ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್‍ಫೋಸಿಸ್‍ಗೆ ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಕ್ರಿಯೆ ಪ್ರಶಸ್ತಿ

|
Google Oneindia Kannada News

ಬೆಂಗಳೂರು, ಸೆ 28: ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಕನ್ಸಲ್ಟಿಂಗ್‍ನಲ್ಲಿ ಜಾಗತಿಕ ನಾಯಕನ ಸ್ಥಾನದಲ್ಲಿರುವ ಇನ್‍ಫೋಸಿಸ್ ಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ವಿಶ್ವಸಂಸ್ಥೆಯ ಗ್ಲೋಬಲ್ ಕ್ಲೈಮೇಟ್ ಆ್ಯಕ್ಷನ್ ಪ್ರಶಸ್ತಿ ಲಭಿಸಿದೆ. 'ಕ್ಲೈಮೇಟ್ ನ್ಯೂಟ್ರಲ್ ನೌ' ವಿಭಾಗದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಹವಾಮಾನ ಬದಲಾವಣೆ ವಿರುದ್ಧದ ಹೋರಾಟದ ಪ್ರಯತ್ನಗಳನ್ನು ಮಾಡುತ್ತಿರುವ ಭಾರತದ ಏಕೈಕ ಕಾರ್ಪೊರೇಟ್ ಸಂಸ್ಥೆಯಾಗಿ ಇನ್‍ಫೋಸಿಸ್ ಅನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಹೆಚ್ಚೆಚ್ಚು ಹಸಿರು ಕಟ್ಟಡ ನಿರ್ಮಾಣ, ಇನ್ಫೋಸಿಸ್ಸಿನ ಹೊಸ ಗುರಿಹೆಚ್ಚೆಚ್ಚು ಹಸಿರು ಕಟ್ಟಡ ನಿರ್ಮಾಣ, ಇನ್ಫೋಸಿಸ್ಸಿನ ಹೊಸ ಗುರಿ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್ಸ್ ನ್ಯೂಯಾರ್ಕ್‍ನಲ್ಲಿ ಆಯೋಜಿಸಿದ್ದ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಮುಗಿದ ತಕ್ಷಣ ಹವಾಮಾನ ಬದಲಾವಣೆ ವಿರುದ್ಧ ಹೋರಾಟ ನಡೆಸುತ್ತಿರುವ ಮತ್ತು ಹವಾಮಾನ ಬದಲಾವಣೆಗೆ ಸೂಕ್ತ ಯೋಜನೆಗಳನ್ನು ರೂಪಿಸಿರುವ ಅತ್ಯುತ್ತಮ ಸಂಸ್ಥೆಗಳಿಗೆ ವಿವಿಧ ಪ್ರಶಸ್ತಿಗಳನ್ನು ಘೋಷಿಸಲಾಯಿತು.

2019 ರ ಡಿಸೆಂಬರ್ ನಲ್ಲಿ ಚಿಲಿಯ ಸ್ಯಾಂಟಿಯಾಗೋದಲ್ಲಿ ನಡೆಯಲಿರುವ ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (ಸಿಒಪಿ25) ಇನ್‍ಫೋಸಿಸ್‍ಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಪಟ್ಟಿಯಲ್ಲಿ ಕರ್ನಾಟಕ ನಂ.2ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಪಟ್ಟಿಯಲ್ಲಿ ಕರ್ನಾಟಕ ನಂ.2

