ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ ಮಾರ್ಚ್‌ನಿಂದ ಹೂಡಿಕೆದಾರರ ಸಂಪತ್ತು 96.57 ಲಕ್ಷ ಕೋಟಿ ರೂ. ಹೆಚ್ಚಾಗಿದೆ!

|
Google Oneindia Kannada News

ನವದೆಹಲಿ, ಫೆಬ್ರವರಿ 04: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಆಗಿರುವ ಅನಾಹುತಗಳು ಒಂದೆರಡಲ್ಲ. ಅನೇಕ ಉದ್ಯಮಗಳ ಜೊತೆಗೆ ಭಾರತೀಯ ಷೇರುಪೇಟೆಯು ನೆಲಕಚ್ಚಿ ಹೋಗಿತ್ತು. ಆದರೆ ಇಂದಿಗೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಹೂಡಿಕೆದಾರರ ಸಂಪತ್ತು 2020 ರ ಮಾರ್ಚ್‌ನ ಭಾರೀ ಕುಸಿತದಿಂದ ಇಲ್ಲಿಯವರೆಗೆ ಬರೋಬ್ಬರಿ 96.57 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.

ಕಳೆದ ವರ್ಷ ಮಾರ್ಚ್ 23 ರಂದು 101.86 ಲಕ್ಷ ಕೋಟಿ ರೂ. ಮೌಲ್ಯದಷ್ಟು ಕುಸಿದ ಬಿಎಸ್‌ಇಯ ಮಾರುಕಟ್ಟೆ ಇಂದು 198.43 ಲಕ್ಷ ಕೋಟಿ ತಲುಪಿದೆ. 2021 ರ ಬಜೆಟ್‌ ಬಳಿಕ ಹೂಡಿಕೆದಾರರ ಮನೋಭಾವ , ಆತ್ಮವಿಶ್ವಾಸ ಹೆಚ್ಚಳದಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದು ದಾಖಲೆಯ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ವಿದೇಶಿ ನಿಧಿಗಳ ಭಾರೀ ಖರೀದಿ ಮತ್ತು ಸಕಾರಾತ್ಮಕತೆಯ ನಡುವೆ ಸೆನ್ಸೆಕ್ಸ್ ಇಂದು ಮೊದಲ ಬಾರಿಗೆ 50,000 ಪಾಯಿಂಟ್ಸ್‌ಗಿಂತ ಹೆಚ್ಚಾಗಿದೆ.

 ಮತ್ತೆ ದಾಖಲೆಯ ಮಟ್ಟಕ್ಕೇರಿದ ಸೆನ್ಸೆಕ್ಸ್: 50 ಸಾವಿರ ಗಡಿದಾಟಿದೆ! ಮತ್ತೆ ದಾಖಲೆಯ ಮಟ್ಟಕ್ಕೇರಿದ ಸೆನ್ಸೆಕ್ಸ್: 50 ಸಾವಿರ ಗಡಿದಾಟಿದೆ!

ಮಾರ್ಚ್ 23 ರಂದು, ಭಾರತದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ನಾಲ್ಕು ವರ್ಷಗಳ ಕನಿಷ್ಠ ಮಟ್ಟವನ್ನು ಮುಟ್ಟಿತು. ಸೆನ್ಸೆಕ್ಸ್ ಭಾರೀ ಇಳಿಕೆ ಕಂಡು 25,981 ಕ್ಕೆ ತಲುಪಿದ್ದರೆ, ನಿಫ್ಟಿ 1,135 ಪಾಯಿಂಟ್ ಇಳಿಕೆ ಕಂಡು 7,610 ಕ್ಕೆ ತಲುಪಿದೆ.

Investors Gain Rs 96.57 Lakh Crore From March Low

ಆದರೆ ಈಗ ಸೆನ್ಸೆಕ್ಸ್ ದಾಖಲೆಯ ಗರಿಷ್ಠ 50,526 ಅನ್ನು ಮುಟ್ಟಿದೆ. ಬುಧವಾರ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.92ರಷ್ಟು ಅಥವಾ 458.03 ಪಾಯಿಂಟ್ಸ್ ಏರಿಕೆಗೊಂಡು 50,255.75 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.97ರಷ್ಟು ಅಥವಾ 142.10 ಪಾಯಿಂಟ್ಸ್ ಹೆಚ್ಚಳಗೊಂಡು 14,790 ಪಾಯಿಂಟ್ಸ್‌ಗೆ ಮುಟ್ಟಿದೆ. ಇಂದು ಕೂಡ ಮತ್ತಷ್ಟು ಏರಿಕೆಯಾಗತೊಡಗಿದೆ.

English summary
Investor wealth has zoomed by Rs 96.57 lakh crore from the four-year low equity market hit in March 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X