ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಷೇರು ಹೂಡಿಕೆದಾರರ 53,451 ಕೋಟಿ ಖಲಾಸ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22: ಬೆಂಗಳೂರು ಮೂಲದ ವಿಶ್ವ ಮಟ್ಟದ ಖ್ಯಾತಿಯ ಇನ್ಫೋಸಿಸ್ ಕಂಪೆನಿ ಷೇರುಗಳು ಮಂಗಳವಾರ ಶೇಕಡಾ ಹದಿನೇಳರಷ್ಟು ಕುಸಿತ ಕಂಡವು. ಮಾರುಕಟ್ಟೆ ಮೌಲ್ಯದಲ್ಲಿ ಹೇಳಬೇಕಾದರೆ 53,451 ಕೋಟಿ ರುಪಾಯಿ ಹೂಡಿಕೆದಾರರ ಸಂಪತ್ತು ಕೊಚ್ಚಿಹೋಯಿತು.

ಇನ್ಫೋಸಿಸ್ ಕಂಪೆನಿಯ ಅಲ್ಪಾವಧಿ ಆದಾಯ ಮತ್ತು ಲಾಭವನ್ನು ಹೆಚ್ಚಿಸಲು ಇಬ್ಬರು ಹಿರಿಯ ಅಧಿಕಾರಿಗಳು ಅನೈತಿಕ ಪದ್ಧತಿ ಅನುಸರಿಸುತ್ತಿದ್ದಾರೆ ಎಂದು 'ವಿಷಲ್ ಬ್ಲೋವರ್'ವೊಬ್ಬರು ಆರೋಪಿಸಿ, ದೂರು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಕಂಪೆನಿ ಷೇರುಗಳ ಬೆಲೆಯಲ್ಲಿ ಹದಿನಾರು ಪರ್ಸೆಂಟ್ ಕುಸಿತವಾಯಿತು. ಕಳೆದ ಆರೂವರೆ ವರ್ಷದಲ್ಲೇ ಇನ್ಫಿ ಕಂಡ ಅತ್ಯಧಿಕ ಕುಸಿತ ಇದಾಗಿದೆ.

ಸಿಇಒ ಮೇಲೆ ದೂರು, ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡ ಇನ್ಫಿ ಷೇರುಸಿಇಒ ಮೇಲೆ ದೂರು, ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡ ಇನ್ಫಿ ಷೇರು

ಈ ಕುಸಿತದ ಪರಿಣಾಮವಾಗಿ ಹೂಡಿಕೆದಾರರ 53,451 ಕೋಟಿ ರುಪಾಯಿ ಮಾರುಕಟ್ಟೆ ಮೌಲ್ಯ ಕುಸಿದುಹೋಯಿತು. ಇನ್ಪೋಸಿಸ್ ಕಂಪೆನಿಯ ಅಲ್ಪಾವಧಿ ಆದಾಯ ಮತ್ತು ಲಾಭ ಹೆಚ್ಚಿಸಿಕೊಳ್ಳಲು ಸಿಇಒ ಸಲೀಲ್ ಪಾರೇಖ್ ಹಾಗೂ ಸಿಎಫ್ ಒ ನಿರಂಜನ್ ರಾಯ್ 'ಅನೈತಿಕ ಪದ್ಧತಿ' ಅನುಸರಿಸಿದ್ದಾರೆ ಎಂದು ಆರೋಪ ಬಂದಿದೆ.

Infosys Share Investors Lost 53 Thousand Crores On Single Day

'ವಿಷಲ್ ಬ್ಲೋವರ್' ಆರೋಪದ ಬಗ್ಗೆ ಕಂಪೆನಿಯ ಲೆಕ್ಕಪತ್ರ ಪರಿಶೋಧನಾ ಸಮಿತಿಯಿಂದ ಪರಿಸ್ವತಂತ್ರ ತನಿಖೆ ನಡೆಸಲಾಗುವುದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

English summary
Due to allegation of unethical practice, Infosys share holders lost more than 53 thousand crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X