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಚಿವಾಲಯ ಕೈಗೊಂಡಿರುವ ಹವಾಮಾನ ಬದಲಾವಣೆ ಉಪಕ್ರಮದ ಹಿನ್ನೆಲೆಯಲ್ಲಿ ಈ ವಿಶ್ವಸಂಸ್ಥೆ ಜಾಗತಿಕ ಹವಾಮಾನ ಕ್ರಿಯೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಹವಾಮಾನ ಬದಲಾವಣೆ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆವಿಷ್ಕಾರಕ ಪರಿಹಾರಗಳನ್ನು ಸೂಚಿಸುವ ಯೋಜನೆಗಳನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇದಲ್ಲದೇ, ಬಡತನ ನಿರ್ಮೂಲನೆ, ಲಿಂಗ ಸಮಾನತೆ ಮತ್ತು ಆರ್ಥಿಕ ಅವಕಾಶಗಳೊಂದಿಗೆ ಒಟ್ಟಾರೆ ಅಭಿವೃದ್ಧಿಯ ಗುರಿಗಳನ್ನು ಹೊಂದಿರುವ ಅಂಶಗಳು ಈ ಯೋಜನೆಗಳಲ್ಲಿರುವುದನ್ನು ಪರಿಗಣಿಸಲಾಗುತ್ತದೆ.

ಇಂಗಾಲ ಶೂನ್ಯ ಉಪಕ್ರಮವನ್ನು ಜಾರಿಗೊಳಿಸಿದ ಇನ್ಫಿ

ಇಂಗಾಲ ಶೂನ್ಯ ಉಪಕ್ರಮವನ್ನು ಜಾರಿಗೊಳಿಸಿದ ಇನ್ಫಿ

ಈ ಪ್ರಶಸ್ತಿಯನ್ನು ಪ್ರಕಟಿಸಿ ಮಾತನಾಡಿದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಜಾಗತಿಕ ಹವಾಮಾನ ಕ್ರಿಯಾ ಕಾರ್ಯಕ್ರಮದ ವ್ಯವಸ್ಥಾಪಕ ನಿಕ್ಲಸ್ ಸ್ವೆನ್ನಿಂಗ್ಸೆನ್ ಅವರು, "ವಿಶ್ವಸಂಸ್ಥೆ ಜಾಗತಿಕ ಹವಾಮಾನ ಕ್ರಿಯೆ ಪ್ರಶಸ್ತಿಗೆ ವಿಶ್ವದಾದ್ಯಂತದಿಂದ 670 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಎಲ್ಲಾ ಯೋಜನೆಗಳನ್ನು ಪರಿಶೀಲಿಸಿದ ನಂತರ ಅತ್ಯುತ್ತಮ ಎನಿಸಿದ ಇನ್‍ಫೋಸಿಸ್‍ಗೆ ಪ್ರಶಸ್ತಿಯನ್ನು ನೀಡಲು ನಮಗೆ ಹೆಮ್ಮೆ ಎನಿಸುತ್ತಿದೆ.

ಇಂಗಾಲ ಶೂನ್ಯ ಉಪಕ್ರಮವನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಎಲ್ಲರಿಗೂ ಸುಸ್ಥಿರ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಇನ್‍ಫೋಸಿಸ್ ಹೆಜ್ಜೆ ಇಟ್ಟಿದೆ. ಇನ್‍ಫೋಸಿಸ್ ಇಂಧನ ದಕ್ಷತೆ ಕ್ರಮಗಳನ್ನು ಕೈಗೊಂಡಿದೆ ಮತ್ತು ಪುನರ್‍ನವೀಕರಿಸಬಹುದಾದ ಇಂಧನವನ್ನು ಬಳಸುತ್ತಿದೆ. ಇಂಗಾಲ ಹೊರಸೂಸುವ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ. ಕಡಿಮೆ ಇಂಗಾಲದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಇನ್‍ಫೋಸಿಸ್ ವಿಶ್ವದ ಪರಿವರ್ತನೆಗೆ ನೆರವಾಗುತ್ತಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ಯಾರೀಸ್ ಹವಾಮಾನ ಬದಲಾವಣೆ ಒಪ್ಪಂದ

