ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡ್ಡಿ ಮೇಲಿನ ಬಡ್ಡಿ ಮನ್ನಾ: ನೀವು ಕ್ಯಾಶ್‌ಬ್ಯಾಕ್ ಸ್ವೀಕರಿಸಿಲ್ವಾ? ಕಾರಣ ಇಲ್ಲಿದೆ

|
Google Oneindia Kannada News

ಸಾಲದ ಮೇಲಿನ ನಿಷೇಧದ ಅವಧಿಯಲ್ಲಿ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಗ್ರಾಹಕರಿಂದ ವಿಧಿಸಲಾಗುವ 'ಬಡ್ಡಿ ಮೇಲಿನ ಬಡ್ಡಿ' ಅನ್ನು ಬ್ಯಾಂಕುಗಳು ಈ ತಿಂಗಳ ಮೊದಲ ವಾರದಲ್ಲಿ ಸಾಲಗಾರರಿಗೆ ನೀಡಿವೆ. 2 ಕೋಟಿ ವರೆಗಿನ ಸಾಲ ಹೊಂದಿರುವ ವೈಯಕ್ತಿಕ ಸಾಲಗಾರರು ಮತ್ತು ಸಣ್ಣ ಉದ್ಯಮಗಳು ಕ್ಯಾಶ್‌ಬ್ಯಾಕ್‌ಗೆ ಅರ್ಹರಾಗಿರುತ್ತಾರೆ.

ಒಂದು ವೇಳೆ ನೀವು ಕೂಡ ಸಾಲ ನಿಷೇಧಕ್ಕೆ ಅರ್ಜಿ ಸಲ್ಲಿಸಿದ್ದು, ಆದರೆ ಇನ್ನೂ ಕ್ಯಾಶ್‌ಬ್ಯಾಕ್‌ ಹಣವನ್ನು ಸ್ವೀಕರಿಸಿಲ್ಲವೇ? ಕಾರಣ ಇಲ್ಲಿದೆ

"ಆತ್ಮನಿರ್ಭರ ಯೋಜನೆಯಡಿ 39,300 ಕೋಟಿ ರೂಪಾಯಿ ಸಾಲ ವಿತರಣೆ ಗುರಿ"

ಬಡ್ಡಿ ಮನ್ನಾ ಯೋಜನೆ ಎಂದರೇನು?

ಬಡ್ಡಿ ಮನ್ನಾ ಯೋಜನೆ ಎಂದರೇನು?

ಕೋವಿಡ್-19ರ ಮಧ್ಯೆ ಆರ್ಥಿಕ ಒತ್ತಡದ ಹಿನ್ನೆಲೆಯಲ್ಲಿ ಸಾಲಗಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಆರು ತಿಂಗಳ ನಿಷೇಧವನ್ನು ವಿಧಿಸಿತು. ಮಾರ್ಚ್ 1 ರಿಂದ ಆಗಸ್ಟ್ 31 ರವರೆಗೆ ನೀಡಿತು. ಮಾರ್ಚ್ 1 ರಿಂದ ಆಗಸ್ಟ್ 31 ರವರೆಗೆ 'ನಿಗದಿತ ಸಾಲ ಖಾತೆಗಳ ಸಾಲಗಾರರಿಗೆ ಸಂಯುಕ್ತ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವನ್ನು' ಪಾವತಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿತು. ಈ ವಿಶೇಷ ಪ್ರಯೋಜನಗಳನ್ನು ಈ ಕೆಳಗಿನ ಸಾಲಗಳಿಗೆ ನೀಡಲು ಒಪ್ಪಿಕೊಂಡಿತು.

1) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಸಾಲಗಳು

2) ಶಿಕ್ಷಣ ಸಾಲಗಳು

3) ವಸತಿ ಸಾಲಗಳು

4) ಗ್ರಾಹಕ ಬಾಳಿಕೆ ಬರುವ ಸಾಲಗಳು

5) ಕ್ರೆಡಿಟ್ ಕಾರ್ಡ್ ಬಾಕಿ

6) ವಾಹನ ಸಾಲಗಳು

7) ವೈಯಕ್ತಿಕ ಮತ್ತು ವೃತ್ತಿಪರ

8) ಬಳಕೆ ಸಾಲಗಳು

ex-gratia ಪಾವತಿಯನ್ನು ಪಡೆಯಲು 2020 ರ ಫೆಬ್ರವರಿ 29 ರ ಕಟ್ ಆಫ್ ದಿನಾಂಕದಂತೆ ಸಾಲ ನೀಡುವ ಸಂಸ್ಥೆಗಳ ಪುಸ್ತಕಗಳಲ್ಲಿ ಸಾಲದ ಖಾತೆಗಳು ಪ್ರಮಾಣಿತವಾಗಿರಬೇಕು. ಮರುಪಾವತಿಗಾಗಿ ಲೆಕ್ಕ ಹಾಕಿದ ಅವಧಿ 2020 ಮಾರ್ಚ್ 1 ರಿಂದ ಆಗಸ್ಟ್ 21 ರವರೆಗೆ ಇರುತ್ತದೆ, ಅಂದರೆ ಆರು ತಿಂಗಳ ಅವಧಿ ಅಥವಾ 184 ದಿನಗಳು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸಾಲದ ಮೇಲಿನ ಬಡ್ಡಿ ಪಾವತಿಸಿರಬೇಕು!

