ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಡಿಜಿಟಲ್‌, ಜೀವನ ಕೌಶಲ್ಯ ಕಲ್ಪಿಸುವ ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 02: ಮುಂದಿನ ಪೀಳಿಗೆಯ ಡಿಜಿಟಲ್‌ ಸೇವೆಗಳು ಮತ್ತು ಸಮಾಲೋಚನೆಯಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಇನ್ಫೋಸಿಸ್‌, 2025ರ ವೇಳೆಗೆ 10 ಮಿಲಿಯನ್‌ಗೂ ಹೆಚ್ಚು ಜನರಿಗೆ ಡಿಜಿಟಲ್‌ ಮರುಕೌಶಲ್ಯ ಉಪಕ್ರಮಗಳನ್ನು ವಿಸ್ತರಿಸಲು ತನ್ನ ESG goal ನಲ್ಲಿ ಪ್ರಗತಿಗೆ ವೇಗ ನೀಡಲು ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ ಅನ್ನು ಬಿಡುಗಡೆಗೊಳಿಸಿದೆ.

ಇನ್ಫೋಸಿಸ್‌ ಸಿಎಸ್‌ಅರ್‌ನ ಭಾಗವಾಗಿ, ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ 6ನೇ ತರಗತಿಯ ವಿದ್ಯಾರ್ಥಿಗಳಿಂದ ಜೀವನಾದ್ಯಂತದ ಕಲಿಕೆದಾರರಿಗೆ ನಿಕಟ ಶಿಕ್ಷಕರು-ಕಲಿಕೆದಾರರ ಸಹಭಾಗಿತ್ವದೊಂದಿಗೆ ಯಾವುದೇ ಸಾಧನದ ಮೂಲಕ ಕಾರ್ಪೊರೇಟ್‌-ದರ್ಜೆಯ ಕಲಿಕೆಯ ಅನುಭವ ನೀಡುವ ಪಠ್ಯಕ್ರಮ-ಸಮೃದ್ಧ ವರ್ಚ್ಯುವಲ್‌ ವೇದಿಕೆಯನ್ನು ಒದಗಿಸುತ್ತದೆ. ಇದು, ಔಪಚಾರಿಕಾ ಶಿಕ್ಷಣದ ಜೊತೆಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ವೃತ್ತಿಪರರು ಮತ್ತು ವಯಸ್ಕರವರೆಗೆ ಪಾಲ್ಗೊಳ್ಳುವ ಎಲ್ಲಾ ಕಲಿಕಾದಾರರಿಗೆ ಡಿಜಿಟಲ್‌ ಮರುಕೌಶಲ್ಯವನ್ನು ಕಲಿಯಲು ನೆರವಾಗುತ್ತದೆ.

ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್‌ನ ಸಮಗ್ರ ಕೋರ್ಸ್‌ಗಳನ್ನು ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್ ಪ್ರಾಯೋತಕತ್ವ ಮತ್ತು ವಿಶ್ವದ ಪ್ರಮುಖ ಡಿಜಿಟಲ್ ಶಿಕ್ಷಣ ತಜ್ಞರಾದ ಕೋರ್ಸೆರಾ ಮತ್ತು ಲರ್ನ್‌ಶಿಪ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಕೋರ್ಸ್‌ ಮೂಲಕ ನೀವು ಉದ್ಯೋಗಿ ಮತ್ತು ವಿಶಾಲ-ಆಧಾರಿತ ವಿದ್ಯಾರ್ಥಿ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಇನ್ಫೋಸಿಸ್‌ನ 4 ದಶಕಗಳ ಶ್ರೀಮಂತ ಅನುಭವದ ಲಾಭವನ್ನು ಪಡೆದುಕೊಳ್ಳಬಹುದು. ಇದು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಸಾರ ತಯಾರಿಸಲಾಗಿದೆ.

