ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ನಿಂದ ಪ್ರತಿ ವರ್ಷ 6 ಸಾವಿರ ಟೆಕ್ಕಿಗಳ ನೇಮಕ

By Sachhidananda Acharya
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11: ಆಡಳಿತ ಮಂಡಳಿಯ ತಿಕ್ಕಾಟದ ನಂತರ ಇದೀಗ ಸಾಫ್ಟ್ ವೇರ್ ದೈತ್ಯ ಕಂಪನಿ ಇನ್ಫೋಸಿಸ್ ಕಂಪನಿ ಕಡೆ ಗಮನ ಹರಿಸಲು ಆರಂಭಿಸಿದೆ. ಈ ವರ್ಷ 6 ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುವ ಇನ್ಫೋಸಿಸ್ ಮುಂದಿನ ಒಂದೆರಡು ವರ್ಷವೂ ಇಷ್ಟೇ ಪ್ರಮಾಣದ ಸಿಬ್ಬಂದಿಗಳನ್ನು ನೇಮಸಿಕೊಳ್ಳಲು ನಿರ್ಧರಿಸಿದೆ.

ನಾರಾಯಣ ಮೂರ್ತಿ ಕಿರಿಕಿರಿಯಿಂದಲೇ ಸಿಕ್ಕಾ ರಾಜಿನಾಮೆ: ಇನ್ಫೋಸಿಸ್ನಾರಾಯಣ ಮೂರ್ತಿ ಕಿರಿಕಿರಿಯಿಂದಲೇ ಸಿಕ್ಕಾ ರಾಜಿನಾಮೆ: ಇನ್ಫೋಸಿಸ್

ಈಗಾಗಲೇ ಈ ವರ್ಷ 6 ಸಾವಿರ ಎಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮುಂದಿನ ಒಂದೆರಡು ವರ್ಷ ಇದೇ ಪ್ರಮಾಣದಲ್ಲಿ ಹೊಸ ಎಂಜಿನಿಯರ್ ಗಳ ನೇಮಕ ಮಾಡಿಕೊಳ್ಳಲಾಗುವುದು ಎಂದು," ಇನ್ಫೋಸಿಸ್ ಹಂಗಾಮಿ ಸಿಇಒ ಯು. ಬಿ. ಪ್ರವೀಣ್‌ ರಾವ್‌ ಹೇಳಿದ್ದಾರೆ.

Infosys to hire 6,000 techies annually in every year

ಈ ಸಂಬಂಧ ಮಾತನಾಡಿರುವ ಅವರು, ವರ್ಷಕ್ಕೆ 10 ಲಕ್ಷದಷ್ಟು ವಿದ್ಯಾರ್ಥಿಗಳು ಪದವಿ ಶಿಕ್ಷಣ ಪೂರ್ಣಗೊಳಿಸುತ್ತಾರೆ. ಇವರಲ್ಲಿ ಕೇವಲ ಶೇ. 20ರಿಂದ 30ರಷ್ಟು ಪದವೀಧರರು ಮಾತ್ರ ಅರ್ಹ ಪ್ರತಿಭೆ ಹೊಂದಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಅವಕಾಶ ಕಡಿಮೆ ಇದೆ. ಹೀಗಾಗಿ ಕಂಪನಿ ಸ್ಥಳೀಯರ ನೇಮಕಕ್ಕೆ ಒತ್ತು ನೀಡುತ್ತಿದೆ," ಎಂದು ಹೇಳಿದ್ದಾರೆ.

ಇನ್ನು ಜೂನ್ 2017ರ ಅಂತ್ಯಕ್ಕೆ ಕಂಪನಿಯಲ್ಲಿ ಒಟ್ಟು 1,98,553 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಪ್ರವೀಣ್ ರಾವ್ ಮಾಹಿತಿ ನೀಡಿದ್ದಾರೆ.

ಸದ್ಯ ಅಮೆರಿಕದಲ್ಲಿ 10 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲು ಕಂಪನಿ ನಿರ್ಧರಿಸಿದೆ ಎಂದು ಪ್ರವೀಣ್ ರಾವ್ ಹೇಳಿದ್ದಾರೆ.

English summary
Infosys will continue to hire about 6,000 engineers annually over next one to two years, same as last fiscal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X