ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳಿತಾಯ ಯೋಜನೆ: ದಿನಕ್ಕೆ 50 ರುಪಾಯಿ ಹೂಡಿಕೆ ಮಾಡಿ ಮೆಚ್ಯುರಿಟಿ ವೇಳೆ ಪಡೆಯಿರಿ 35 ಲಕ್ಷ

|
Google Oneindia Kannada News

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಭವಿಷ್ಯದ ಬಗ್ಗೆ ಚಿಂತೆ ಇದ್ದೇ ಇರುತ್ತದೆ. ಹೀಗಾಗಿ ತಾವು ದುಡಿಯುವ ಮೊತ್ತದಲ್ಲಿ ಒಂದಷ್ಟನ್ನು ಉಳಿಸುವುದು ಕೂಡ ಭವಿಷ್ಯದ ಭದ್ರತೆಗೆ ಉತ್ತಮ. ಭವಿಷ್ಯಕ್ಕಾಗಿ ಹೂಡಿಕೆ ಮಾಡುವಾಗಲೂ ಎಲ್ಲಿ ಹೂಡಿಕೆ ಮಾಡಬೇಕು ಎಂಬುದು ಮುಖ್ಯವಾಗುತ್ತದೆ. ಹೂಡಿಕೆಯಿಂದ ಉತ್ತಮ ಆದಾಯ ಪಡೆಯಲು ಉತ್ತಮವಾದ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ನೋಡಬೇಕು. ಅಲ್ಲದೆ, ಸುರಕ್ಷಿತ ಹೂಡಿಕೆಯನ್ನು ಗಮನದಲ್ಲಿಟ್ಟುಕೊಳ್ಳುವುದು ಕೂಡ ಆದ್ಯತೆಯಾಗಿರಬೇಕು.

ಸುರಕ್ಷಿತ ಮತ್ತು ಹೆಚ್ಚಿನ ಆದಾಯ ತಂದುಕೊಡುವ ಒಂದು ಯೋಜನೆಯನ್ನು ಪೋಸ್ಟ್ ಆಫೀಸ್ ಜಾರಿಗೆ ತಂದಿದೆ. ಅದುವೇ 'ಗ್ರಾಮ ಸುರಕ್ಷಾ ಯೋಜನೆ'. ಈ ಯೋಜನೆಯಲ್ಲಿ ದಿನಕ್ಕೆ 50 ರೂಪಾಯಿ ಅಥವಾ ತಿಂಗಳಿಗೆ 1500 ರೂಪಾಯಿಗಳನ್ನು ಕಟ್ಟಬೇಕಿರುತ್ತದೆ. ಈ ಅಲ್ಪ ಮೊತ್ತವನ್ನು ನೀವು ಪಾವತಿಸುವುದಾದರೆ ಮೆಚ್ಯುರಿಟಿ ವೇಳೆ ನಿಮಗೆ ಬಂಪರ್ ರಿಟರ್ನ್ಸ್ ನಿಮ್ಮದಾಗುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನೀವು 35 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಆಧಾರ್ ಆಧಾರಿತ ನೇರ ವರ್ಗಾವಣೆ ಬಳಸಲು ಸಚಿವಾಲಯಗಳಿಗೆ ಕೇಂದ್ರದ ಸೂಚನೆಆಧಾರ್ ಆಧಾರಿತ ನೇರ ವರ್ಗಾವಣೆ ಬಳಸಲು ಸಚಿವಾಲಯಗಳಿಗೆ ಕೇಂದ್ರದ ಸೂಚನೆ

ಸಾಮಾನ್ಯವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಚಿಸುವವರು ಕಡಿಮೆ ವಯಸ್ಸಿನಲ್ಲಿಯೇ ಇದನ್ನು ಶುರುಮಾಡಬಹುದು. ಅಂದರೆ, 19 ರಿಂದ 55 ವರ್ಷ ವಯಸ್ಸಿನ ಯಾರು ಬೇಕಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ. ಇದರಿಂದ ಉತ್ತಮ ಲಾಭವನ್ನು ಗಳಿಸಬಹುದು.

 'ಗ್ರಾಮ ಸುರಕ್ಷಾ ಯೋಜನೆ' ಬಗ್ಗೆ ಮಾಹಿತಿ

'ಗ್ರಾಮ ಸುರಕ್ಷಾ ಯೋಜನೆ' ಬಗ್ಗೆ ಮಾಹಿತಿ

ಈ ಪಾಲಿಸಿಯ ಅಡಿಯಲ್ಲಿ ನೀವು ಹಣ ಪಾವತಿಸುವ ಅವಧಿಗಳನ್ನು 55, 58 ಮತ್ತು 60 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ. ಅಂದರೆ, ನೀವು ನಿಮ್ಮ 19ನೇ ವಯಸ್ಸಿನಿಂದ 74ನೇ ವಯಸ್ಸಿನ ವರೆಗೆ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಅಂತಿಮವಾಗಿ 35 ಲಕ್ಷವನ್ನು ಪಡೆಯಬಹುದು. ವ್ಯಕ್ತಿಯೊಬ್ಬ 55 ವರ್ಷಗಳ ಅವಧಿಗೆ ತಿಂಗಳಿಗೆ 1,515 ರುಪಾಯಿಯನ್ನು, 58 ವರ್ಷಗಳ ಅವಧಿಗೆ ಪ್ರತಿ ತಿಂಗಳು 1,463 ಮತ್ತು 60 ವರ್ಷಗಳ ಅವಧಿಗೆ ಈ ಯೋಜನೆಯಲ್ಲಿ ಪ್ರತಿ ತಿಂಗಳಿಗೆ 1,411 ಹಾಕಬಹುದು ಅಥವಾ ಪ್ರತಿದಿನ 50 ರುಪಾಯಿಯನ್ನು ಪಾವತಿಸಬಹುದು.