Infosys Springboard to bring Digital Life Skills for Students in India

ಇದು ನಿಮಗೆ ಸುಲಭದ ಕೌಶಲ್ಯಗಳ ಜೊತೆಗೆ ವೃತ್ತಿಪರ ಕೌಶಲ್ಯಗಳನ್ನು ಬೆಳೆಯಲು ವಿಶೇಷವಾಗಿ ಸೂಕ್ತವಾಗಿರುತ್ತದೆ. ಮಾಸ್ಟರ್‌ಕ್ಲಾಸ್‌ಗಳು, ಪ್ರೋಗ್ರಾಮಿಂಗ್ ಸವಾಲುಗಳು, ಅಭ್ಯಾಸದ ಪ್ರದೇಶಗಳು ಮತ್ತು ಪ್ರಯೋಗಕ್ಕಾಗಿ ಆಟದ ಮೈದಾನಗಳು, ಎಲ್ಲಾ ಕಲಿಕಾದಾರರಿಗೆ ತರಬೇತಿಯನ್ನು ತಲುಪಿಸುವುದನ್ನು ಖಾತರಿಪಡಿಸಿಕೊಳ್ಳುತ್ತದೆ. ವರ್ಚುವಲಿ ನಡೆಯುವ ಪರೀಕ್ಷೆಯ ಮೌಲ್ಯಮಾಪನದಲ್ಲಿ ಹೊಸ -ಪೀಳಿಗೆಯ ಸಿದ್ಧತೆಯ ಮೌಲ್ಯಮಾಪನ ರೂಪುರೇಷೆಯನ್ನು ಅನುಸರಿಸಲಾಗುವುದು ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಲಿಕೆದಾರರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಸುಮಾರು 400,000 ಕಲಿಕೆದಾರರು, 300+ ಶಿಕ್ಷಣ ಸಂಸ್ಥೆಗಳು, ಎನ್‌ಜಿಓಗಳು ಮತ್ತು ಬೆಂಬಲ ಗುಂಪುಗಳು ಈಗಾಗಲೇ ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್‌ನಲ್ಲಿವೆ.

ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್‌ನಲ್ಲಿನ ಅವಕಾಶಗಳು:

· ವಿದ್ಯಾರ್ಥಿಗಳಿಗೆ 'ಮಾಡುವ ಮೂಲಕ ಕಲಿಯಿರಿ' ಉಪಕ್ರಮ ಮತ್ತು ಹೊಸದಾಗಿ ಉದಯಿಸುವ ಉದ್ಯೋಗಗಳು ಮತ್ತು ವೃತ್ತಿ ಅವಕಾಶಗಳ ಸಿದ್ಧತೆಯಲ್ಲಿ ಸಮಗ್ರ ಅಭಿವೃದ್ಧಿ

· ಕೇಂದ್ರೀಕೃತ ಕಲಿಕಾ ಪೋರ್ಟಲ್ ಹೊಂದಿರುವ ಮಹಿಳೆಯರು, ವಿಶೇಷ ಸಂಪನ್ಮೂಲಗಳು ಮತ್ತು ಸಮಗ್ರ ಅಭಿವೃದ್ಧಿಗೆ ತಜ್ಞ ಮಾರ್ಗದರ್ಶಕರು

· ಅವರನ್ನು ಭವಿಷ್ಯದ ಹೆಚ್ಚಿನ ಸಂಬಳದ ಉದ್ಯೋಗಗಳಿಗಾಗಿ ತಯಾರು ಮಾಡಲು ಸುಧಾರಿತ ಡಿಜಿಟಲ್ ಕೌಶಲ್ಯ ಹೊಂದಿರುವ ಶಿಕ್ಷಕರು

· ವೇದಿಕೆಯ ಉಪಕ್ರಮಗಳ ವೈಶಿಷ್ಟ್ಯಗಳನ್ನು ಬಳಸಿಕೊಂಡು ಕಲಿಯುವವರ ಕೌಶಲ್ಯದ ಪ್ರಯಾಣದಲ್ಲಿ ಉತ್ತಮವಾಗಿ ಸಹಕಾರ ನೀಡುವ ಶಿಕ್ಷಕರು

