ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ ವೆಸ್ಟ್ ಕರ್ನಾಟಕ ಹುಬ್ಬಳ್ಳಿ: 70 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆ

|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 15: ಇಲೆಕ್ಟ್ರಿಕಲ್ ಬಸ್ ಗಳನ್ನು ಪೂರೈಸಲು ಯಾವುದಾದರೂ ಉದ್ಯಮಗಳು ಮುಂದೆ ಬಂದರೆ ರಾಜ್ಯದ ಸಾರಿಗೆ ಸಂಸ್ಥೆಗೆ ಖರೀದಿಸಲು ಒಡಂಬಡಿಕೆ ಮಾಡಿಕೊಳ್ಳಲು ಸಾಧ್ಯವಿರುವುದಾಗಿ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಇನ್ ವೆಸ್ಟ್ ಕರ್ನಾಟಕ ಹುಬ್ಬಳ್ಳಿಗೆ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಅಸಮತೋಲನ ನಿವಾರಣೆಗೆ ಈ ಸಮಾವೇಶ ಸಹಕಾರಿಯಾಗಲಿದೆ.ವಿದೇಶಿ ಗುಣಮಟ್ಟಕ್ಕೆ ಪೈಪೋಟಿ ನೀಡುವಂತಹ ಸಾಧನೆಗಳನ್ನು ನಮ್ಮ ಉದ್ಯಮಿಗಳು ಮಾಡಬೇಕು ಎಂದರು.

"ಭಾರತಕ್ಕೆ ಮಹತ್ವದ ಕೊಡುಗೆ ನೀಡುವ ಸಾಮರ್ಥ್ಯ ಕರ್ನಾಟಕಕ್ಕಿದೆ''

ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಕರ್ನಾಟಕದಲ್ಲಿ ರೇಲ್ವೇ ಇಲಾಖೆಯು ಬರುವ ಹತ್ತು ವರ್ಷಗಳಲ್ಲಿ 1.50 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಇದೇ ವರ್ಷದಲ್ಲಿ 20 ಸಾವಿರ ಕೋಟಿ ರೂ.ಹೂಡಿಕೆ ಮಾಡಲಾಗುತ್ತಿದೆ. ಬೆಳಗಾವಿ ಧಾರವಾಡ ನೇರ ರೈಲು ಮಾರ್ಗ ನಿರ್ಮಾಣಕ್ಕೆ 998 ಕೋಟಿ ರೂ.ಮೀಸಲಿಡಲಾಗಿದೆ.ಹುಬ್ಬಳ್ಳಿ ವಿಜಯಪುರ ಮಧ್ಯೆ ಫೆ.16 ರಿಂದ ಇಂಟರ್ ಸಿಟಿ ರೈಲು ಪ್ರಾರಂಭಿಸಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಬೆಳಗಾವಿ ತ್ರಿವಳಿ ನಗರಗಳು ಕೈಗಾರಿಕಾ ಕಾರಿಡಾರ್ ಆಗಿ ಅಭಿವೃದ್ಧಿ ಹೊಂದಿದರೆ ಈ ಭಾಗದ ಚಿತ್ರಣ ಬದಲಾಗಲಿದೆ.ಜಗತ್ತಿಗೆ ಐಟಿ ಬಿಟಿ ನೀಡಿದ ಕರ್ನಾಟಕದಲ್ಲಿ, ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ನೀಡುವ ,ಕೌಶಲ್ಯಾಭಿವೃದ್ಧಿ ಸಂಸ್ಥೆಗಳ ಅವಶ್ಯಕತೆ ಇದೆ ಎಂದರು.

ಜಗದೀಶ ಶೆಟ್ಟರ್ ಮಾತನಾಡಿ

ಜಗದೀಶ ಶೆಟ್ಟರ್ ಮಾತನಾಡಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಗದೀಶ ಶೆಟ್ಟರ್ ಮಾತನಾಡಿ, ಸಮಾವೇಶದಲ್ಲಿ ಭಾಗವಹಿಸಿ ಉದ್ಯಮಿಗಳು ಸ್ವಯಂ ಪ್ರೇರಿತರಾಗಿ ಸುಮಾರು 70 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆಗೆ ಮುಂದಾಗಿರುವುದು . ಸಮಾವೇಶವನ್ನು ನಿರೀಕ್ಷೆಗೂ ಮೀರಿ ಯಶಸ್ಸುಗೊಳಿಸಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಹಗಲಿರುಳು ಶ್ರಮವಹಿಸಿ ದುಡಿದಿದ್ದಾರೆ, ಮಾಧ್ಯಮಗಳು ಸಹಕಾರ ಒದಗಿಸಿ ನೈತಿಕ ಪ್ರೋತ್ಸಾಹ ನೀಡಿವೆ ಎಂದು ಸಚಿವ ಶೆಟ್ಟರ್ ಮುಕ್ತ ಕಂಠದಿಂದ ಶ್ಲಾಘನೆ ಮಾಡಿದರು.

