ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ಸಿಬ್ಬಂದಿಗೆ ಸಂಬಳ ಏರಿಕೆ, ಬಡ್ತಿ ಘೋಷಿಸಿದ ಇನ್ಫೋಸಿಸ್

|
Google Oneindia Kannada News

ಬೆಂಗಳೂರು, ಅ.14: ಕೊವಿಡ್19 ಸಂಕಷ್ಟದ ನಡುವೆ ಆರ್ಥಿಕ ಸಂಕಷ್ಟದಿಂದ ಲಕ್ಷಾಂತರ ಸಿಬ್ಬಂದಿಗಳಿಗೆ ಬಡ್ತಿ, ಸಂಬಳ ಏರಿಕೆ ತಡೆ ಹಿಡಿಯಲಾಗಿತ್ತು. ಈಗ ಜನವರಿ ತಿಂಗಳಿಂದ ಅನ್ವಯವಾಗುವಂತೆ ಸುಮಾರು 2.4 ಲಕ್ಷ ಉದ್ಯೋಗಿಗಳಿಗೆ ಸಂಬಳ ಏರಿಕೆ, ಬಡ್ತಿ ನೀಡುತ್ತಿರುವುದಾಗಿ ಇನ್ಫೋಸಿಸ್ ಪ್ರಕಟಿಸಿದೆ. ಎಲ್ಲಾ ಸ್ತರದ ಸಿಬ್ಬಂದಿಗಳಿಗೆ ಸಂಬಳ ಏರಿಕೆ, ಬಡ್ತಿ ಜೊತೆಗೆ 100% ವೇರಿಯಬಲ್ ಪೇ, ವಿಶೇಷ ಭತ್ಯೆ ಕೂಡಾ ಸಿಗಲಿದೆ.

10 ವರ್ಷಗಳಿಗಿಂತ ಕಡಿಮೆ ಕೆಲಸದ ಅನುಭವ ಹೊಂದಿರುವವರು, ಜ್ಯೂನಿಯರ್ ಹಾಗೂ ಮಧ್ಯಮ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಬಡ್ತಿಯನ್ನು ನೀಡಲಾಗುತ್ತದೆ ಎಂದು ಇನ್ಫೋಸಿಸ್ ನ ಮಾನವ ಸಂಪನ್ಮೂಲ ಗುಂಪಿನ ಮುಖ್ಯಸ್ಥ ಕೃಷ್ಣ ಶಂಕರ್ ಆಗಸ್ಟ್ ತಿಂಗಳಿನಲ್ಲಿ ಘೋಷಿಸಿದ್ದರು.

ಇನ್ಫೋಸಿಸ್ ಫೌಂಡೇಷನ್‍ನಿಂದ 50 ಕೋಟಿ ರೂ ವೆಚ್ಚದಲ್ಲಿ ಆಸ್ಪತ್ರೆಇನ್ಫೋಸಿಸ್ ಫೌಂಡೇಷನ್‍ನಿಂದ 50 ಕೋಟಿ ರೂ ವೆಚ್ಚದಲ್ಲಿ ಆಸ್ಪತ್ರೆ

ಆದರೆ, ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಐಟಿ ಸೇವೆ ವಿಭಾಗದಲ್ಲಿ ಅಟ್ರಿಷನ್ ಪ್ರಮಾಣ 7.8%ಕ್ಕೆ ಕುಸಿದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಆತಂಕಕಾರಿ 18.3%ರಷ್ಟಿತ್ತು, ತ್ರೈಮಾಸಿಕ ವರದಿ ಪ್ರಕಟಿಸಿದ ಬಳಿಕ ಮಧ್ಯಂತರ ಡಿವಿಡೆಂಟ್ 12 ರು ಪ್ರತಿ ಈಕ್ವಟಿ ಷೇರುಗಳಂತೆ ಘೋಷಿಸಲಾಗಿದೆ ಎಂದು ಸಿಒಒ ಪ್ರವೀಣ್ ರಾವ್ ಹೇಳಿದ್ದಾರೆ.

Infosys roll outs salary hikes, promotions

ಇನ್ಫೋಸಿಸ್ ಪ್ರತಿಸ್ಪರ್ಧಿ ಟಿಸಿಎಸ್ ಕಳೆದ ವಾರ ತನ್ನ ಉದ್ಯೋಗಿಗಳಿಗೆ ಅಕ್ಟೋಬರ್ ರಿಂಅ ಅನ್ವಯವಾಗುವಂತೆ ಸಂಬಳ ಏರಿಕೆ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೊವಿಡ್ 19 ಸಂಕಷ್ಟದಲ್ಲೂ ಸಿಬ್ಬಂದಿಗೆ 235.54 ಕೋಟಿ ಬೋನಸ್!ಕೊವಿಡ್ 19 ಸಂಕಷ್ಟದಲ್ಲೂ ಸಿಬ್ಬಂದಿಗೆ 235.54 ಕೋಟಿ ಬೋನಸ್!

Recommended Video

ಸತತ ಏರಿಕೆ ನಂತರ ದೊಡ್ಡ ಬ್ರೇಕ್ ಕಂಡ Sensex | Oneindia Kannada

ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಯ ನಿವ್ವಳ ಲಾಭ ಈ ತ್ರೈಮಾಸಿಕದಲ್ಲಿ 4,845 ಕೋಟಿ ರು ಬಂದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 4,019 ಕೋಟಿ ರು ನಷ್ಟಿತ್ತು. ಆದಾಯ 24, 570 ಕೋಟಿರು ಗಳಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 22,629 ಕೋಟಿ ರು ನಷ್ಟಿತ್ತು. ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಒಟ್ಟಾರೆ ಆದಾಯ ಶೇ 2.2ರಷ್ಟು ಏರಿಕೆ ಕಂಡಿದೆ ಡಿಜಿಟಲ್ ಹಾಗೂ ಕ್ಲೌಡ್ ಸಾಮರ್ಥ್ಯ ಸುಧಾರಣೆಯಾಗಿದೆ ಎಂದು ಸಿಇಒ, ಎಂಡಿ ಸಲೀಲ್ ಪರೇಖ್ ಹೇಳಿದ್ದಾರೆ.

English summary
Infosys today announced that it will roll out salary increases and promotions across all levels effective 1st January. Infosys also said it is giving 100% variable pay along with a special incentive for Q2
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X