• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊವಿಡ್ 19 ನಡುವೆ ಕ್ಯಾಂಪಸ್ ಸಂದರ್ಶನ, ಇನ್ಫಿಯಿಂದ ಆಫರ್

|

ಬೆಂಗಳೂರು, ಜೂನ್ 14: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ, ಬೆಂಗಳೂರು ಮೂಲದ ಇನ್ಫೋಸಿಸ್ ನಿಂದ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ಕೊರೊನಾವೈರಸ್ ಭೀತಿಯಿಂದ ಲಾಕ್ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲೇ ಕ್ಯಾಂಪಸ್ ಸಂದರ್ಶನ ಆರಂಭಿಸಲು ಇನ್ಫೋಸಿಸ್ ಮುಂದಾಗಿದೆ.

      ಬೆಂಗಳೂರು ಪೊಲೀಸರೊಂದಿಗೆ ಕೈ ಜೋಡಿಸಿ ಎಂದ ನಾರಾಯಣ ಮೂರ್ತಿ ದಂಪತಿಗಳು | Infosys | Narayan & Sudha Murthy

      ಕೊವಿಡ್19 ವಿರುದ್ಧ ಹೋರಾಟದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿಲ್ಲವಾದ್ದರಿಂದ ಉದ್ಯೋಗಿಗಳಿಗೆ ಸದ್ಯಕ್ಕೆ ಸಂಬಳ ಏರಿಕೆ, ಬಡ್ತಿ ನೀಡಲು ಸಾಧ್ಯವಿಲ್ಲ ಎಂದಿದ್ದ ಇನ್ಫೋಸಿಸ್, ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸುತ್ತಿರುವುದಾಗಿ ಘೋಷಿಸಿದೆ.

      ದೇಶದ 2ನೇ ದೊಡ್ಡ ಐಟಿ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ ಇಲ್ಲ

      ಪ್ರಸಕ್ತ ಆರ್ಥಿಕ ವರ್ಷದಲ್ಲಿ ಫ್ರೆಶರ್ಸ್ ನೇಮಕಾತಿ ಮುಂದುವರೆಯಲಿದೆ ಎಂದು ಇನ್ಫೋಸಿಸ್ ಹೇಳಿದೆ. ಈ ಮೂಲಕ ದೇಶದ ಪ್ರಮುಖ ಸಾಫ್ಟ್ ವೇರ್ ಸಂಸ್ಥೆಗಳಾದ ಟಿಸಿಎಸ್, ವಿಪ್ರೋ ರೀತಿಯಲ್ಲೇ ಇನ್ಫೋಸಿಸ್ ಕೂಡಾ ಫ್ರೆಶರ್ಸ್ ಕೈ ಹಿಡಿಯಲಿದೆ.

      ಸರಿ ಸುಮಾರು 18,000 ಮಂದಿ ಆಫರ್

      ಸರಿ ಸುಮಾರು 18,000 ಮಂದಿ ಆಫರ್

      ಒಟ್ಟಾರೆ, ಸರಿ ಸುಮಾರು 18,000 ಮಂದಿ ಫ್ರೆಶರ್ಸ್ ಗಳಿಗೆ ಈ ವರ್ಷ ಆಫರ್ ಲೆಟರ್ ಸಿಗುವ ಸಾಧ್ಯತೆಯಿದೆ ಎಂದು ನೇಮಕಾತಿ ಸಂಸ್ಥೆಯೊಂದು ಮಾಹಿತಿ ನೀಡಿದೆ. ಎಷ್ಟು ಮಂದಿ ನೇಮಕಾತಿಯಾಗಲಿದೆ ಎಂಬುದರ ಬಗ್ಗೆ ಇನ್ಫೋಸಿಸ್ ಸ್ಪಷ್ಟಪಡಿಸಿಲ್ಲ.

