ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

H-1B ವೀಸಾ ನಿಯಮ ಬದಲಾವಣೆ ಗುಮ್ಮ, ತಲ್ಲಣಿಸಿದವು ಐಟಿ ಷೇರುಗಳು

ಅಮೆರಿಕದ H-1B ವೀಸಾದ ನಿಯಮ ಬದಲಾಗಬಹುದು. ಅದರ ಹೊಡೆತ ಭಾರತದ ಐಟಿ ಕಂಪನಿಗಳ ಮೇಲೆ ಆಗಬಹುದು ಎಂಬ ಅತಂಕದಲ್ಲಿ ಶನಿವಾರ ಪ್ರಮುಖ ಐಟಿ ಕಂಪನಿಗಳ ಷೇರು ಬೆಲೆ ಕುಸಿತ ಕಂಡಿದೆ.

|
Google Oneindia Kannada News

ಮುಂಬೈ, ಜನವರಿ 9: ದೇಶದ ಐಟಿ ಉದ್ಯಮದಲ್ಲಿ H-1B ವೀಸಾದ ಬದಲಾಗಬಹುದಾದ ನಿಯಮ ಕಲ್ಲೋಲಕ್ಕೆ ಕಾರಣವಾಗಿದೆ. H-1B ವೀಸಾದ ದುರುಪಯೋಗವನ್ನು ತಡೆಯುವ ಕಾರಣಕ್ಕೆ ಅಮೆರಿಕಾ ಅದರ ಶುಲ್ಕ ಹೆಚ್ಚಿಸುವ ಸುದ್ದಿಯ ಅತಂಕದಲ್ಲೇ ಶುಕ್ರವಾರ ಇನ್ಫೋಸಿಸ್, ವಿಪ್ರೋ, ಟಿಸಿಎಸ್ ಹಾಗೂ ಟೆಕ್ ಮಹೀಂದ್ರಾ ಷೇರುಗಳು ಕುಸಿತ ಕಂಡವು.

ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕದ ಮುಕ್ತಾಯದ ವೇಳೆಗೆ ಈ ಕಂಪನಿಗಳ ಷೇರುಗಳು ಶೇ 2ರಿಂದ 5ರಷ್ಟು ಕುಸಿತ ಕಂಡವು. ಸದ್ಯಕ್ಕೆ ಪ್ರಸ್ತಾವ ಆಗಿರುವ ವೀಸಾ ನಿಯಮಗಳಿಂದ ಅಮೆರಿಕದವರ ನೌಕರಿಯ ಸುರಕ್ಷೆಗೆ ಹಾಗೂ ಕೆಲಸದ ಅವಕಾಶ ಹೆಚ್ಚಿಸುವುದಕ್ಕೆ ಅನುಕೂಲವಾಗುತ್ತದೆ.[ಏನಿದು ಎಚ್1ಬಿ ವೀಸಾ ತಿದ್ದುಪಡಿ ಕಾಯ್ದೆ? ಇದ್ಹೇಗೆ ಟೆಕ್ಕಿಗಳಿಗೆ ಮಾರಕ?]

Infosys, Wipro plunge over fresh H-1B visa fears

ಸದ್ಯಕ್ಕೆ 60 ಸಾವಿರ ಅಮೆರಿಕನ್ ಡಾಲರ್ ಪಗಾರ ಇದ್ದರೆ H-1B ವೀಸಾ ದೊರೆಯುತ್ತಿತ್ತು. ಅದನ್ನು ಕನಿಷ್ಠ 1 ಲಕ್ಷ ಅಮೆರಿಕನ್ ಡಾಲರ್ ಗೆ ಏರಿಸುವ ಉದ್ದೇಶ ಇದೆ. ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವುದು ಈ ನಿಯಮದ ಹಿಂದಿನ ಉದ್ದೇಶವಾಗಿದೆ. ಸ್ಥಳೀಯರ ಉದ್ಯೋಗಾವಕಾಶ ಹೊರಗಿನವರ ಪಾಲಾಗಬಾರದು ಎಂಬ ಕಾರಣಕ್ಕೆ ರಾಷ್ಟ್ರಾಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ಜಾರಿಗೆ ತರಲು ಉದ್ದೇಶಿಸಿರುವ ನಿಯಮಗಳಿವು.

ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಷೇರುಗಳು ಶೇ 2.50, ವಿಪ್ರೋ ಶೇ 2.18, ಟಿಸಿಎಸ್ ಶೇ 2.18 ಒಟ್ಟಾರೆ ಹೇಳಬೇಕು ಅಂದರೆ ಬಿಎಸ್ ಇಯ ಐಟಿ ಕಂಪನಿ ಷೇರುಗಳ ಸೂಚ್ಯಂಕವು ಶೇ 2.54ರಷ್ಟು ಕುಸಿತ ಕಂಡಿತು.

English summary
Renewed fears of a clamp down on the misuse of H-1B visas that is likely to raise costs for Indian IT software services companies hit Infosys, Wipro, TCS and Tech Mahindra stocks on Friday. Most of the IT companies closed with a fall of two to five percent, though the BSE Sensex declined 0.44 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X