ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚೆಚ್ಚು ಹಸಿರು ಕಟ್ಟಡ ನಿರ್ಮಾಣ, ಇನ್ಫೋಸಿಸ್ಸಿನ ಹೊಸ ಗುರಿ

|
Google Oneindia Kannada News

ಇನ್ಫೋಸಿಸ್ ಇತ್ತೀಚೆಗಷ್ಟೇ ತನ್ನ 12ನೇ ವಾರ್ಷಿಕ ಸುಸ್ಥಿರತೆಯ ವರದಿಯನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಮಾನದಂಡಗಳಲ್ಲಿ ಕಂಪನಿಯ ಜವಾಬ್ದಾರಿಯುತ ಉದ್ದಿಮೆಯ ಅಭ್ಯಾಸಗಳ ಕುರಿತು ವಿಸ್ತೃತವಾದ ವಿವರಣೆಯನ್ನು ನೀಡಲಾಗಿದೆ.

ಈ ವರದಿಯು ಜಿಆರ್‍ಐ(ಗ್ಲೋಬಲ್ ರಿಪೋರ್ಟಿಂಗ್ ಇನೀಷಿಯೇಟಿವ್) ಗುಣಮಟ್ಟವನ್ನು ಆಧರಿಸಿ ತಯಾರಿಸಲಾಗಿದ್ದು, ಸುಸ್ಥಿರ ನಿರ್ವಹಣೆ ವ್ಯವಸ್ಥೆ ಮತ್ತು ಅಭ್ಯಾಸಗಳ ಮೂಲಕವಾಗಿ ತನ್ನ ಜಾಗತಿಕ ಪಾಲುದಾರರ ಹಿತಾಸಕ್ತಿ ಮತ್ತು ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಂಪನಿಯ ಪರಿಶ್ರಮವನ್ನೂ ಸ್ಪಷ್ಟಪಡಿಸಿದೆ.

ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಪಟ್ಟಿಯಲ್ಲಿ ಕರ್ನಾಟಕ ನಂ.2ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ಪಟ್ಟಿಯಲ್ಲಿ ಕರ್ನಾಟಕ ನಂ.2

ಸುಸ್ಥಿರತೆಯ ವರದಿಯು ಒಂದು ಜೀವಂತಿಕೆಯ ಸಂಸ್ಥೆಯತ್ತ ಹೇಗೆ ಪಯಣಿಸಬಹುದು ಎಂಬುದರ ಬಗ್ಗೆ ಅಂತರ್ ದೃಷ್ಟಿಯನ್ನು ಒದಗಿಸುತ್ತದೆ. ಇಂಧನ ದಕ್ಷತೆ ಸುಧಾರಣೆ, ನವೀಕರಿಸಬಹುದಾದ ಶಕ್ತಿಯ ಬಳಕೆ ಹೆಚ್ಚಳ, ಜಲ ಸುಸ್ಥಿರತೆಯ ವೃದ್ಧಿಸುವಿಕೆ, ತ್ಯಾಜ್ಯದಿಂದ ಭೂಮಿ ಭರ್ತಿಯಾಗುವುದನ್ನು ಕಡಿಮೆ ಮಾಡುವುದು, ಸುಸ್ಥಿರ ಮೂಲಸೌಕರ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಇನ್ನೋವೇಷನ್ ಆಧರಿತ ಜೀವವೈವಿಧ್ಯಕ್ಕೆ ಇನ್ನಷ್ಟು ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಇನ್ಫೋಸಿಸ್ ಮಾಡುತ್ತಿರುವ ಪ್ರಯತ್ನಗಳನ್ನು ಇದು ತೋರಿಸಿದೆ.

ಇಂಧನ ದಕ್ಷತೆ ಬಗ್ಗೆ

ಇಂಧನ ದಕ್ಷತೆ ಬಗ್ಗೆ

* 2008(ಮೂಲ ವರ್ಷ)ರ ಹಣಕಾಸು ವರ್ಷದಿಂದ 2019ರ ಹಣಕಾಸು ವರ್ಷದವರೆಗೆ ತಲಾ ವಿದ್ಯುತ್ ಬಳಕೆಯ ಪ್ರಮಾಣ 55.05% ರಷ್ಟು ಇಳಿಕೆಯಾಗಿದೆ.

