ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ಸಿಕೋದಿಂದ ರೋಡ್ ಶೋ ಆರಂಭಿಸಿದ ಕರ್ನಾಟಕ

By Mahesh
|
Google Oneindia Kannada News

ಮೆಕ್ಸಿಕೋ, ಆಗಸ್ಟ್ 18: ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ಕರ್ನಾಟಕ ಸರ್ಕಾರ ವಿದೇಶಗಳಲ್ಲಿ ರೋಡ್ ಶೋ ಆರಂಭಿಸಿದೆ. ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಮೆಕ್ಸಿಕೋ ಹಾಗೂ ಪೆರು ದೇಶಗಳ ನಗರಗಳಲ್ಲಿ 'ಕರ್ನಾಟಕ ಸರ್ಕಾರದ ರೋಡ್ ಶೋ' ಶುರುವಾಗಿದೆ.

ವಿದೇಶಗಳದೇಶದ ಪ್ರಮುಖ ನಗರಗಳ ಜೊತೆಗೆ ಫ್ರಾನ್ಸ್, ಸಿಟ್ಜರ್ಲೆಂಡ್ ಹಾಗೂ ಯುನೈಟೆಡ್ ಕಿಂಗ್‌ಡಂನಲ್ಲೂ ರೋಡ್ ಶೋ ನಡೆಸಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.[ಬಂಡವಾಳ ಆಕರ್ಷಣೆಗೆ ಫಾರೀನ್ ನಲ್ಲಿ ಕರ್ನಾಟಕ ರೋಡ್ ಶೋ]

ನವೆಂಬರ್ 23 ರಿಂದ 25ರ ತನಕ ನಡೆಯಲಿರುವ ಹೊಸ ರೂಪದ ಈ ಬಂಡವಾಳ ಹೂಡಿಕೆ ಸಮಾವೇಶ, ಮೋದಿ ಅವರ ಮೇಕ್ ಇನ್ ಇಂಡಿಯಾ ಮಂತ್ರದಂತೆ ಮೇಕ್ ಇನ್ ಕರ್ನಾಟಕ ಮಂತ್ರವನ್ನು ಜಪಿಸಲಿದೆ.

ಸಿದ್ದರಾಮಯ್ಯ ಅವರು ತಮ್ಮ ಬಳಿ ಇದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯನ್ನು ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಅವರಿಗೆ ಬಿಟ್ಟುಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.[ಜಿಮ್ ಗಾಗಿ ದೇಶಪಾಂಡೆ ಅವರ ಖಾತೆ ಬದಲಾವಣೆ]

ನವೆಂಬರ್ ನಲ್ಲಿ ನಡೆಯಲಿರುವ ಇನ್ವೆಸ್ಟ್ ಮೆಂಟ್ ಕರ್ನಾಟಕ 2015 ಸಮಾವೇಶಕ್ಕೂ ಮುನ್ನ ಸೆಪ್ಟೆಂಬರ್ 5 ಹಾಗೂ 6 ರಂದು ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮೆಕ್ಸಿಕೋ ನಗರದ ಉದ್ಯಮಿಗಳಿಗೆ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಅವರು ಆಹ್ವಾನ ನೀಡಿದರು.

ಮೆಕ್ಸಿಕೋ ಹಾಗೂ ಪೆರುವಿನಲ್ಲಿ ಹೂಡಿಕೆದಾರರ ಭೇಟಿ

ಮೆಕ್ಸಿಕೋ ಹಾಗೂ ಪೆರುವಿನಲ್ಲಿ ಹೂಡಿಕೆದಾರರ ಭೇಟಿ

ಕರ್ನಾಟಕದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಆರ್ ವಿ ದೇಶಪಾಂಡೆ ನೇತೃತ್ವ ನಿಯೋಗವು ಮೆಕ್ಸಿಕೋ ಹಾಗೂ ಪೆರುವಿನಲ್ಲಿ ಹೂಡಿಕೆದಾರರ ಭೇಟಿ ಮಾಡಲಿದೆ. ಆಗಸ್ಟ್ 25ರ ತನಕ ಈ ಎರಡು ದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗೆ ಆಹ್ವಾನಿಸಲಾಗುತ್ತದೆ.

