ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ನೀಡಿದ ಆದೇಶಕ್ಕೆ ಭಾರತದಲ್ಲಿ ಐಟಿ ಸಂಸ್ಥೆ ಷೇರುಗಳು ತತ್ತರ

|
Google Oneindia Kannada News

ಬೆಂಗಳೂರು, ಏಪ್ರಿ ಲ್ 21: ಸ್ಥಳೀಯರಿಗೆ ಉದ್ಯೋಗ, ದೇಶದ ಪ್ರಜೆಗಳ ಹಿತ ಕಾಯುವ ದೃಷ್ಟಿಯಿಂದ ವಲಸಿಗರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ನಿರ್ಬಂಧ ವಿಧಿಸಿರುವುದು ತಿಳಿದಿರಬಹುದು. ಈ ಸುದ್ದಿ ಹಬ್ಬುತ್ತಿದ್ದಂತೆ ಭಾರತದ ಷೇರುಪೇಟೆಯಲ್ಲಿ ಐಟಿ ಕಂಪನಿಗಳ ಷೇರುಗಳು ಕುಸಿತ ಕಂಡಿವೆ.

Recommended Video

Tribes life in Quarantine Days | ಲಾಕ್ ಡೌನ್ ನಿಂದ ಬಳಲುತ್ತಿದ್ದಾರೆ ಬುಡಕಟ್ಟು ಜನ | Oneindia Kannada

ಅಮೆರಿಕದಲ್ಲಿ ಆರ್ಥಿಕ ಹಿಂಜರಿತದಿಂದ 220 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಏಕೆಂದರೆ ಕಳೆದ ಮಾರ್ಚ್ ನಲ್ಲಿ ಯುನೈಟೆಡ್ ಸ್ಟೇಟ್ಸ್ ನ ಚಿಲ್ಲರೆ ವ್ಯಾಪಾರದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಇದರ ಜೊತೆಗೆ ಕೊರೊನಾದಿಂದ ಅಮೆರಿಕದ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಟ್ರಂಪ್ ಈ ರೀತಿ ಕ್ರಮಕ್ಕೆ ಮುಂದಾಗಿದ್ದಾರೆ.

ದೇಶದ 2ನೇ ದೊಡ್ಡ ಐಟಿ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ ಇಲ್ಲದೇಶದ 2ನೇ ದೊಡ್ಡ ಐಟಿ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ ಇಲ್ಲ

ಇದರ ಪರಿಣಾಮವಾಗಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (NSE) ನಲ್ಲಿ ಐಟಿ ಕಂಪನಿ ಷೇರುಗಳು ಸರಾಸರಿ 6ರಷ್ಟು ಕುಸಿತ ಕಂಡಿವೆ. ಟಾಟಾ ಕನ್ಸಲ್ಟೆನ್ಸಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ವಿಪ್ರೋ, ಎಚ್ ಸಿಎಲ್ ಟೆಕ್ನಾಲಜೀಸ್, ಹೆಕ್ಸಾವೇರ್, ಎನ್ ಐಐಟಿ ಟೆಕ್ನಾಲಜೀಸ್, ಮೈಂಡ್ ಟ್ರೀ ಷೇರುಗಳು ಶೇ 1 ರಿಂದ 5ರಷ್ಟು ಇಂಟ್ರಾ ಡೇ ವ್ಯವಹಾರದಲ್ಲಿ ಕುಸಿತ ಕಂಡಿದೆ.

Infosys, TCS, Wipro: IT stocks tumble as Trump plans immigration suspension

ಇನ್ಫೋಸಿಸ್ 4ನೇ ತ್ರೈಮಾಸಿಕ ವರದಿ ಪ್ರಕಟ ಮಾಡಿದ್ದು, ಶೇ 4ರಷ್ಟು ಕುಸಿತ ಕಂಡು 628 ರು ಗೆ ಕುಸಿದಿದ್ದು, ಆದರೆ ನಂತರ ಚೇತರಿಕೆ ಕಂಡು 642 ರುಗೇರಿತು. ಬಿಎಸ್ಇಯಲ್ಲಿ ಸರಾಸರಿ 633.5 ರು ನಂತೆ ವಹಿವಾಟು ನಡೆಸಿದೆ.

ಕೊರೊನಾದಿಂದ ಕಕ್ಕಾಬಿಕ್ಕಿಯಾದ ಅಮೆರಿಕಾದಲ್ಲಿ ವಲಸಿಗರಿಗೆ ಉದ್ಯೋಗವಿಲ್ಲ!ಕೊರೊನಾದಿಂದ ಕಕ್ಕಾಬಿಕ್ಕಿಯಾದ ಅಮೆರಿಕಾದಲ್ಲಿ ವಲಸಿಗರಿಗೆ ಉದ್ಯೋಗವಿಲ್ಲ!

ಮಾರ್ಚ್ 2020ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ನಿವ್ವಳ ಲಾಭ ಶೇ 6.3 ರಷ್ಟು ಏರಿಕೆ ಕಂಡು, 4,335 ಕೋಟಿ ರು ಗಳಿಕೆಯಾಗಿದೆ. ಪ್ರಸಕ್ತ ಲಾಕ್ಡೌನ್ ಪರಿಸ್ಥಿತಿಯಲ್ಲಿ ಇನ್ಫೋಸಿಸ್ ಸಂಸ್ಥೆಯ ಶೇ 93 ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಂ ಅನುಸರಿಸುತ್ತಿದ್ದಾರೆ ಎಂದು ಇನ್ಫೋಸಿಸ್ ಸಿಇಒ ಹಾಗೂ ಎಂಡಿ ಸಲೀಲ್ ಪರೇಖ್ ಹೇಳಿದ್ದಾರೆ.

English summary
Tata Consultancy Services (TCS), Infosys, Tech Mahindra, Wipro, HCL Technologies, Hexaware Technologies, NIIT Technologies and Mindtree were down 1 per cent to 5 per cent on the NSE in intra-day trade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X