ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಒ ಮೇಲೆ ದೂರು, ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡ ಇನ್ಫಿ ಷೇರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಮಾಹಿತಿ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ವ್ಯವಹಾರ ನಡೆಸುವ ಬೆಂಗಳೂರು ಮೂಲದ ಇನ್ಫೋಸಿಸ್ ಕಂಪೆನಿ ಷೇರುಗಳು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿದ್ದು, ಕಳೆದ 6 ವರ್ಷಗಳಲ್ಲೇ ಈ ರೀತಿ ಕುಸಿತವನ್ನು ಕಂಡಿರಲಿಲ್ಲ.

ಮಂಗಳವಾರ(ಅಕ್ಟೋಬರ್ 22) ಬೆಳಗ್ಗೆ 10.53ರ ಹೊತ್ತಿಗೆ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ 109.25 ರುಪಾಯಿ ಕುಸಿತ ಕಂಡು (ಶೇ 14.23ರಷ್ಟು) 658.50 ರುಪಾಯಿಯಲ್ಲಿ ವಹಿವಾಟು ನಡೆಸಿತು.

Infosys shares Falls 16% After Whistleblower Complaints Against CEO

Recommended Video

ಹಣದ ಬಗ್ಗೆ ಸುಧಾಮೂರ್ತಿ ಏನು ಹೇಳ್ತಾರೆ ಕೇಳಿ | Oneindia Kannada

ಈ ಸಮಯಕ್ಕೆ 11.32ಕ್ಕೆ ಬಿಎಸ್ಇಯಲ್ಲಿ 110.30 ರು ಕಳೆದುಕೊಂಡು 14.43% ಕುಸಿತ ಕಂಡು 656.95 ರು ನಂತೆ ವಹಿವಾಟು ನಡೆಸಿದೆ. ಇದೇ ವೇಳೆ ಎನ್ಎಸ್ಇಯಲ್ಲಿ 110.50 ರು ಕಳೆದುಕೊಂಡು 14.33% ಕುಸಿದು 657.85 ರು ನಂತೆ ವ್ಯವಹಾರ ನಡೆಸುತ್ತಿದೆ.

ಇನ್ಫೋಸಿಸ್ 2ನೇ ತ್ರೈಮಾಸಿಕ ವರದಿ ಪ್ರಕಟ, ನಿವ್ವಳ ಲಾಭ ತುಸು ಇಳಿಕೆಇನ್ಫೋಸಿಸ್ 2ನೇ ತ್ರೈಮಾಸಿಕ ವರದಿ ಪ್ರಕಟ, ನಿವ್ವಳ ಲಾಭ ತುಸು ಇಳಿಕೆ

ಅನಾಮಧೇಯ 'ವಿಷಲ್ ಬ್ಲೋವರ್' ಅಮೆರಿಕದಲ್ಲಿ ಇನ್ಫೋಸಿಸ್ ಕಂಪೆನಿ ವಿರುದ್ಧ ಅನೈತಿಕವಾದ ಪದ್ಧತಿ ಅನುಸರಿಸುತ್ತಿರುವ ಬಗ್ಗೆ ಆರೋಪ ಮಾಡಿ, ದೂರು ನೀಡಿದ್ದಾನೆ. ಸಿಇಒ ಸಲೀಲ್ ಪರೇಖ್ ವಿರುದ್ಧವೇ ದೂರು ಕೇಳಿ ಬಂದಿದ್ದು, ಲಾಭದ ಸಂಖ್ಯೆ ಹೆಚ್ಚಳವಾಗಿದೆ ಎಂದು ತೋರಿಸಲು ವಾಮಮಾರ್ಗ ಬಳಿಸಲಾಗಿದೆ ಎಂದು ಅಮೆರಿಕದ ಷೇರುಪೇಟೆ ಸೆಕ್ಯುರಿಟೀಸ್ ಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ಇನ್ಫೋಸಿಸ್ ಚೇರ್ಮನ್ ನಂದನ್ ನಿಲೇಕಣಿ ಸ್ಪಷ್ಟನೆ

ನಂದನ್ ನಿಲೇಕಣಿ ಅವರು ಮಂಗಳವಾರ ಬೆಳಗ್ಗೆ ಈ ಬಗ್ಗೆ ಸ್ಪಷ್ಟನೆ ನೀಡಿ, ಸಂಸ್ಥೆಯ ಆಡಿಟ್ ಸಮಿತಿ ಎದುರು ಅಕ್ಟೋಬರ್ 10, 2019ರಂದು ಹಾಗೂ ನಾನ್ ಎಕ್ಸಿಕ್ಯೂಟಿವ್ ಸದಸ್ಯರ ಸಮಿತಿ ಎದುರು ಅಕ್ಟೋಬರ್ 11, 2019ರಂದು ಎರಡು ಅನಾಮಧೇಯ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನೆ, ಆಂತರಿಕ ತನಿಖೆ ಆರಂಭವಾಗಿದೆ ಎಂದಿದ್ದಾರೆ.

ಸಿಇಒ ಸಲಿಲ್ ಪರೇಖ್ ಅವರ ಅಂತಾರಾಷ್ಟ್ರೀಯ ಪ್ರವಾಸ, ಯುಎಸ್, ಮುಂಬೈಗೆ ಪ್ರಯಾಣದ ಬಗ್ಗೆ ದೂರುಗಳಿವೆ. ಶಾರ್ದೂಲ್ ಅಮರಚಂದ್ ಮಂಗಳ್ ದಾಸ್ ಆಡಿಟಿ ಸಮಿತಿಯಿಂದ ಸ್ವತಂತ್ರವಾಗಿ ತನಿಖೆ ನಡೆಸಲಾಗುತ್ತಿದ್ದು, ತನಿಖೆ ವರದಿ ಬರುವ ತನಕ ಕಾಯಬೇಕಿದೆ ಎಂದು ನಂದನ್ ಹೇಳಿದರು.

ಇನ್ಫೋಸಿಸ್ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ನಿರ್ಗಮನದ ನಂತರ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದ ಸಂದರ್ಭದಲ್ಲೂ ಇದೇ ರೀತಿ ಅನಾಮಧೇಯ ದೂರು ಪತ್ರಗಳು ಕೇಳಿ ಬಂದಿದ್ದವು. ಇದರಿಂದ ಏಷ್ಯಾದ ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್ ಗೆ ಭಾರಿ ನಷ್ಟ ಉಂಟಾಗಿತ್ತು.

English summary
Infosys shares Falls 16% on Tuesday(Oct 22) after After Whistleblower Complaints Against CEO Salil Parekh alleging "unethical practices".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X