ಮೆಕ್ಸಿಕೋದಲ್ಲಿ ನಡೆದ ರೋಡ್ ಶೋ ಯಶಸ್ವಿ

ಮೆಕ್ಸಿಕೋದಲ್ಲಿ ನಡೆದ ರೋಡ್ ಶೋ ಯಶಸ್ವಿ

ಮೆಕ್ಸಿಕೋ ನಗರದಲ್ಲಿ ಸೋಮವಾರ ನಡೆದ ರೋಡ್ ಶೋ ಯಶಸ್ವಿಯಾಗಿದೆ. ಮೆಕ್ಸಿಕನ್ ಬಿಸಿನೆಸ್ ಕೌನ್ಸಿಲ್ ಫಾರ್ ಫಾರೀನ್ ಟ್ರೇಡ್ ಅಂಡ್ ಇನ್ವೆಸ್ಟ್ ಮೆಂಟ್ ಟೆಕ್ನಾಲಜಿ(COMCE) ಮತ್ತು ಭಾರತೀಯ ರಾಯಭಾರಿ ಕಚೇರಿ ಸಹಯೋಗದೊಂದಿಗೆ ರೋಡ್ ಶೋ ನಡೆಸಲಾಯಿತು.

ಯಾವ ಯಾವ ಕಂಪನಿಗಳಿಗೆ ಆಸಕ್ತಿ ಇದೆ

ಯಾವ ಯಾವ ಕಂಪನಿಗಳಿಗೆ ಆಸಕ್ತಿ ಇದೆ

ಆಟೋಮೊಬೈಲ್ ಕ್ಷೇತ್ರ: ಮೆಟಲ್ಸಾ, ಟ್ರೆಮೆಕ್, ನೆಮಾಕ್ ಕಂಪನಿಗಳು
ಮನರಂಜನೆ: ಕಿಡ್ ಜಾನಿಯಾ, ಸಿನಿಪೊಲೀಸ್ ಸಂಸ್ಥೆಗಳು
ಐಟಿ: ಸಾಫ್ಟ್ ಟೆಕ್
ಆಹಾರ ಸಂಸ್ಕರಣೆ: ಗ್ರೇಡ್ ಫುಡ್
ರಾಸಾಯನಿಕ: ಮ್ಯಾಕ್ಸ್ ಕೆಮ್
ಕೈಗಾರಿಕಾ ಪಂಪ್ಸ್: ರುಹ್ ಪಂಪೆನ್

ಕರ್ನಾಟಕದಲ್ಲಿ ಯಾವ ಕ್ಷೇತ್ರಕ್ಕೆ ಬೇಡಿಕೆ ಇದೆ

ಕರ್ನಾಟಕದಲ್ಲಿ ಯಾವ ಕ್ಷೇತ್ರಕ್ಕೆ ಬೇಡಿಕೆ ಇದೆ

ಏರೋ ಸ್ಪೇಸ್, ಆಗ್ರೋ ಅಂಡ್ ಫುಡ್ ಪ್ರೋಸೆಸಿಂಗ್, ಆಟೋಮೋಟಿವ್, ಬಯೋ ಟೆಕ್ನಾಲಜಿ, ಡ್ರಗ್ಸ್ ಹಾಗೂ ಫಾರ್ಮಾ, ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ, ನಾಗರಿಕ ಸೌಲಭ್ಯ ಹಾಗೂ ಪ್ರವಾಸೋದ್ಯಮ.

ಸಮಾವೇಶದಲ್ಲಿ ಪಾಲ್ಗೊಂಡ ಗಣ್ಯರು

ಸಮಾವೇಶದಲ್ಲಿ ಪಾಲ್ಗೊಂಡ ಗಣ್ಯರು

ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಕೈಗಾರಿಕಾ ಇಲಾಖೆ ಆಯುಕ್ತ ಗೌರವ್ ಗುಪ್ತಾ, ಐಎಎಸ್ ಅಧಿಕಾರಿಗಳಾದ ನರಸಿಂಹ ರಾಜು, ಪ್ರದೀಪ್ ಸಿಂಗ್ ಕರೋಲಾ, ಸುಜನ್ ಆರ್ ಚಿನೋಯ್, ಮೆಕ್ಸಿಕೋದ ದಿಪಕ್ಷೀಯ ಮಾತುಕತೆ ಸಮಿತಿಯ ನಿರ್ದೇಶಕ ಜೋರ್ಗ್, ಲೋಪೆಜ್ ಮಾರ್ಟಿನ್ ಹಾಗೂ ಜುಲಿಯೋ ಫಿಲಿಯೆ ಫೈಸಲ್ ಭಾಗವಹಿಸಿದ್ದರು.

English summary
In the run up to “Invest Karnataka 2015”, an investors summit which is scheduled to be held from 23rd to 25th November, 2015 in Bengaluru, a Road Show was held on at Mexico City in Mexico, organised in association with Embassy of India in Mexico and The Mexican Business Council for Foreign Trade Investment and Technology (COMCE).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X