ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದನ್ ನಿಲೇಕಣಿ ಮರುನೇಮಕ: ಇನ್ಫೋಸಿಸ್ ಷೇರು ಮೌಲ್ಯ ಹೆಚ್ಚಳ

ಇನ್ಫೋಸಿಸ್ ಕಂಪನಿ ಮುಖ್ಯಸ್ಥರಾಗಿ ನಂದನ್ ನಿಲೇಕಣಿ ನೇಮಕ ಹಿನ್ನೆಲೆಯಲ್ಲಿ ಇನ್ಫೋಸಿಸ್ ಷೇರು ಮೌಲ್ಯದಲ್ಲಿ ಹೆಚ್ಚಳ. ಗುರುವಾರ ಸಂಜೆಗೆ ಅಂತ್ಯಗೊಂಡ ಷೇರು ವ್ಯವಹಾರದಂತೆ, ಇನ್ಫೋಸಿಸ್ ಷೇರುಗಳ ಮೌಲ್ಯ ಶೇ. 2.09ರಷ್ಟು ಏರಿಕೆ.

|
Google Oneindia Kannada News

ಮುಂಬೈ, ಆಗಸ್ಟ್ 25: ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು ಪುನಃ ಆ ಸಂಸ್ಥೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದು ಅಧಿಕೃತವಾಗಿ ಘೋಷಣೆಗೊಳ್ಳುತ್ತಲೇ, ಇನ್ಫೋಸಿಸ್ ಷೇರುಗಳ ಮೌಲ್ಯ ಏರಿಕೆ ಕಂಡಿದೆ.

ಈ ಹಿಂದೆ, ಕಂಪನಿಯ ಕಾರ್ಯ ನಿರ್ವಾಹಕರಾಗಿದ್ದ ವಿಕಾಸ್ ಸಿಕ್ಕಾ ಹಾಗೂ ಇನ್ಫೋಸಿಸ್ ನ ಮತ್ತೊಬ್ಬ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ನಡುವಿನ ವಿರಸ ಹಾಗೂ ಅದರ ಕಾರಣದಿಂದಾಗಿ, ಸಿಕ್ಕಾ ಅವರಿಂದ ಕಂಪನಿಯ ಸಿಇಒ ಹುದ್ದೆಗೆ ರಾಜಿನಾಮೆ ಕಾರಣಗಳಿಂದಾಗಿ ಕಂಪನಿಯ ಷೇರುಗಳ ಮೌಲ್ಯ ಕುಸಿತ ಕಂಡಿತ್ತು.

ಇನ್ಫೋಸಿಸ್ ಮುಖ್ಯಸ್ಥರಾಗಿ ನಿಲೇಕಣಿ: ಅಧಿಕೃತ ಘೋಷಣೆಇನ್ಫೋಸಿಸ್ ಮುಖ್ಯಸ್ಥರಾಗಿ ನಿಲೇಕಣಿ: ಅಧಿಕೃತ ಘೋಷಣೆ

Infosys Shares Rise On Reports Co-Founder Nilekani May Return To Board

ಇದೀಗ, ನಂದನ್ ನಿಲೇಕಣಿಯವರ ಆಗಮನದಿಂದ ಕಂಪನಿಯಲ್ಲಿ ಹೊಸ ಉತ್ಸಾಹವೂ ಗರಿಗೆದರಿದ್ದು, ಷೇರು ಮಾರುಕಟ್ಟೆಯಲ್ಲಿ ಅದರ ಮೌಲ್ಯವೂ ಹೆಚ್ಚಾಗಿದೆ.

ನಂದನ್ ನಿಲೇಕಣಿ ಇನ್ಫಿಗೆ ಬಂದರೆ ಯಾವ ಹುದ್ದೆ ಸಿಗಲಿದೆ?ನಂದನ್ ನಿಲೇಕಣಿ ಇನ್ಫಿಗೆ ಬಂದರೆ ಯಾವ ಹುದ್ದೆ ಸಿಗಲಿದೆ?

ಬುಧವಾರವೇ ನಿಲೇಕಣಿ ಪುನರಾಗಮನ ಸುದ್ದಿ ಹರಡುತ್ತಿದ್ದಂತೆ, ನಿಧಾನವಾಗಿ ಏರಿಕೆ ಕಾಣಲು ಶುರುವಾಗಿದ್ದ ಷೇರು ಮೌಲ್ಯ, ಗುರುವಾರ (ಆಗಸ್ಟ್ 24) ಸಂಜೆ ಹೊತ್ತಿಗೆ ಪ್ರತಿಶತ 2.09ರಷ್ಟು ಏರಿಕೆ ಕಂಡಿತ್ತು.

English summary
Shares in Infosys rose for a third straight day on Thursday, following reports that former Chief Executive Nandan Nilekani could return to the board to help the software services exporter ride out its latest controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X