ಪ್ಯಾರೀಸ್ ಹವಾಮಾನ ಬದಲಾವಣೆ ಒಪ್ಪಂದ

ಇನ್‍ಫೋಸಿಸ್ ಹವಾಮಾನ ಬದಲಾವಣೆ ವಿರುದ್ಧದ ಹೋರಾಟವನ್ನು 2008 ರಲ್ಲಿ ಇಂಗಾಲ ಪ್ರಮಾಣದ ಮೌಲ್ಯಮಾಪನದೊಂದಿಗೆ ಆರಂಭಿಸಿತ್ತು. 2011 ರಲ್ಲಿ ಇನ್‍ಫೋಸಿಸ್ ಇಂಗಾಲ ತಟಸ್ಥತೆಯನ್ನು ಕಾಯ್ದುಕೊಳ್ಳುವ ತನ್ನ ಬದ್ಧತೆಯನ್ನು ವಿಶ್ವಸಂಸ್ಥೆಗೆ ತಿಳಿಸಿತ್ತು.

ಈ ನಿಟ್ಟಿನಲ್ಲಿ ಕಂಪನಿಯು ಅಂದಿನಿಂದ ಇಂಧನ ದಕ್ಷತೆ, ಪುನರ್‍ನವೀಕರಿಸಬಹುದಾದ ಇಂಧನ ಮತ್ತು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಅನುಷ್ಠಾನಕ್ಕೂ ತಂದಿತು. ಕಡಿಮೆ ಇಂಗಾಲದ ಭವಿಷ್ಯದ ದೃಷ್ಟಿಯಿಂದ ಇನ್‍ಫೋಸಿಸ್ ದೂರದೃಷ್ಟಿಯ ಬದ್ಧತೆಯನ್ನು ಪ್ರದರ್ಶಿಸಿದೆ.ಇದು 2015 ಪ್ಯಾರೀಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಗಮನಾರ್ಹವಾಗಿ ಮುಂದಿದೆ. ಇದಲ್ಲದೇ, 2018 ರ ಅಕ್ಟೋಬರ್ ನಲ್ಲಿ ಯುಎನ್‍ಎಫ್‍ಸಿಸಿಸಿ ಆಯೋಜಿಸಿದ್ದ 'ಈಗ ಹವಾಮಾನ ತಟಸ್ಥ' ಎಂಬ ವೇದಿಕೆಯಲ್ಲಿ ಇನ್‍ಫೋಸಿಸ್ ಕಡಿಮೆ ಇಂಗಾಲ ಆರ್ಥಿಕತೆಯತ್ತ ಸಾಗುವ ಬದ್ಧತೆಯನ್ನು ಘೋಷಣೆ ಮಾಡಿತ್ತು.
ಇನ್‍ಫೋಸಿಸ್‍ನ ಪ್ರಮುಖ ಸಾಧನೆಗಳು

ಇನ್‍ಫೋಸಿಸ್‍ನ ಪ್ರಮುಖ ಸಾಧನೆಗಳು

* ಇನ್‍ಫೋಸಿಸ್ ವಿಶ್ವದಾದ್ಯಂತ ಅತ್ಯಂತ ಇಂಧನ ದಕ್ಷತೆಯ ಕ್ಯಾಂಪಸ್‍ಗಳನ್ನು ಹೊಂದಿದೆ.

* ಆರ್‍ಇ100 ಜಾಗತಿಕ ಅಭಿಯಾನಕ್ಕೆ ಮೊದಲು ಸಹಿ ಹಾಕಿದ ಸಂಸ್ಥೆ ಇನ್‍ಫೋಸಿಸ್ ಮತ್ತು ತನ್ನೆಲ್ಲಾ ವಿದ್ಯುತ್ ಅಗತ್ಯತೆಗಳಿಗೆ ಪುನರ್‍ನವೀಕರಿಸಬಹುದಾದ ಇಂಧನ ವ್ಯವಸ್ಥೆಗೆ ಪರಿವರ್ತನೆ ಮಾಡಿಕೊಂಡಿದೆ.

