಇಂಧನ ಮೇಲಿನ ಯುರೋಪಿಯನ್ ಯೂನಿಯನ್ ನಿರ್ಬಂಧ, ಮುಂದುವರೆದ ಪೂರೈಕೆಯಲ್ಲಿನ ವ್ಯತ್ಯಯ, ಕಚ್ಚಾತೈಲ ದರ ಪ್ರತಿ ಬ್ಯಾರೆಲ್ ಬೆಲೆ 120 ಯುಎಸ್ ಡಾಲರ್ ಪ್ಲಸ್ ದಾಟಿರುವುದು ಎಲ್ಲವೂ ಭಾರತದಲ್ಲಿ ತೈಲ ಬೆಲೆ ಏರುಪೇರಿಗೆ ಕಾರಣವಾಗಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿರುವ ಕೇಂದ್ರ ಸರ್ಕಾರ ಈಗ ವಿಮಾನದ ಇಂಧನ ಬೆಲೆ ತಗ್ಗಿಸಿದೆ. ಟರ್ಬೈನ್ ತೈಲ ದರವನ್ನು ಜೂನ್ 1ರಿಂದ ತಗ್ಗಿಸುತ್ತಿರುವುದಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್(IOCL) ಪ್ರಕಟಿಸಿದೆ.

ಜೂನ್ 1ರಿಂದ ಶೇ 1.3 ರಷ್ಟು ದರ ತಗ್ಗಿ 1.21 ಲಕ್ಷ/ ಕಿ.ಮೀ ಎಟಿಎಫ್ ಆಗಲಿದೆ. ಸತತವಾಗಿ ಜೆಟ್ ಇಂಧನ ದರ ಏರಿಕೆ ಕಾಣುತ್ತಲಿತ್ತು. ಹೀಗಾಗಿ ವಿಮಾನಯಾನ ದರ ಕೂಡಾ ಏರಿಕೆಯಾಗುವ ಭೀತಿ ಉಂಟಾಗಿತ್ತು. ಆದರೆ, ಹಣ ದುಬ್ಬರ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರ ಜೆಟ್ ಇಂಧನ ದರ ಇಳಿಕೆಗೆ ಪ್ರಸ್ತಾವನೆಗೆ ಸಮ್ಮತಿಸಿದೆ.

ನಾಗರಿಕ ವಿಮಾನಯಾನ ಇಲಾಖೆಯ ಪ್ರಸ್ತಾವನೆಯಂತೆ ಶೇ 1.3ರಷ್ಟು ದರ ತಗ್ಗಿದೆ. ಮೇ ತಿಂಗಳಲ್ಲಿ ಶೇ 5ರಷ್ಟು ದರ ಏರಿಕೆಯಾಗಿತ್ತು. ಭಾರತ ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ಶೇ 85 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ವಿಮಾನಯಾನ ಸಂಸ್ಥೆ ವೆಚ್ಚದ ಶೇ 40ರಷ್ಟು ಪಾಲು ಜೆಟ್ ಇಂಧನದ್ದೇ ಆಗಿರುತ್ತದೆ. ಜಾಗತಿಕ ತೈಲ ಬೆಲೆ ಏರಿಕೆಯಿಂದ ಭಾರತದಲ್ಲಿ ಇಂಧನ ದರ ಪರಿಷ್ಕರಣೆಗೆ ಒತ್ತಡವಿತ್ತು.

IOCL slashed Aviation Turbine Fuel prices

ಇಂಧನ ದರ ಇಳಿಕೆಗೆ ಒತ್ತಡ
ಏರ್‌ಲೈನ್ ಅಥವಾ ವೈಮಾನಿಕ ಕಂಪನಿಯ ಕಾರ್ಯನಿರ್ವಹಣೆಯ ವೆಚ್ಚದಲ್ಲಿ ಶೇ. 40ರಷ್ಟು ಪಾಲು ಜೆಟ್ ಇಂಧನದ್ದೇ ಆಗಿರುತ್ತದೆ. ಇದೀಗ ಜಾಗತಿಕವಾಗಿ ಪೆಟ್ರೋಲ್, ಡೀಸೆಲ್‌ನಂತೆ ಜೆಟ್ ಇಂಧನದ ದರಗಳೂ ದಾಖಲೆ ಮಟ್ಟಕ್ಕೆ ಹೆಚ್ಚಾಗಿವೆ. ಭಾರತ ತನಗೆ ಬೇಕಾದ ತೈಲದಲ್ಲಿ ಶೇ. 85ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ

ಇತ್ತೀಚೆಗೆ ಸುಮಾರು 23 ರಾಜ್ಯಗಳು ಜೆಟ್ ಫುಯೆಲ್ ಮೇಲೆ ವ್ಯಾಟ್ ಅನ್ನು ಶೇ. 20-30ರಷ್ಟು ಇಳಿಕೆ ಮಾಡಿವೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಬಹಳಷ್ಟು ಕಡಿತ ಮಾಡಿರುವ ಕೇಂದ್ರ ಸರಕಾರದಿಂದ ವಿಮಾನ ಇಂಧನ ತೆರಿಗೆ ಇಳಿಸುವ ನಿರೀಕ್ಷೆ ಹುಟ್ಟಿಕೊಂಡಿದೆ.