* ಇನ್ಫೋಸಿಸ್ ಸಂಸ್ಥೆಯು ತನ್ನ ಕ್ಯಾಂಪಸ್ ನಾದ್ಯಂತ 2019ರ ಹಣಕಾಸು ವರ್ಷದಲ್ಲಿ ಹೆಚ್ಚುವರಿ 1 ಮೆಗಾ ವ್ಯಾಟ್(MW)ನಷ್ಟು ಕನೆಕ್ಟೆಡ್ ಲೋಡ್‍ಗಳನ್ನು ಕಡಿಮೆ ಮಾಡಿಕೊಂಡಿದೆ. ಇದರ ಪರಿಣಾಮವಾಗಿ ರೆಟ್ರೋಫಿಟ್ಸ್ ಮೂಲಕ ಕನೆಕ್ಟೆಡ್ ಲೋಡ್ ಇಳಿಕೆಯ ಒಟ್ಟಾರೆ ಪ್ರಮಾಣ 33 ಮೆ.ವ್ಯಾ. ಆಗಿದೆ.

ಹಸಿರು ಶಕ್ತಿ

ಹಸಿರು ಶಕ್ತಿ

* 2019ರ ವಿತ್ತ ವರ್ಷದಲ್ಲಿ, ಕಂಪನಿಯ ವಿದ್ಯುತ್ ಅಗತ್ಯತೆಯ ಪೈಕಿ 121.18 ದಶಲಕ್ಷ MWh ಯುನಿಟ್ (ಕಿಲೋವ್ಯಾಟ್ ಅವರ್)ಗಳನ್ನು ನವೀಕರಿಸಬಹುದಾದ ಮೂಲಗಳಿಂದ ತುಂಬಲಾಗಿದೆ. ಅಂದರೆ, ಈ ಪ್ರಮಾಣವು ಭಾರತದಲ್ಲಿ ಇನ್ಫೋಸಿಸ್ ನ ಒಟ್ಟಾರೆ ವಿದ್ಯುಚ್ಛಕ್ತಿ ಅಗತ್ಯತೆಯ ಸುಮಾರು 46.17% ರಷ್ಟಾಗುತ್ತದೆ.

* 39.78 ದಶಲಕ್ಷ ಯುನಿಟ್‍ಗಳನ್ನು ಇನ್ಫೋಸಿಸ್‍ನ ಕ್ಯಾಪ್ಟಿ ಸೋಲಾರ್ ಫೋಟೋವೋಲ್ಟಾಯಿಕ್ (ಪಿವಿ) ಸ್ಥಾವರಗಳಿಂದ (ಮೇಲ್ಛಾವಣಿಯ ಮತ್ತು ನೆಲದಡಿಯ ಅಳವಡಿಕೆಗಳು) ಉತ್ಪತ್ತಿ ಮಾಡಲಾಗಿದೆ. ಉಳಿದ 81.4 ದಶಲಕ್ಷ ಕಿಲೋವ್ಯಾಟ್ ಅವರ್ ಯುನಿಟ್‍ಗಳನ್ನು ಬಾಹ್ಯ ಹಸಿರು ಶಕ್ತಿಯ ಮೂಲಗಳಿಂದ ಪಡೆಯಲಾಗಿದೆ.

ಇಂಗಾಲ ಹೊರಸೂಸುವಿಕೆ

ಇಂಗಾಲ ಹೊರಸೂಸುವಿಕೆ

* 2016ರಿಂದ ವಿಶ್ವಸಂಸ್ಥೆಯ ಎಸ್ ಡಿಜಿ(ಸುಸ್ಥಿರ ಅಭಿವೃದ್ಧಿ ಧ್ಯೇಯಗಳು) ಅನ್ವಯ, ಸುಸ್ಥಿರ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿ ಮಾಡುತ್ತಿರುವ ಸಮುದಾಯ-ಆಧರಿತ ಆಫ್‍ಸೆಟ್ ಪ್ರಾಜೆಕ್ಟ್‍ನ ಭಾಗವಾಗಿ, ಇನ್ಫೋಸಿಸ್ ಸಂಸ್ಥೆಯು ಮನೆಗಳಲ್ಲೇ ಜೈವಿಕ ಅನಿಲ ಘಟಕಗಳನ್ನು ನಿರ್ಮಾಣ ಮಾಡಿದ್ದು, ಗ್ರಾಮೀಣ ಭಾರತದಲ್ಲಿ ಸಾಂಪ್ರದಾಯಿಕ ಅಡುಗೆ ವಿಧಾನ ಬದಲಿಸುವ ನಿಟ್ಟಿನಲ್ಲಿ ದಕ್ಷತೆಯುಳ್ಳ ಅಡುಗೆಯ ಸ್ಟವ್ ಗಳನ್ನು ಹಂಚಿಕೆ ಮಾಡಿದೆ.

