ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ ಇನ್ಫೋಸಿಸ್ ಅಧಿಕೃತವಾಗಿ ಹೊರಕ್ಕೆ: ಸಲೀಲ್ ಪರೇಖ್

|
Google Oneindia Kannada News

ಬೆಂಗಳೂರು, ಏಪ್ರಿಲ್ 13: ರಷ್ಯಾದಿಂದ ಐಟಿ ದಿಗ್ಗಜ ಇನ್ಫೋಸಿಸ್ ಹೊರ ನಡೆಯುತ್ತಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಈ ಬಗ್ಗೆ ಸುದ್ದಿ ಬಂದಿತ್ತು. ಇಂದು ಇನ್ಫೋಸಿಸ್ ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಸಿಇಒ ಸಲೀಲ್ ಪರೇಖ್ ಈ ಕುರಿತಂತೆ ಅಧಿಕೃತ ಹೇಳಿಕೆ ನೀಡಿದ್ದಾರೆ.

ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವದ ಬಗ್ಗೆ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರ ಪಾಲು ಇರುವ ಬಗ್ಗೆ ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ ಅಳಿಯ,ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್ ಅವರಿಗೆ ಸಂದರ್ಶನದಲ್ಲಿ ಪ್ರಶ್ನೆಗಳನ್ನು ಕೇಳಿದ ಬಳಿಕ ಈ ಬಗ್ಗೆ ಸುಳಿವು ಸಿಕ್ಕಿತ್ತು. ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವದ ಬಗ್ಗೆ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಪಾಲು ಇರುವ ಬಗ್ಗೆ ತೀಕ್ಷ್ಣವಾದ ಪ್ರಶ್ನೆಗಳನ್ನು ಎದುರಿಸಿದ್ದರು.

ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವ; ಇನ್ಪಿ ಮೂರ್ತಿ ಅಳಿಯನಿಗೆ ಪ್ರಶ್ನೆಗಳ ಬಾಂಬ್!ರಷ್ಯಾದಲ್ಲಿ ಇನ್ಫೋಸಿಸ್ ಅಸ್ತಿತ್ವ; ಇನ್ಪಿ ಮೂರ್ತಿ ಅಳಿಯನಿಗೆ ಪ್ರಶ್ನೆಗಳ ಬಾಂಬ್!

ಇನ್ಫೋಸಿಸ್ ರಷ್ಯಾದಿಂದ ಇತರ ಜಾಗತಿಕ ವಿತರಣಾ ಕೇಂದ್ರಗಳಿಗೆ ಸೇವೆಗಳನ್ನು ಬದಲಾಯಿಸುತ್ತಿದೆ. ಇನ್ಫೋಸಿಸ್ ರಷ್ಯಾದಲ್ಲಿ 100 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ.

Infosys to move its business out of Russia: CEO Salil Parekh

"ಪರಿಸ್ಥಿತಿಯನ್ನು ನೋಡಿದಾಗ ನಾವು ನಮ್ಮ ವ್ಯವಹಾರ ಮತ್ತು ನಮ್ಮ ಎಲ್ಲಾ ಕೆಲಸಗಳನ್ನು ರಷ್ಯಾದಿಂದ ಹೊರಗಿನ ಕೇಂದ್ರಗಳಿಗೆ ಬದಲಾಯಿಸಲು ಪ್ರಾರಂಭಿಸಿದ್ದೇವೆ" ಎಂದು ಇನ್ಫೋಸಿಸ್ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ಅವರು ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಪರಿಣಾಮದ ಕುರಿತು ಪ್ರಶ್ನೆಗೆ ಉತ್ತರಿಸಿದರು.

ಬೆಂಗಳೂರು ಮೂಲದ ಪ್ರಮುಖ ಐಟಿ ರಫ್ತು ಕಂಪನಿ ಇನ್ಫೋಸಿಸ್ ಏಪ್ರಿಲ್ 13ರಂದು ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಶೇ 12ರಷ್ಟು ಲಾಭ ಕಂಡು ಬಂದಿದ್ದರೂ, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2ರಷ್ಟು ಲಾಭ ಇಳಿಕೆಯಾಗಿದೆ. ಈ ತ್ರೈಮಾಸಿಕದಲ್ಲಿ 5,686 ಕೋಟಿ ರು ನಿವ್ವಳ ಲಾಭ ದಾಖಲಿಸಿದೆ.

FY22 ರ ಕೊನೆಯಲ್ಲಿ ಕಂಪನಿಯು 3,14,015 ಉದ್ಯೋಗಿಗಳನ್ನು ಹೊಂದಿತ್ತು. Q3FY22 ರ ಕೊನೆಯಲ್ಲಿ ಉದ್ಯೋಗಿಗಳ ಸಂಖ್ಯೆ 2,92,067 ರಷ್ಟಿದೆ. ಮಹಿಳಾ ಉದ್ಯೋಗಿಗಳು ಒಟ್ಟು ಉದ್ಯೋಗಿ ಸಾಮರ್ಥ್ಯದ ಶೇ 39.6 ರಷ್ಟು ಹೊಂದಿದ್ದಾರೆ. Q3FY22 ರ ಅವಧಿಯಲ್ಲಿ 25.5 ಶೇಕಡಾಕ್ಕೆ ಹೋಲಿಸಿದರೆ ತ್ರೈಮಾಸಿಕದಲ್ಲಿ ಕಂಪನಿಯ ಕ್ಷೀಣತೆ(attrition)ಯು 27.7 ಶೇಕಡಾಕ್ಕೆ ಏರಿದೆ.

ಡಿವಿಡೆಂಡ್
ಮಾರ್ಚ್ 31, 2022 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಈಕ್ವಿಟಿ ಷೇರಿಗೆ ರೂ 16/- ರ ಅಂತಿಮ ಲಾಭಾಂಶವನ್ನು ಇನ್ಫೋಸಿಸ್ ಶಿಫಾರಸು ಮಾಡಿದೆ. ಅಂತಿಮ ಲಾಭಾಂಶವನ್ನು ಪಾವತಿಸಲು ಜೂನ್ 1, 2022 ರ ದಾಖಲೆಯ ದಿನಾಂಕ ಮತ್ತು ಲಾಭಾಂಶವನ್ನು ಜೂನ್ 28, 2022 ರಂದು ಪಾವತಿಸಲಾಗುತ್ತದೆ.

Recommended Video

ನಾಯಕತ್ವದ ಜವಾಬ್ದಾರಿ ಸಿಕ್ಕಮೇಲೆ ಆಡೋದನ್ನೇ ಮರೆತ ಆಟಗಾರರು ಇವರು... | Oneindia Kannada

ಏಪ್ರಿಲ್ 13 ರಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಇನ್ಫೋಸಿಸ್ ಷೇರು ರೂ 6.10 ರಷ್ಟು ಏರಿಕೆಯೊಂದಿಗೆ ರೂ 1,748.55 ಕ್ಕೆ ಕೊನೆಗೊಂಡಿತು. ಕಳೆದ ಒಂದು ತಿಂಗಳಲ್ಲಿ ಸ್ಟಾಕ್ 4.0 ಪ್ರತಿಶತದಷ್ಟು ಕಡಿಮೆ ವಹಿವಾಟು ನಡೆಸುತ್ತಿದೆ ಮತ್ತು ಕಳೆದ ಒಂದು ವರ್ಷದಲ್ಲಿ 25.2 ಶೇಕಡಾ ಆದಾಯವನ್ನು ಗಳಿಸಿದೆ.

English summary
India's second-largest IT services provider Infosys said on Wednesday it is moving its business out of Russia due to the ongoing conflict in the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X