· ಕಲಿಕೆಯ ಪ್ರಯೋಜನಗಳನ್ನು ಹೆಚ್ಚು ವಿಶಾಲವಾಗಿ ವಿಸ್ತರಿಸಲು, ವಿಶೇಷವಾಗಿ ಸಮಾಜದ ಹಿಂದುಳಿದ ವರ್ಗಗಳಿಗೆ ತಲುಪಿಸಲು ಬದ್ಧವಾಗಿರುವ ಎನ್‌ಜಿಓಗಳು

ಈ ಉಪಕ್ರಮದ ಬಗ್ಗೆ ಮಾತನಾಡಿದ ಇನ್ಫೋಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ ನೀಲಂಜನ್ ರಾಯ್ "ಸಾಂಕ್ರಾಮಿಕವು ಎಲ್ಲಾ ಹಂತದ ಜನರಿಗೆ ಡಿಜಿಟಲ್ ಕಲಿಕೆ ಲಭ್ಯತೆಯ ಅಗತ್ಯವನ್ನುಹೆಚ್ಚಿಸಿದೆ. ದಶಕಗಳಿಂದಲೂ, ಇನ್ಫೋಸಿಸ್ ಈಗಾಗಲೇ ನಮ್ಮ ಸ್ವಂತ ಕಾರ್ಯಪಡೆ, ನಮ್ಮ ಗ್ರಾಹಕರು, ಸಮುದಾಯಗಳಲ್ಲಿ ಡಿಜಿಟಲ್ ಸಾಮರ್ಥ್ಯಗಳನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಒಂದು ಮಹತ್ವದ ಹೂಡಿಕೆಯಾಗಿದ್ದು, ನಾವು ಭವಿಷ್ಯದೆಡೆಗೆ ಸಾಗುವಾಗ, ಡಿಜಿಟಲ್‌ ವಿಭಜನೆಗೆ ಸೇತುವೆ ನಿರ್ಮಿಸಲು ಎನ್‌ಸಿಜಿ ಬದ್ಧವಾಗಿದೆ"ಎಂದು ಹೇಳಿದರು.

ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌, ಈಗಾಗಲೇ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳಾದ ಉದ್ಯಮ-ಶೈಕ್ಷಣ ಸಂಬಂಧ ವರ್ಧನೆಗೆ ಒತ್ತು ನೀಡುವ ಇನ್ಫೋಸಿಸ್‌ ಕ್ಯಾಂಪಸ್‌ ಕನೆಕ್ಟ್‌, ಪ್ರೌಢಶಾಲಾ ವಿದ್ಯಾರ್ಥಿಗಳ ಮಾಹಿತಿ ತಂತ್ರಜ್ಞಾನದಲ್ಲಿ ವಾರ್ಷಿಕ ತರಬೇತಿ ಕಾರ್ಯಕ್ರಮ ಇನ್ಫೋಸಿಸ್ ಕ್ಯಾಚ್‌ ದೆಮ್‌ ಯಂಗ್‌ ಮತ್ತು ಆಕಾಂಕ್ಷಿತ ವೃತ್ತಿಪರರಿಗೆ ಆಸ್ಪೈರ್‌ ಮತ್ತು ಅಚೀವ್‌ ಕಾರ್ಯಾಗಾರಗಳೊಂದಿಗೆ ಕೈಜೋಡಿಸಿ, ವೇಗ ನೀಡಲಿದೆ. ಇನ್ಫೋಸಿಸ್‌ ಸ್ಪ್ರಿಂಗ್‌ಬೋರ್ಡ್‌ ಈಗ ಪ್ಲೇಸ್ಟೋರ್‌ ಮತ್ತು ಆ್ಯಪ್‌ ಸ್ಟೋರ್‌ಗಳಲ್ಲಿ ಕೂಡ ಲಭ್ಯವಿದೆ.

English summary
Infosys launched Infosys Springboard to accelerate progress on its ESG goal to expand digital reskilling initiatives to 10 million plus people by 2025.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X