* ಈ ಯೋಜನೆಗಳಿಂದಾಗಿ ಮಾರ್ಚ್ 31, 2019ರವರೆಗೆ, ಸುಮಾರು 100,000 ಕುಟುಂಬಗಳು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಪ್ರಯೋಜನ ಪಡೆದುಕೊಂಡಿವೆ. ಕೇವಲ ಸುಮಾರು 300,000 tCO2e (ಟನ್ನುಗಟ್ಟಲೆ ಇಂಗಾಲದ ಡೈ ಆಕ್ಸೈಡ್‍ಗೆ ಸಮನಾದದ್ದು) ಆಫ್ ಸೆಟ್‍ಗಳು ಉತ್ಪತ್ತಿಯಾಗಿವೆ.

ಜಲ ಸಂರಕ್ಷಣೆ

ಜಲ ಸಂರಕ್ಷಣೆ

* ನೀರಿನ ಮಿತ ಬಳಕೆ, ಶೇಕಡಾ 100ರಷ್ಟು ತ್ಯಾಜ್ಯ ನೀರಿನ ಮರುಬಳಕೆ, ಸಂಸ್ಕರಿತ ತ್ಯಾಜ್ಯನೀರನ್ನು ಮರುಬಳಕೆ ಮಾಡುವುದು ಮತ್ತು ಮಳೆ ನೀರನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟುಕೊಳ್ಳುವುದು ಮುಂತಾದವುಗಳು ಇನ್ಫೋಸಿಸ್‍ನ ಜಲ ನಿರ್ವಹಣಾ ಕ್ರಮಗಳಾಗಿವೆ.

* 2008 (ಮೂಲ ವರ್ಷ)ರ ಹಣಕಾಸು ವರ್ಷದಿಂದ 2019ರ ಹಣಕಾಸು ವರ್ಷದವರೆಗೆ ತಲಾ ನೀರು ಬಳಕೆಯ ಪ್ರಮಾಣ 60% ತಗ್ಗಿದೆ.

* ಕಂಪನಿಯು ತನ್ನ ಎಲ್ಲ ಕ್ಯಾಂಪಸ್‍ಗಳಲ್ಲಿ ಒಟ್ಟಾರೆ 350 ಇಂಜೆಕ್ಷನ್ ಬಾವಿಗಳನ್ನು ಹೊಂದಿದ್ದು, ಇಲ್ಲಿ ದಿನಕ್ಕೆ 17.5 ದಶಲಕ್ಷ ಲೀಟರ್‍ಗೂ ಹೆಚ್ಚು ನೀರು ರೀಚಾರ್ಜ್ ಆಗುತ್ತದೆ.

ತ್ಯಾಜ್ಯ ನಿರ್ವಹಣಾ ಸಾಮರ್ಥ್ಯ

ತ್ಯಾಜ್ಯ ನಿರ್ವಹಣಾ ಸಾಮರ್ಥ್ಯ

ಇನ್ಫೋಸಿಸ್ ಕಂಪನಿಯು ವರ್ಷಕ್ಕೆ 3.7 ದಶಲಕ್ಷ ಕೆ.ಜಿ. ತ್ಯಾಜ್ಯ ನಿರ್ವಹಣಾ ಸಾಮರ್ಥ್ಯವಿರುವ ಜೈವಿಕ ಅನಿಲ ಘಟಕಗಳನ್ನು ಹಾಗೂ ವರ್ಷಕ್ಕೆ 2.6 ದಶಲಕ್ಷ ಕೆ.ಜಿ. ನಿರ್ವಹಣಾ ಸಾಮರ್ಥ್ಯವುಳ್ಳ ಸಾವಯವ ತ್ಯಾಜ್ಯ ಪರಿವರ್ತಕಗಳನ್ನು ಅಳವಡಿಸಿದೆ.

* ಬೆಂಗಳೂರು, ಮೈಸೂರು, ತಿರುವನಂತಪುರಂ, ಹೈದರಾಬಾದ್ ಎಸ್‍ಇಜೆಡ್ ಮತ್ತು ಪುಣೆ ಕ್ಯಾಂಪಸ್‍ಗಳಲ್ಲಿ ವಾರ್ಷಿಕವಾಗಿ 3.5 ದಶಲಕ್ಷ ಕೆ.ಜಿ. ಕೆಸರನ್ನು ಸಂಸ್ಕರಿಸುವಂಥ ಸಾಮರ್ಥ್ಯವುಳ್ಳ ಸೋಲಾರ್ ಸ್ಲಡ್ಜ್ ಡ್ರೈಯರ್‍ಗಳನ್ನು ಕಂಪನಿ ಅಳವಡಿಸಿದೆ.

