ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಡಿಕೆ ದಿಗ್ಗಜ ಜುಂಜುನ್‌ವಾಲ ಬೆಂಬಲಿತ ವಿಮಾನಯಾನ ಸಂಸ್ಥೆ ಆರಂಭ ವಿಳಂಬ ಸಾಧ್ಯತೆ

|
Google Oneindia Kannada News

ಮುಂಬೈ, ಮೇ 19: ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಬೆಂಬಲದಲ್ಲಿ ಆರಂಭಗೊಳ್ಳಬೇಕಿದ್ದ ಆಕಾಶ್‌ ವಿಮಾನಯಾನ ಸೇವೆಗಳ ಪ್ರಾರಂಭ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಏರ್‌ಲೈನ್ ತನ್ನ ಮೊದಲ ವಿಮಾನವನ್ನು ಜೂನ್ ಅಥವಾ ಜುಲೈನಲ್ಲಿ ಪಡೆಯುವ ನಿರೀಕ್ಷೆಯಿದೆ ಎಂದು ಹಿರಿಯ ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್‌ ಜುಂಜುನ್‌ವಾಲಾ ಜೂನ್‌ ನಲ್ಲಿ ಈ ವಿಮಾನಯಾನ ಕಾರ್ಯಾಚರಣೆಯನ್ನು ಆರಂಭಿಸುವ ಆಲೋಚನೆಯಲ್ಲಿದ್ದರು. ಆದರೆ ಇದು ಜುಲೈಗೆ ಮುಂದೂಡಲಾಗಿದೆ. ಸಂಸ್ಥೆ ಜುಲೈನಲ್ಲಿ ಸೇವೆಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ

ಮುಂಬೈ ಮೂಲದ ವಿಮಾನ ಸಂಸ್ಥೆ ಕಳೆದ ಅಕ್ಟೋಬರ್‌ನಲ್ಲಿ, ವಿಮಾನಯಾನ ಸಂಸ್ಥೆ ಆರಂಭಿಸಲು ಅಗತ್ಯವಾಗಿರುವ ನಿರಪೇಕ್ಷಣಾ ಪತ್ರ (ಎನ್‌ಒಸಿ)ವನ್ನು ನಾಗರಿಕ ವಿಮಾನಯಾನ ಸಚಿವಾಲಯದಿಂದ ಪಡೆದುಕೊಂಡಿದೆ. " ಆಕಾಸ ಏರ್ ಅವರ ವಿಮಾನ ವಿತರಣೆಯು ವಿಳಂಬವಾಗಿದೆ , ಹಾಗಾಗಿ ಜೂನ್ / ಜುಲೈನಲ್ಲಿ ಬರುವ ನಿರೀಕ್ಷೆಯಿದೆ. ಇತರ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ, ಅವೆಲ್ಲವೂ ಟ್ರ್ಯಾಕ್‌ನಲ್ಲಿವೆ ಎಂದು ಡಿಜಿಸಿಎ ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

Investor Rakesh Jhunjhunwala Backed Akasa Airs Launch May Be Delayed, you know why?

ಜೂನ್‌ ಮಧ್ಯದಲ್ಲಿ ಮೊದಲ ವಿಮಾನ
ವಿಮಾನಯಾನ ಸಂಸ್ಥೆ ಆರಂಭಿಸಲು ತಡವಾಗುತ್ತಿರುವ ಬಗ್ಗೆ ಆಕಾಶ್‌ ಏರ್‌ ಸಂಸ್ಥೆಯನ್ನು ಸಂಪರ್ಕಿಸಿದ್ದಕ್ಕೆ, ಮೊದಲ ವಿಮಾನ ಜೂನ್‌ ಮಧ್ಯಂತರದಲ್ಲಿ ಬರುವ ನಿರೀಕ್ಷೆಯಿದೆ. ಜುಲೈನಲ್ಲಿ ಕಾರ್ಯಾಚರಣೆ ಆರಂಭಿಸುತ್ತೇವೆ ತಿಳಿಸಿದೆ. ಈ ಕುರಿತು ಮಾತನಾಡಿರುವ ಮ್ಯಾನೇಜಿಂಗ್ ಡೈರೆಕ್ಟರ್ ವಿನಯ್ ದುಬೆ," ನಾವು ನಮ್ಮ ಮೊದಲ ವಿಮಾನವನ್ನು 2022ರ ಜೂನ್‌ ಮಧ್ಯೆ ಪಡೆಯುವ ನಿರೀಕ್ಷೆಯಲ್ಲಿದ್ದೇವೆ. ಮೊದಲ ವಿಮಾನವು ಆಪರೇಟಿಂಗ್ ಪರ್ಮಿಟ್‌ನೊಂದಿಗೆ ನಮಗೆ ಸಹಾಯ ಮಾಡುತ್ತದೆ" ಎಂದು ತಿಳಿಸಿದ್ದಾರೆ.

Investor Rakesh Jhunjhunwala Backed Akasa Airs Launch May Be Delayed, you know why?

ವಿಮಾನಯಾನವು ಜುಲೈ 2022 ರಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಿದೆ. ಮಾರ್ಚ್ 2023ರ ಅಂತ್ಯದ ವೇಳೆಗೆ 18 ವಿಮಾನಗಳನ್ನು ಹಾರಿಸುವ ಗುರಿಯಿದೆ ಎಂದು ತಿಳಿಸಿದ್ದಾರೆ

Investor Rakesh Jhunjhunwala Backed Akasa Airs Launch May Be Delayed, you know why?

260 ಕೋಟಿ ರೂ ಹೂಡಿಕೆ ಮಾಡಲಿರುವ ರಾಕೇಶ
ಆಕಾಶ್‌ ಏರ್ಸ್‌ ಮುಂದಿನ 4 ವರ್ಷಗಳಲ್ಲಿ 70 ವಿಮಾನಗಳನ್ನು ಹೊಂದಲು ಉದ್ದೇಶಿಸಿದೆ. ಈ ಸಂಸ್ಥೆಯಲ್ಲಿ ಭಾರತದ ವಾರೆನ್ ಬಫೆಟ್ ಎಂದೂ ಕರೆಯಲ್ಪಡುವ ಜುಂಜುನ್‌ವಾಲಾ 35 ಮಿಲಿಯನ್ ಡಾಲರ್(260 ಕೋಟಿ ರೂ) ಹೂಡಿಕೆ ಮಾಡುವುದಕ್ಕೆ ಸಿದ್ಧರಿದ್ದಾರೆ. ಈ ಸಂಸ್ಥೆಯ ಶೇ. 40 ರಷ್ಟು ಷೇರುಗಳನ್ನು ಹೊಂದುವ ಗುರಿಯನ್ನು ಹೊಂದಿದ್ದಾರೆ. ಈ ಸಂಸ್ಥೆ ಸುಮಾರು 180 ಪ್ರಯಾಣಿಕರನ್ನು ಕರೆದೊಯ್ಯುವ ವಿಮಾನಗಳನ್ನು ಹೊಂದಲಿದೆ ಎಂದು ತಿಳಿದುಬಂದಿದೆ.

Recommended Video

ಗುಜರಾತ್ ವಿರುದ್ಧ ಗೆದ್ದರೂ RCB ಪ್ಲೇಆಫ್ ಎಂಟ್ರಿ ಭಾಗ್ಯ ಅನುಮಾನ! ಯಾಕೆ‌ ಗೊತ್ತಾ? | Oneindia Kannada

English summary
Investor Rakesh Jhunjhunwala Backed Akasa Air's launch of services is likely to be delayed further as the airline is expected to receive its first aircraft only in June or July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X