ಸಾಲದ ಮೇಲಿನ ಬಡ್ಡಿ ಪಾವತಿಸಿರಬೇಕು!

ನಿಷೇಧವನ್ನು ಆರಿಸಿಕೊಂಡ ಗ್ರಾಹಕರು, ಬಾಕಿ ಇರುವ ಸರಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಮತ್ತು ಯಾವುದೇ ಸಂಯುಕ್ತ ಬಡ್ಡಿಯನ್ನು (ಬಡ್ಡಿ ಮೇಲಿನ ಬಡ್ಡಿ)ಹಣಕಾಸು ಸಂಸ್ಥೆಯಿಂದ ಮನ್ನಾ ಮಾಡಲಾಗುತ್ತದೆ. ಆದಾಗ್ಯೂ, ಸಾಲಗಾರನು ಯಾವುದೇ ಬಡ್ಡಿ ಮರುಪಾವತಿ ಮಾಡಿಲ್ಲ ಎಂದು ಪರಿಗಣಿಸಿದವರು, ಯಾವುದೇ ಕ್ಯಾಶ್‌ಬ್ಯಾಕ್‌ಗೆ ಅರ್ಹರಾಗಿರುವುದಿಲ್ಲ ಎಂದು ವಿವಿಫೈ ಫೈನೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಅನಿಲ್ ಪಿನಾಪಾಲ ಹೇಳಿದ್ದಾರೆ.

MSMEಗಳಿಗೆ 1.87 ಲಕ್ಷ ಕೋಟಿ ರೂಪಾಯಿ ಸಾಲ ಮಂಜೂರುMSMEಗಳಿಗೆ 1.87 ಲಕ್ಷ ಕೋಟಿ ರೂಪಾಯಿ ಸಾಲ ಮಂಜೂರು

ಸಾಲಗಾರನು ಸಾಲ ನಿಷೇಧವನ್ನು ಪಡೆಯದಿದ್ದರೆ?

ಸಾಲಗಾರನು ಸಾಲ ನಿಷೇಧವನ್ನು ಪಡೆಯದಿದ್ದರೆ?

ಸಾಲಗಾರನು ಸಾಲ ನಿಷೇಧವನ್ನು ಆಯ್ದುಕೊಂಡಿದ್ದರೆ ಅಥವಾ ಇಲ್ಲದಿದ್ದರೂ ಎಲ್ಲಾ ಸಾಲಗಾರರಿಗೆ ಏಕರೂಪವಾಗಿ ಅನ್ವಯಿಸುವ ರೀತಿಯಲ್ಲಿ ಜಾರಿಗೆ ತರಲಾಗುತ್ತಿದೆ ಮತ್ತು ಉತ್ತಮವಾಗಿ ಹಣ ಮರುಪಾವತಿ ಮಾಡಿರುವವರಿಗೂ ಯಾವುದೇ ಅನಾನುಕೂಲವಾಗದಂತೆ ನೋಡಿಕೊಂಡಿರುವುದು ಹೆಚ್ಚು ಪ್ರಶಂಸಿಸಬೇಕಾಗಿದೆ.

ಬ್ಯಾಂಕುಗಳು ಈಗಾಗಲೇ ಸಾಲಗಾರನಿಗೆ ಮನ್ನಣೆ ನೀಡಿದ್ದು, ಕ್ಯಾಶ್‌ಬ್ಯಾಕ್ ಅನ್ನು ಸಾಲಗಾರನ ಖಾತೆಗೆ ಡೆಪಾಸಿಟಿ ಮಾಡಿವೆ.

ಸಾಲಗಾರನು ನಿಷೇಧದ ಅವಧಿಯಲ್ಲಿ ಸಾಲವನ್ನು ಮರುಪಾವತಿಸಿದರೆ ಹೇಗೆ?

ಸಾಲಗಾರನು ನಿಷೇಧದ ಅವಧಿಯಲ್ಲಿ ಸಾಲವನ್ನು ಮರುಪಾವತಿಸಿದರೆ ಹೇಗೆ?

ಸಾಲ ನಿಷೇಧ(ಮೊರಟೋರಿಯಂ) ಅವಧಿಯಲ್ಲಿ ಸಾಲಗಾರನು ಸಾಲವನ್ನು ಮರುಪಾವತಿಸಿದ್ದರೂ ಸಹ, ಅವನು ಅಥವಾ ಅವಳು ex-gratia ಪಾವತಿಗೆ ಅನ್ವಯಿಸುತ್ತಾರೆ. 'ಬಡ್ಡಿ ಮೇಲಿನ ಬಡ್ಡಿ' ಅನ್ನು ಮನ್ನಾ ಮಾಡಲಾಗುವುದು ಮತ್ತು ಸಾಲಗಾರನ ಖಾತೆಗೆ ಜಮಾ ಮಾಡಲಾಗುವುದು. ಸಾಲಗಾರನು ಹಣ ಪಾವತಿಗಳನ್ನು ಮಾಡಿದ ತಿಂಗಳುಗಳವರೆಗೆ ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡಲಾಗಿದೆ.

English summary
Here the details of who have not received any cashback on loan moratorium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X