ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ನಿಂದ 12ನೇ ಅಧಿಕಾರಿ ಹೊರಕ್ಕೆ

By Mahesh
|
Google Oneindia Kannada News

ಬೆಂಗಳೂರು, ಜೂ.6: ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯಿಂದ ಮತ್ತೊಬ್ಬ ಹಿರಿಯ ಅಧಿಕಾರಿ ಹೊರಬಿದ್ದಿದ್ದಾರೆ. ಜಾಗತಿಕ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಪ್ರಸಾದ್ ತ್ರಿಕೂಟಂ ಅವರು ಸಂಸ್ಥೆ ತೊರೆದಿದ್ದಾರೆ.

ಸ್ಥಾಪಕ ಎನ್ ಆರ್ ನಾರಾಯಣ ಮುರ್ತಿ ಅವರು ಹಿಂತಿರುಗಿದ ಮೇಲೆ ಹೊರಬಿದ್ದಿರುವ 12ನೇ ಅಧಿಕಾರಿ ಎನಿಸಿದ್ದಾರೆ.ಇತ್ತೀಚೆಗೆ ಸಿಇಒ ಅಭ್ಯರ್ಥಿ ಎಂದೇ ಕರೆಯಲ್ಪಡುತ್ತಿದ್ದ ಬಿ.ಜಿ ಶ್ರೀನಿವಾಸ್ ಅವರು ಇನ್ಫೋಸಿಸ್ ತೊರೆದು ಹಾಂಕಾಂಗ್ ಮೂಲದ ಕಂಪನಿ ಸೇರಿಕೊಂಡಿದ್ದರು. ಈಗ ಇನ್ಫೋಸಿಸ್ ಗೆ ಹೊರಗಿನ ವ್ಯಕ್ತಿಯೊಬ್ಬರನ್ನು ಸಿಇಒ ಸ್ಥಾನಕ್ಕೆ ತಂದು ಕೂರಿಸುವ ಹುಡುಕಾಟ ನಡೆದಿದೆ.

ಇನ್ಫೋಸಿಸ್ ನಲ್ಲಿ ಮೂರು ದಿನಗಳ ಮಹತ್ವದ ಸಭೆಗೂ ಮುನ್ನವೆ ಹಿರಿಯ ಕಾರ್ಯಕಾರಿ ಅಧಿಕಾರಿ ಹೊರಬಿದ್ದಿರುವುದು ಭಾರಿ ಹಿನ್ನಡೆ ಎನ್ನಬಹುದು. ಲಾಸ್ ಏಂಜಲೀಸ್ ನಲ್ಲಿ ಕನೆಕ್ಟ್ ಹೆಸರಿನಲ್ಲಿ ಇನ್ಫೋಸಿಸ್ ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು, ಗ್ರಾಹಕರು, ಪಾಲುದಾರರು ಸಭೆ ಸೇರಲಿದ್ದಾರೆ.

Infosys strategic sales head Prasad Thrikutam quits

ಸಾಮಾನ್ಯವಾಗಿ ಇಂಥ ಸಭೆಗಳು ಆರ್ಥಿಕ ವರ್ಷದ ಆರಂಭದಲ್ಲಿ ನಡೆಯುತ್ತದೆ. ಆದರೆ, ಮೋದಿ ಸರ್ಕಾರದ ಬಜೆಟ್ ಹಿನ್ನೆಲೆಯಲ್ಲಿ ಆಗಸ್ಟ್ ನಲ್ಲಿ ನಡೆಯಲಿದೆ. ಪ್ರಸಾದ್ ಅವರ ಕಾರ್ಯವನ್ನು ಯುಬಿ ಪ್ರವೀಣ್ ರಾವ್ ಅವರು ಮುಂದುವರೆಸಿಕೊಂಡು ಹೋಗಲಿದ್ದಾರೆ.

ಪ್ರಸಾದ್ ಅವರು ಜಾಗತಿಕ ಸೇಲ್ಸ್ ವಿಭಾಗವಲ್ಲದೆ ಇನ್ಫೋಸಿಸ್ ಕಾರ್ಯಕಾರಿ ಕೌನ್ಸಿಲ್, ಬಿಪಿಒ ವಿಭಾಗದ ನಿರ್ದೇಶಕರಾಗಿ ಕೂಡಾ ಸುಮಾರು ಎರಡು ದಶಕಗಳ ಕಾಲ ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸಾದ್ ಅವರು ಡೆಲ್ ಸಂಸ್ಥೆ ಸೇರಲಿದ್ದಾರೆ. [ಗುಜರಾತಿನ ಸಿಕ್ಕಾ ನೂತನ ಸಿಇಒ?]

ಇನ್ಫೋಸಿಸ್ ನ ಹಿರಿಯ ಅಧಿಕಾರಿ ಪ್ರಸಾದ್ ಸಂಸ್ಥೆ ತೊರೆಯುತ್ತಿದ್ದಂತೆ ಷೇರುಪೇಟೆಯಲ್ಲಿ ಶುಕ್ರವಾರ ಇನ್ಫೋಸಿಸ್ ಷೇರುಗಳು ಇಳಿಮುಖವಾಗತೊಡಗಿತ್ತು. ಶೇ 2.7 ರಷ್ಟು ಅರಂಭಿಕ ವಹಿವಾಟಿನಲ್ಲೇ ಕಳೆದುಕೊಂಡಿತ್ತು.

ದಿನದ ಅಂತ್ಯಕ್ಕೆ ಇನ್ಫೋಸಿಸ್ ಷೇರುಗಳು ಬಿಎಸ್ ಇನಲ್ಲಿ 2999.80 ರು ನಂತೆ ಶೇ 1.26ರಷ್ಟು ಕುಸಿತ ಕಂಡಿತ್ತು. ಎನ್ ಎಸ್ ಇನಲ್ಲಿ 3003.05 ರು.ನಂತೆ ಶೇ 1.25ರಷ್ಟು ಕುಸಿತ ಕಂಡಿದೆ.

English summary
Prasad Thrikutam, the global head of strategic sales, marketing and alliances at Infosys, has quit the company, two months before its key annual sales and marketing conference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X