      ಪಿರಿಮಿಡ್ ಮಾದರಿಯಂತೆ ನೇಮಕಾತಿ

      ಪಿರಿಮಿಡ್ ಮಾದರಿಯಂತೆ ನೇಮಕಾತಿ

      ಪಿರಿಮಿಡ್ ಮಾದರಿಯಂತೆ ನೇಮಕಾತಿ ಮುಂದುವರೆಯಲಿದ್ದು, ಜ್ಯೂನಿಯರ್ ಲೆವಲ್ ನಲ್ಲಿ ಹೆಚ್ಚಿನ ನೇಮಕಾತಿ, ಮಧ್ಯಮ ಸ್ತರದಲ್ಲಿ ಉದ್ಯೋಗ ಭದ್ರತೆ ಕಾಯ್ದುಕೊಳ್ಳಲಾಗುವುದು, ಉನ್ನತ ಸ್ತರದಲ್ಲಿ ಯಾವುದೇ ಬಡ್ತಿ, ಸಂಬಳ ಏರಿಕೆ ಸದ್ಯಕ್ಕಿಲ್ಲ ಎಂದು ಇನ್ಫೋಸಿಸ್ ಉಪಾಧ್ಯಕ್ಷ, ಎಚ್ ಆರ್ ವಿಭಾಗದ ಗ್ರೂಪ್ ಮುಖ್ಯಸ್ಥ ಕ್ರಿಸ್ ಶಂಕರ್ ಹೇಳಿದ್ದಾರೆ.

      Job cuts: ಡಿಸಿಎಂ ಸಲಹೆಗೆ ತಲೆದೂಗಿದ ಬೆಂಗಳೂರಿನ ಐಟಿ ಮುಖ್ಯಸ್ಥರು

      ಶೇ 93 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ

      ಶೇ 93 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ

      ಪ್ರಸಕ್ತ ಲಾಕ್ಡೌನ್ ಪರಿಸ್ಥಿತಿಯಲ್ಲಿ ಇನ್ಫೋಸಿಸ್ ಸಂಸ್ಥೆಯ ಶೇ 93 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ಅನುಸರಿಸುತ್ತಿದ್ದಾರೆ ಎಂದು ಇನ್ಫೋಸಿಸ್ ಸಿಇಒ ಹಾಗೂ ಎಂಡಿ ಸಲೀಲ್ ಪರೇಖ್ ಹೇಳಿದ್ದಾರೆ.

      ಇನ್ಫೋಸಿಸ್ ಫೌಂಡೇಷನ್‍ನಿಂದ 100 ಹಾಸಿಗೆಗಳ ಕ್ವಾರಂಟೈನ್ ಸೌಲಭ್ಯ

      ಟಿಸಿಎಸ್ ನಿಂದಲೂ ಕ್ಯಾಂಪರ್ಸ್ ಸಂದರ್ಶನ

      ಟಿಸಿಎಸ್ ನಿಂದಲೂ ಕ್ಯಾಂಪರ್ಸ್ ಸಂದರ್ಶನ

      ಕೊರೊನಾವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಕಾರಣ ಸಂಸ್ಥೆಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಿಲ್ಲ ಎಂದು ಇನ್ಫಿ ಘೋಷಿಸಿದೆ. ಇನ್ನೊಂದೆಡೆ, ಸುಮಾರು 40,000 ಆಫರ್ ಗಳನ್ನು ಫ್ರೆಶರ್ಸ್ ಗೆ ನೀಡಲಾಗಿದ್ದು, ಈ ವರ್ಷದಲ್ಲೇ ಅವರನ್ನು ಸಂದರ್ಶನದ ಮೂಲಕ ಸಂಸ್ಥೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ ಎಂದು ದೇಶದ ಅತಿದೊಡ್ಡ ಸಂಸ್ಥೆ ಟಿಸಿಎಸ್ ಕೂಡಾ ಘೋಷಿಸಿದೆ.

      ಕೊವಿಡ್19: ಕೆಲಸದಿಂದ ವಜಾಗೊಂಡ ಟೆಕ್ಕಿ ದೀಪಾ ಬರೆದ ಪತ್ರ

      English summary
      second largest IT services firm Infosys says it will go to college campuses for hiring of freshers despite demand disruption due to Covid-19.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X