ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ನಿಂದ ಈ ವರ್ಷ 25, 000 ಹೊಸ ನೇಮಕಾತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಜೊತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತ ಹಾಗೂ ಜಾಗತಿಕವಾಗಿ 25, 000 ಹೊಸ ನೇಮಕಾತಿ ಬಗ್ಗೆ ಪ್ರಕಟಿಸಲಾಗಿದೆ. 2021ರ ಆರ್ಥಿಕ ವರ್ಷದಲ್ಲಿ 1,00,000 ಕೋಟಿ ರು ಆದಾಯ ದಾಖಲಿಸಿ ಹೊಸ ಮೈಲಿಗಲ್ಲು ಸಾಧಿಸಿದೆ. ಇದೇ ಖುಷಿಯಲ್ಲಿ ಮುಂದಿನ ಜುಲೈ ತಿಂಗಳಲ್ಲಿ ಸಂಬಳ ಏರಿಕೆ ಬಗ್ಗೆ ಘೋಷಿಸಲಾಗಿದೆ.

ಇನ್ಫೋಸಿಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಲೀಲ್ ಪರೇಖ್ ಅವರು ಸಂಬಳ ಏರಿಕೆ ಸುದ್ದಿಯನ್ನು ಖಚಿತಪಡಿಸಿದ್ದು, ಅಟ್ರಿಷನ್ ದರ ಸಮತೋಲನ ಕಾಯ್ದುಕೊಳ್ಳಲಾಗುವುದು ಎಂದಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಸಿಒಒ ಪ್ರವೀಣ್ ರಾವ್, ಅಟ್ರಿಷನ್ ದರ ಹೆಚ್ಚಿರುವ ವಿಭಾಗಗಳನ್ನು ಗುರಿಯಾಗಿಸಿಕೊಂಡು ಸಂಬಳ ಏರಿಕೆ, ಬೋನಸ್ ನೀಡಲಾಗುತ್ತದೆ ಎಂದರು. 3ನೇ ತ್ರೈಮಾಸಿಕದಲ್ಲಿ ಶೇ 10.3ರಷ್ಟಿದ್ದ ಆಟ್ರಿಷನ್ ದರ (https://en.wikipedia.org/wiki/Churn_rate)4ನೇ ತ್ರೈಮಾಸಿಕದಲ್ಲಿ ಶೇ 15.2ರಷ್ಟಾಗಿದೆ. ಮಾರ್ಚ್ 31, 2021ಕ್ಕೆ ಅನ್ವಯವಾಗುವಂತೆ ಇನ್ಫೋಸಿಸ್ 10, 307 ಹೊಸ ನೇಮಕಾತಿ ಮಾಡಿಕೊಂಡಿದ್ದು, ಒಟ್ಟಾರೆ, 2,59,619 ಉದ್ಯೋಗಿಗಳನ್ನು ಹೊಂದಿದೆ. ಶೇ 38.6ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ.

Infosys to hire 25,000 from campus in FY22

ಕಳೆದ ಆರ್ಥಿಕ ವರ್ಷದಲ್ಲಿ 21,00 ಫ್ರೆಶರ್ಸ್ ನೇಮಕ ಮಾಡಿಕೊಳ್ಳಲಾಗಿದೆ ಎಂದು ಇನ್ಫೋಸಿಸ್ ಪ್ರಕಟಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 25,000 ಹೊಸ ನೇಮಕಾತಿ ನಡೆಯಲಿದ್ದು, ಈ ಪೈಕಿ 24, 000 ಮಂದಿಯನ್ನು ಭಾರತದಲ್ಲೇ ನೇಮಕ ಮಾಡಲಾಗುತ್ತದೆ, ಕ್ಯಾಂಪಸ್ ಸಂದರ್ಶನ ಮೂಲಕ ಪದವೀಧರರನ್ನು ಆಯ್ಕೆ ಮಾಡಲಾಗುವುದು ಎಂದು ಪ್ರವೀಣ್ ರಾವ್ ಹೇಳಿದರು.

ಯುಎಸ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪೈಕಿ ಶೇ 69ರಷ್ಟು ಮಂದಿ ಸ್ಥಳೀಯರೇ ಇದ್ದಾರೆ. ಹೀಗಾಗಿ, ವೀಸಾ ನೀತಿ ಬದಲಾವಣೆಗೆ ತಕ್ಕಂತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಅಟ್ರಿಷನ್ ದರ ಅಧಿಕವಾಗಿದ್ದು, ಇನ್ನು ಒಂದೆರಡು ತ್ರೈಮಾಸಿಕ ಇದೇ ದರ ಮುಂದುವರೆಯುವ ಸಾಧ್ಯತೆಯಿದೆ. ವರ್ಕ್ ಫ್ರಂ ಹೋಂ ಸೌಲಭ್ಯ ಮುಂದುವರೆಯಲಿದೆ ಎಂದು ತಿಳಿಸಿದರು.

English summary
India's second largest IT services company Infosys to hire 25,000 from campus in FY22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X