• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಫೋಸಿಸ್ ಷೇರು ಜಿಗಿತ: 1 ಗಂಟೆಯಲ್ಲಿ 50,000 ಕೋಟಿ ಗಳಿಸಿದ ಹೂಡಿಕೆದಾರರು

|

ನವದೆಹಲಿ, ಜುಲೈ 16: ಗುರುವಾರದ ವ್ಯವಹಾರದಲ್ಲಿ, ದೇಶದ ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ಷೇರುಗಳು ಶೇಕಡಾ 15 ರಷ್ಟು ಜಿಗಿದು ಸಾರ್ವಕಾಲಿಕ ಗರಿಷ್ಠ 952 ರುಪಾಯಿಗೆ ತಲುಪಿದೆ. ಅದ್ಭುತ ಆರ್ಥಿಕ ಫಲಿತಾಂಶಗಳು ಕಂಪನಿಯ ಷೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದು, ವಿಶ್ಲೇಷಕರು ನಿರೀಕ್ಷಿಸಿದ್ದಕ್ಕಿಂತ ಇನ್ಫೋಸಿಸ್‌ನ ಆರ್ಥಿಕ ಫಲಿತಾಂಶಗಳು ಉತ್ತಮವಾಗಿವೆ.

   Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

   ಇನ್ಫೋಸಿಸ್ ಷೇರುಗಳು ಗುರುವಾರ ಏಳು ವರ್ಷಗಳಿಗಿಂತ ಹೆಚ್ಚು ಅವಧಿಯಲ್ಲಿ ತನ್ನ ಅತ್ಯುತ್ತಮ ದಿನದತ್ತ ಸಾಗುತ್ತಿದೆ. ದಿನದ ವಹಿವಾಟು ಆರಂಭದ ಮೊದಲ ಗಂಟೆಯಲ್ಲಿ ಹೂಡಿಕೆದಾರರ ಸಂಪತ್ತು 50000 ಕೋಟಿ ರುಪಾಯಿ ಏರಿಕೆಗೊಂಡಿತು.

   ಷೇರುಪೇಟೆಯಲ್ಲಿ ಇನ್ಫೋಸಿಸ್ ಷೇರುಗಳ ಭರ್ಜರಿ ಓಟ: ಶೇಕಡಾ 11.66 ರಷ್ಟು ಏರಿಕೆ

   ಇನ್ಫೋಸಿಸ್ ಷೇರುಗಳು ಇಂದು 900 ರೂ.ಗೆ ಪ್ರಾರಂಭವಾಗಿದ್ದು, ಹಿಂದಿನ ಮುಕ್ತಾಯದ 831.45 ರೂ.ಗಿಂತ ಶೇ .8.24 ರಷ್ಟು ಏರಿಕೆ ಕಂಡಿತು. ನಂತರ ವಹಿವಾಟಿದಲ್ಲಿ ದಿನದ ಗರಿಷ್ಟ 952 ರೂ.ಗೆ ತಲುಪಿ, ದಿನದ ವಹಿವಾಟು ಅಂತ್ಯಕ್ಕೆ 911 ರುಪಾಯಿಗೆ ತಲುಪಿದೆ. ಇನ್ಫೋಸಿಸ್ ಷೇರು ಬೆಲೆ ಒಂದು ವಾರದಲ್ಲಿ ಶೇ. 15.7, ತಿಂಗಳಲ್ಲಿ ಶೇ. 29 ಮತ್ತು 2020 ರ ಆರಂಭದಿಂದ ಶೇ. 23ರಷ್ಟು ಏರಿಕೆಯಾಗಿದೆ.

   ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರರಾದ ಇನ್ಫೋಸಿಸ್ ಜೂನ್ 30 ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ 4,233 ಕೋಟಿ ರುಪಾಯಿ ಲಾಭ ಗಳಿಸಿದೆ. ಈ ಅವಧಿಯಲ್ಲಿ ಇನ್ಫೋಸಿಸ್ ಆದಾಯವು ಶೇಕಡಾ 8.5 ರಷ್ಟು ಏರಿಕೆಯಾಗಿ 21,803 ಕೋಟಿ ರೂ.ಗಳಿಂದ 23,665 ಕೋಟಿ ರುಪಾಯಿಗೆ ತಲುಪಿದೆ.

   English summary
   IT major Infosys pushed its shares to a record high, adding about 50,000 crore to its investors' wealth in the first hour of trade on BSE.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X