ವಿವಿಧ ಗಣ್ಯರ ಉಪಸ್ಥಿತಿ

ವಿವಿಧ ಗಣ್ಯರ ಉಪಸ್ಥಿತಿ

ಕೆ ಎಲ್ ಇ ತಾಂತ್ರಿಕ ವಿವಿ ಉಪಕುಲಪತಿ ಡಾ.ಅಶೋಕ ಶೆಟ್ಟರ್ ಸಮಾವೇಶದ ದಿನದ ಕಲಾಪಗಳ ವರದಿ ಮಂಡಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ವೇದಿಕೆಯಲ್ಲಿ ಇದ್ದರು. ಜಿಲ್ಲಾಧಿಕಾರಿ ದೀಪಾ ಚೋಳನ್ ವಂದಿಸಿದರು.

2ನೇ ಹಂತದ ನಗರಗಳಲ್ಲಿ ಮೊದಲ ಬಾರಿಗೆ ಹೂಡಿಕೆದಾರರ ಸಮಾವೇಶ; ಸಜ್ಜಾಗಿದೆ ಹುಬ್ಬಳ್ಳಿ2ನೇ ಹಂತದ ನಗರಗಳಲ್ಲಿ ಮೊದಲ ಬಾರಿಗೆ ಹೂಡಿಕೆದಾರರ ಸಮಾವೇಶ; ಸಜ್ಜಾಗಿದೆ ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡದಲ್ಲಿ ಸಿಪೆಟ್ ಸ್ಥಾಪನೆ

ಹುಬ್ಬಳ್ಳಿ ಧಾರವಾಡದಲ್ಲಿ ಸಿಪೆಟ್ ಸ್ಥಾಪನೆ

ಹುಬ್ಬಳ್ಳಿ- ಧಾರವಾಡದಲ್ಲಿ ಕೇಂದ್ರ ಸರ್ಕಾರದಿಂದ ಸಿಪೆಟ್ (Central Institute of Plastics Engineering & Technology) ಸ್ಥಾಪನೆ ಮಾಡಲಾಗುವುದು. ಈ ಕುರಿತು ರಾಜ್ಯ ಸರ್ಕಾರದೊಂದಿಗೆ ಇಂದು ಒಡಬಂಡಿಕೆಗೆ ಸಹಿ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಏಷ್ಯಾದ ರಾಷ್ಟಗಳಲ್ಲಿಯೇ ಅತಿ ಕಡಿಮೆ ಕಾರ್ಪೊರೇಟ್ ತೆರಿಗೆ ಹೊಂದಿರುವ ರಾಷ್ಟ್ರ ಭಾರತವಾಗಿದೆ. ಇಲ್ಲಿ ಶೇ.22 ರಷ್ಟು ಮಾತ್ರ ತೆರಿಗೆ ಇದೆ.100 ಲಕ್ಷ ಕೋಟಿ ರೂ.ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಗುರಿ ಹೊಂದಲಾಗಿದೆ.

2025 ರ ಹೊತ್ತಿಗೆ ಈ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಯಾದಗಿರಿಯಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ರಸಾಯನಿಕ ಮಂತ್ರಾಲಯದಿಂದ ಡ್ರಗ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಬೆಂಗಳೂರು ಮುಂಬಯಿ ಕೈಗಾರಿಕಾ ಕಾರಿಡಾರ್, ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ವೇ ಯೋಜನೆಗಳು ಈ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದರು.

ಪ್ರಮುಖ ಕಂಪನಿಗಳಿಂದ ಹೂಡಿಕೆ

ಪ್ರಮುಖ ಕಂಪನಿಗಳಿಂದ ಹೂಡಿಕೆ

* ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯಿಂದ 50,000 ಕೋಟಿ ರು.
* ಜೆಟ್ ವಿಂಗ್ ಏರೋ ಸ್ಪೇಸ್ ಫ್ಲೈಟ್ ಟ್ರೈನಿಂಗ್ ಧಾರವಾಡ-2060 ಕೋಟಿ ರು
* ಕೆಎಲ್ಇ ಸೊಸೈಟಿ ಮೆಡಿಕಲ್ ಕಾಲೇಜು-600 ಕೋಟಿ ರು
* ನೆಟ್ ಕ್ಯಾಪ್ ಪವರ್-3000 ಕೋಟಿ ರು
* ಅಯಾನ್ ರಿನೇವಬಲ್ ಪವರ್, ಹುಬ್ಬಳ್ಳಿ- 3000 ಕೋಟಿ ರು
* ಪ್ರಭಂಜನ್ ಇಂಡಸ್ಟ್ರೀಸ್ ಟೆಕ್ಸ್ ಟೈಲ್-ಹಾವೇರಿ-500 ಕೋಟಿ ರು
* ಸನಾಲ್ ಪವರ್ ಹೈಬ್ರೀಡ್ ಪವರ್-ದಾವಣಗೆರೆ-4800 ಕೋಟಿ ರು
* ಐಒಸಿಎಲ್ ಪಿಒಎಲ್ ಟರ್ಮಿನಲ್, ಚಿತ್ರದುರ್ಗ- 500 ಕೋಟಿ ರು

English summary
Invest Karnataka Hubballi: Rs 72 thousand Crore worth 56 MoU signed, more job creation in North Karnataka region is assured said DCM Laxman Savadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X