ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರೀಕ್ಷೆಗೂ ಮೀರಿದ ಲಾಭ ದಾಖಲಿಸಿದ ಇನ್ಫೋಸಿಸ್

By Mahesh
|
Google Oneindia Kannada News

ಬೆಂಗಳೂರು, ಅ.10: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಶುಕ್ರವಾರ ಪ್ರಕಟಿಸಿದೆ. ಸೆ.30, 2014ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗೂ ಮೀರಿದ ಆದಾಯ ಲಾಭವನ್ನು ಸಿಕ್ಕಾ ಅವರ ಕಂಪನಿ ದಾಖಲಿಸಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ವಿಶ್ಲೇಷಕರ ಎಣಿಕೆಯಂತೆ 2,800 ಕೋಟಿ ರು ಲಾಭದ ನಿರೀಕ್ಷೆಯಿತ್ತು. ಅದರೆ, ಈ ತ್ರೈಮಾಸಿಕ ಅವಧಿಯಲ್ಲಿ 3096 ಕೋಟಿ ರು ಲಾಭ ದಾಖಲಾಗಿದೆ. ಒಟ್ಟಾರೆ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 28.6ರಷ್ಟು ಅಧಿಕ ನಿವ್ವಳ ಲಾಭ ಬಂದಿದೆ. [Q1 ವರದಿ: ಇನ್ಫೋಸಿಸ್ ಗೆ ಲಾಭ]

ಸಂಸ್ಥೆಯ ಆದಾಯ 13,342 ಕೋಟಿ ರು ನಷ್ಟಿದ್ದು ಶೇ 7.3ರಷ್ಟು ಏರಿಕೆ ಕಂಡು ಬಂದಿದೆ. ಇಬಿಐಟಿ ಮಾರ್ಜಿನ್(Earnings Before Interest & Tax) ಶೇ 26.1ರಷ್ಟಿದ್ದು 3483 ಕೋಟಿ ರು ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಸುಮರು 100 ಮೂಲಾಂಶ ಅಂಕ ಅಧಿಕವಾಗಿ ಬಂದಿದೆ.

Infosys reports upbeat Q2 numbers; net profits at Rs 3096 crores

ಬೋನಸ್ : ಡಾಲರ್ ಆದಾಯ 2201 ಮಿಲಿಯನ್ ಡಾಲರ್ ನಷ್ಟಿದ್ದು ಶೇ 3.1ರಷ್ಟು ಪ್ರಗತಿ ಹೊಂದಲಾಗಿದೆ. ಉತ್ತರ ಅಮೆರಿಕದಲ್ಲಿ ಶೇ 3.1, ಯುರೋಪಿನಲ್ಲಿ ಶೇ 4.2, ವಿಶ್ವದ ಇತರೆಡೆ ಶೇ 2.8ರಷ್ಟು ಪ್ರಗತಿ ಕಂಡಿದೆ. ಇದೇ ಖುಷಿಯಲ್ಲಿ ಇನ್ಫೋಸಿಸ್ ಬೋರ್ಡ್ 1:1 ಅನುಪಾತದಲ್ಲಿ ಮಧ್ಯಂತರ ಡಿವಿಡೆಂಡ್ 30 ರು ಪ್ರತಿಷೇರಿನಂತೆ ಘೋಷಣೆ ಮಾಡಿದೆ. [ಇನ್ಫೋಸಿಸ್ಸಿನ 'ಸೇನಾಪತಿ']

ಸ್ಥಾಪಕರ ನಿರ್ಗಮನ: ಶುಕ್ರವಾರ (ಅ.10) ಕಂಪನಿಯ ಸ್ಥಾಪಕರಾದ ಕ್ರಿಸ್ ಗೋಪಾಲಕೃಷ್ಣನ್ ಹಾಗೂ ನಾರಾಯಣ ಮೂರ್ತಿ ಅವರ ನಿರ್ಗಮನದೊಂದಿಗೆ ಕಂಪನಿಯ ಎಲ್ಲಾ ಏಳು ಸ್ಥಾಪಕರು ಸಂಸ್ಥೆಯನ್ನು ತೊರೆದ್ದಂತಾಗಿದೆ. ಸ್ಥಾಪಕರ ಜೊತೆ ಒಂದು ದಿನ ಎಂಬ ಕಾರ್ಯಕ್ರಮವನ್ನು ಇನ್ಫೋಸಿಸ್ ನಲ್ಲಿ ಆಯೋಜಿಸಲಾಗಿತ್ತು. [ಸಿಕ್ಕಾ ಸಿಕ್ಕಾಪಟ್ಟೆ ಸಂಬಳ ಏರಿಸ್ತಾರಪ್ಪ!]

ಹೊಸ ಗ್ರಾಹಕ : ಇನ್ಫೋಸಿಸ್ ಈ ಅವಧಿಯಲ್ಲಿ 49 ಹೊಸ ಗ್ರಾಹಕರನ್ನು ಹೊಂದಿದೆ. 14,255 ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸೆ.30, 2014ಕ್ಕೆ ಅನ್ವಯವಾಗುವಂತೆ ಇನ್ಫೋಸಿಸ್ ನಲ್ಲಿ ಸುಮಾರು 1,65,411 ಉದ್ಯೋಗಿಗಳಿದ್ದಾರೆ. ಜೂನ್ ನಲ್ಲಿ ಶೇ 19.5ರಷ್ಟಿದ್ದ ಕಂಪನಿಯ attrition ಪ್ರಮಾಣದ ಶೇ 20.1 ಕ್ಕೇರಿದೆ. ಒಟ್ಟಾರೆ ವಿಶಾಲ್ ಸಿಕ್ಕಾ ಅವರು ಸಿಇಒ ಆಗಿ ಬಂದ ಮೇಲೆ ಹೊಸ ಉತ್ಸಾಹದೊಂದಿಗೆ ಇನ್ಫೋಸಿಸ್ ಬದಲಾವಣೆ ಹಾಗೂ ಯಶಸ್ಸಿನ ಹಾದಿ ಹಿಡಿಯುತ್ತಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
IT major Infosys reported profits that once again beat street estimates as the company reported net profits of Rs 3096 crore for the quarter ending Sept 30, 2014, as against analysts expectations of Rs 2800 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X