ಬಹಳ ಪ್ರಮುಖವಾಗಿರುವ ಮತ್ತು ಅತಿ ಹೆಚ್ಚು ಕಾರ್ಯನಿರ್ವಹಣೆಯ ವಿಮಾನ ನಿಲ್ದಾಣಗಳೆನಿಸಿರುವ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತಾದಲ್ಲಿ ಜೆಟ್ ಇಂಧನ ದುಬಾರಿಯಾಗಿಯೇ ಇದೆ.

ಇಂಧನ ದರ ಏರಿಕೆ ಇತಿಹಾಸ:

ಮಾರ್ಚ್ 16 ರಂದು ಶೇಕಡಾ 18.3 (ಪ್ರತಿ ಕೆಎಲ್‌ಗೆ ರೂ 17,135.63) ಭಾರಿ ಏರಿಕೆಯೊಂದಿಗೆ ಎಟಿಎಫ್ ಬೆಲೆಯಲ್ಲಿ ಹೆಚ್ಚಳವಾಗಿತ್ತು. ಹಿಂದಿನ ಹದಿನೈದು ದಿನಗಳಲ್ಲಿ ಬೆಂಚ್‌ಮಾರ್ಕ್ ಇಂಧನದ ಸರಾಸರಿ ಅಂತಾರಾಷ್ಟ್ರೀಯ ಬೆಲೆಯನ್ನು ಆಧರಿಸಿ ಜೆಟ್ ಇಂಧನ ಬೆಲೆಗಳನ್ನು ಪ್ರತಿ ತಿಂಗಳ 1 ಮತ್ತು 16 ರಂದು ಪರಿಷ್ಕರಿಸಲಾಗುತ್ತದೆ. ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದ ಶೇಕಡಾ 40 ರಷ್ಟನ್ನು ಹೊಂದಿರುವ ಜೆಟ್ ಇಂಧನವು ಈ ವರ್ಷ ಹೊಸ ಗರಿಷ್ಠ ಮಟ್ಟಕ್ಕೆ ಏರಿದೆ.

2022 ರ ಆರಂಭದಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ATF ಬೆಲೆಗಳು ಹೆಚ್ಚಾಗುತ್ತಿವೆ. ಜನವರಿ 1 ರಿಂದ ಪ್ರಾರಂಭವಾಗುವ ಏಳು ಏರಿಕೆಗಳಲ್ಲಿ, ATF ಬೆಲೆಗಳನ್ನು ರೂ 38,902.92 kl ಅಥವಾ ಸುಮಾರು 50 ಪ್ರತಿಶತದಷ್ಟು ಹೆಚ್ಚಿಸಲಾಗಿದೆ.

ಫೆ.1ರಿಂದ ಜಾರಿಗೆ ಬರುವಂತೆ ಶೇ 8.5ರಷ್ಟು ಏರಿಕೆಯಾಗಿತ್ತು. ನಂತರ ಶೇ 5.2ರಷ್ಟು ಬೆಲೆ ಹೆಚ್ಚಳವಾಗಿತ್ತು. ಏಪ್ರಿಲ್ 1ರಂದು ಶೇ 2ರಷ್ಟು ಏರಿಕೆ ಕಂಡಿದೆ. ಒಟ್ಟಾರೆ ಈ ವರ್ಷದಲ್ಲಿ ಏಳು ಬಾರಿ ದರ ಏರಿಕೆ ಮಾಡಲಾಗಿದೆ.

ಸರ್ಕಾರಿ ಸ್ವಾಮ್ಯದ ಇಂಧನ ರಿಟೈಲ್ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ATF) ಬೆಲೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕಿಲೋಲೀಟರ್‌ಗೆ 4,481.63 ಅಥವಾ ಶೇಕಡಾ 5.2 ರಿಂದ 90,519.79/ಕಿ.ಮೀಗೆ ಹೆಚ್ಚಿಸಲಾಗಿತ್ತು.

English summary
IOCL has announced a price cut of 1.3% to Rs.1.21 lakh/kl on Aviation Turbine Fuel (ATF) for the first time this year on 1 June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X