 ಜೀವಿತಾವಧಿ ಉಳಿತಾಯ ಯೋಜನೆ

ಜೀವಿತಾವಧಿ ಉಳಿತಾಯ ಯೋಜನೆ

ಗ್ರಾಮ ಸುರಕ್ಷಾ ಯೋಜನೆಯಲ್ಲಿ 55 ವರ್ಷಗಳ ಅವಧಿಗೆ ಹಣ ತೊಡಗಿಸುವವರು ಮೆಚ್ಯುರಿಟಿ ವೇಳೆ 31.60 ಲಕ್ಷ ರೂಪಾಯಿಯನ್ನು ಪಡೆಯುವರು. 58 ವರ್ಷಗಳ ಅವಧಿಗೆ ಹಣ ಪಾವತಿಸುವವರು ಮುಕ್ತಾಯದ ವೇಳೆ 33.40 ಲಕ್ಷ ರೂಪಾಯಿ ಪಡೆದರೆ, 60 ವರ್ಷಗಳ ಕಾಲ ಪಾಲಿಸಿ ಪ್ರೀಮಿಯಂ ಪಾವತಿಸುವವರು ಕೊನೆಗೆ 34.60 ಲಕ್ಷ ರೂಪಾಯಿಯನ್ನು ಪಡೆಯುತ್ತಾರೆ.

 ಹಣ ಪಾವತಿಸುವ ವಿಧಾನ

ಹಣ ಪಾವತಿಸುವ ವಿಧಾನ

ಸುರಕ್ಷಾ ಯೋಜನೆ ಅಡಿಯಲ್ಲಿ ಕನಿಷ್ಠ ವಿಮಾ ಮೊತ್ತವು 10,000 ರೂಪಾಯಿ ಮತ್ತು ಗರಿಷ್ಠ 10 ಲಕ್ಷ ರೂಪಾಯಿ ಆಗಿರುತ್ತದೆ. ಪ್ರೀಮಿಯಂ ಅನ್ನು ಮೂರು ರೀತಿಯ ಪಾವತಿ ಅವಧಿಯ ಆಯ್ಕೆಗಳಲ್ಲಿ ಠೇವಣಿ ಇಡಬಹುದು. ಅವೆಂದರೆ, ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಹಣವನ್ನು ಪಾವತಿಸಬಹುದಾಗಿರುತ್ತದೆ. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ಈ ಯೋಜನೆಯು ಹಣ ಪಾವತಿಗೆ 30 ದಿನಗಳ ಹೆಚ್ಚುವರಿ ಕಾಲಾವಕಾಶವನ್ನು ಸಹ ನೀಡುತ್ತದೆ. ಇದು ಪಾಲಿಸಿದಾರರಿಗೆ ಉಪಯುಕ್ತವಾಗಿರುತ್ತದೆ.

 ಪಾಲಿಸಿ ಹಿಂಪಡೆಯಲು ಅವಕಾಶ

ಪಾಲಿಸಿ ಹಿಂಪಡೆಯಲು ಅವಕಾಶ

ಹಣ ಪಾವತಿಯು ಸಾಧ್ಯವಾಗುತ್ತಿಲ್ಲ ಅಥವಾ ಈ ಪಾಲಿಸಿ ಬೇಡ ಎನಿಸಿದಾಗ ಹೂಡಿಕೆಯ ದಿನದಿಂದ 3 ವರ್ಷಗಳ ನಂತರ ಯಾವುದೇ ವ್ಯಕ್ತಿಯು ತಮ್ಮ ಪಾಲಿಸಿಯನ್ನು ಹಿಂಪಡೆಯಬಹುದು. ಆದರೆ, 5 ವರ್ಷಗಳ ಅವಧಿಗೂ ಮುನ್ನವೇ ಪಾಲಿಸಿಯನ್ನು ಹಿಂಪಡೆಯುವುದರಿಂದ ಯಾವುದೇ ಬೋನಸ್ ಸಿಗುವುದಿಲ್ಲ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ 4 ವರ್ಷಗಳ ಬಳಿಕ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು. ಯೋಜನೆಯಡಿಯಲ್ಲಿ ಪಾವತಿಸಲಾದ ಒಂದು ಸಾವಿರ ರೂಪಾಯಿಗೆ ಪ್ರತಿ ವರ್ಷಕ್ಕೆ 60 ರೂಪಾಯಿ ಬೋನಸ್ ನೀಡಲಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಪೋಸ್ಟ್ ಆಫೀಸಿನ ಅಧಿಕೃತ ಪುಟವನ್ನು ಒಮ್ಮೆ ಪರಿಶೀಲಿಸಿ.

English summary
India Post, under the Department of Posts, offers numerous investment opportunities to individuals who are looking to save their money in a safe scheme. Post Office is one of the best places to invest your money. it's Gives Maximum safety and a good interest rate for savings amount.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X