* 2020ರೊಳಗಾಗಿ ಒಂದೇ ಬಾರಿಗೆ ಬಳಕೆಯಾಗುವ ಹಾಗೂ ಮರುಬಳಕೆಯಾಗದಂಥ ಪ್ಲಾಸ್ಟಿಕ್ ಗಳಿಂದ ತನ್ನ ಕ್ಯಾಂಪಸ್ ಮುಕ್ತವಾಗಬೇಕು ಎಂಬ ಗುರಿಯನ್ನು ಇನ್ಫೋಸಿಸ್ ಹಾಕಿಕೊಂಡಿದೆ. ಅಲ್ಲದೆ, 2020ರ ವೇಳೆಗೆ ತಲಾ ಪ್ಲಾಸ್ಟಿಕ್ ಉತ್ಪತ್ತಿಯು 50% ದಷ್ಟು ಇಳಿಕೆ ಮಾಡಲು ನಿರ್ಧರಿಸಿದೆ.

ಎಲ್‍ಇಇಡಿ ಪ್ಲಾಟಿನಂ ಪ್ರಮಾಣಪತ್ರ

ಎಲ್‍ಇಇಡಿ ಪ್ಲಾಟಿನಂ ಪ್ರಮಾಣಪತ್ರ

2019ರ ವಿತ್ತ ವರ್ಷದಲ್ಲಿ, ಇನ್ಫೋಸಿಸ್ ಶಾಂಘೈ ಕ್ಯಾಂಪಸ್‍ನಲ್ಲಿರುವ ಹೊಸ ಎಸ್‍ಡಿಬಿ1 ಕಟ್ಟಡಕ್ಕೆ ಎಲ್‍ಇಇಡಿ ಪ್ಲಾಟಿಎಂ ಕಟ್ಟಡ ಎಂದು ಪ್ರಮಾಣಪತ್ರ ನೀಡಲಾಗಿದೆ. ಯುಎಸ್‍ಜಿಬಿಸಿ ಎಲ್‍ಇಇಡಿ ಹೊಸ ನಿರ್ಮಾಣ' ವಿಭಾಗದಲ್ಲಿ ಈ ಕೀರ್ತಿ ಸಂದಿದೆ.

· ಇನ್ಫೋಸಿಸ್ ಮೈಸೂರು ಕ್ಯಾಂಪಸ್, ಮಹೀಂದ್ರ ಸಿಟಿ ಚೆನ್ನೈ ಕ್ಯಾಂಪಸ್ ಮತ್ತು ಚಂಡೀಗಡ ಕ್ಯಾಂಪಸ್‍ಗಳಿಗೆ ಯುಎಸ್‍ಜಿಬಿಸಿ ಎಲ್‍ಇಇಡಿ ಪ್ರಸ್ತುತ ಇರುವ ಕಟ್ಟಡ' ವಿಭಾಗದಲ್ಲಿ ಎಲ್‍ಇಇಡಿ ಪ್ಲಾಟಿನಂ ಪ್ರಮಾಣಪತ್ರ ದೊರೆತಿದೆ.

ಅತ್ಯಧಿಕ ಪ್ರಮಾಣದ ಹಸಿರು ಕಟ್ಟಡ

ಅತ್ಯಧಿಕ ಪ್ರಮಾಣದ ಹಸಿರು ಕಟ್ಟಡ

ಅತ್ಯಧಿಕ ಪ್ರಮಾಣದ ಹಸಿರು ಕಟ್ಟಡವೆಂಬ ರೇಟಿಂಗ್ ಸಿಕ್ಕಿರುವ 30 ಪ್ರಾಜೆಕ್ಟ್ ಗಳು ಇನ್ಫೋಸಿಸ್‍ನಲ್ಲಿವೆ. ಇವು 19 ದಶಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ. ಹೊಸ ನಿರ್ಮಾಣಗಳ ಪೈಕಿ ಸುಮಾರು 7.5 ದಶಲಕ್ಷ ಚದರ ಅಡಿಯಷ್ಟು ಹೊಸ ನಿರ್ಮಾಣಗಳು ಮತ್ತು ನಿರ್ಮಾಣವಾಗಿರುವ ಕಟ್ಟಡಗಳು ಪ್ರಸ್ತುತ ಹಸಿರು ಕಟ್ಟಡ ಸರ್ಟಿಫಿಕೇಷನ್‍ಗೆ ಪರಿಗಣಿಸಲ್ಪಡುತ್ತಿವೆ.

English summary
Infosys sustainability report is out, more Green Buildings expected. This Sustainability Report gives you a glimpse into the path to a sustainable enterprise that has the larger interests of the community and planet at heart. A path that Infosys navigates for itself and its clients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X