* 2008 ರಿಂದ ತಲಾ ಇಂಧನ ಬಳಕೆ ಪ್ರಮಾಣವನ್ನು ಶೇ.51 ರಷ್ಟು ಕಡಿಮೆ ಮಾಡಿದೆ.
* 2019 ರ ಹಣಕಾಸು ವರ್ಷದಲ್ಲಿ ಕಂಪನಿಯು ಶೇ.46 ರಷ್ಟು ವಿದ್ಯುತ್ ಅನ್ನು ಪುನರ್‍ನವೀಕರಿಸಬಹುದಾದ ಇಂಧನ ಮೂಲದಿಂದ ಬಳಸಿಕೊಳ್ಳುತ್ತಿದೆ. ಇದರಲ್ಲಿ ತನ್ನದೇ ಆದ 49 ಮೆಗಾವ್ಯಾಟ್ ಸೋಲಾರ್ ಘಟಕಗಳನ್ನು ಹೊಂದಿದೆ.
* ಮಾಲಿನ್ಯ ತಗ್ಗಿಸುವ ದೊಡ್ಡ ಮಟ್ಟದ ಸಮುದಾಯ ಆಧಾರಿತ ಜಾಲವನ್ನು ಹೊಂದಿದೆ. ಈ ಯೋಜನೆಗಳು ಕೇವಲ ಹವಾಮಾನ ಬದಲಾವಣೆ ಸಮಸ್ಯೆಯನ್ನು ಎದುರಿಸುವುದಷ್ಟೇ ಅಲ್ಲ, ಇದರಡಿ 1,00,000 ಕುಟುಂಬಗಳು ಇಂದು ದೇಶದ ಗ್ರಾಮಾಂತರ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ.

ಚೀಫ್ ಆಪರೇಟಿಂಗ್ ಆಫೀಸರ್ ಪ್ರವೀಣ್ ರಾವ್

ಚೀಫ್ ಆಪರೇಟಿಂಗ್ ಆಫೀಸರ್ ಪ್ರವೀಣ್ ರಾವ್

ಇನ್‍ಫೋಸಿಸ್‍ನ ಚೀಫ್ ಆಪರೇಟಿಂಗ್ ಆಫೀಸರ್ ಪ್ರವೀಣ್ ರಾವ್ ಅವರು ಮಾತನಾಡಿ, "ಇನ್‍ಫೋಸಿಸ್‍ನಲ್ಲಿ ನಾವು ಇಂಗಾಲ ತಟಸ್ಥ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದ್ದು, ಅದು ಈಡೇರಿಕೆ ಮತ್ತು ಭರವಸೆಯ ಪ್ರಯಾಣವಾಗಿ ಮುಂದುವರಿದಿದೆ. ಸಮಗ್ರ ಇಂಗಾಲ ತಟಸ್ಥತೆಯ ಕಾರ್ಯತಂತ್ರದೊಂದಿಗೆ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದೆ. ವಿಶ್ವಸಂಸ್ಥೆಯ ಈ ಪ್ರಶಸ್ತಿಯು ನಮ್ಮ ಬದ್ಧತೆಗೆ ಮೌಲ್ಯವರ್ಧನೆಯನ್ನುಂಟು ಮಾಡಿದೆ ಮತ್ತು ಹವಾಮಾನ ಬದಲಾವಣೆಯ ಉದ್ದೇಶಕ್ಕೆ ಬೆಂಬಲ ಸಿಕ್ಕಿ ಮುನ್ನಡಿ ಇಡಲು ಉತ್ತೇಜನ ದೊರೆತಂತಾಗಿದೆ" ಎಂದು ಅಭಿಪ್ರಾಯಪಟ್ಟರು.

ಬೆಳ್ಳಿತೆರೆಗೆ ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಜೀವನಗಾಥೆಬೆಳ್ಳಿತೆರೆಗೆ ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಜೀವನಗಾಥೆ

English summary
Infosys has won the prestigious United Nations Global Climate Action Award in the 'Climate Neutral Now' category. This announcement came after the UN Climate Summit in New york.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X