ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ನೇ ತ್ರೈಮಾಸಿಕ : ಇನ್ಫೋಸಿಸ್ ನಿವ್ವಳ ಲಾಭದಲ್ಲಿ ಶೇ 30ರಷ್ಟು ಕುಸಿತ

|
Google Oneindia Kannada News

ಬೆಂಗಳೂರು, ಜನವರಿ 11: ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಿಸಿಎಸ್ ನ ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ, ಬೆಂಗಳೂರು ಮೂಲದ ದೇಶದ ಎರಡನೇ ಅಗ್ರಗಣ್ಯ ಐಟಿ ಕಂಪನಿ ಇನ್ಫೋಸಿಸ್ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.

ಅಕ್ಟೋಬರ್ -ಡಿಸೆಂಬರ್ 2018 ತ್ರೈಮಾಸಿಕ ವರದಿಯಲ್ಲಿ ಸಂಸ್ಥೆಯ ನಿವ್ವಳ ಲಾಭ ಶೇ 30ರಷ್ಟು ಕುಸಿತ ಕಂಡು 3,610 ಕೋಟಿ ರು ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5,129 ಕೋಟಿ ರು ಲಾಭ ಬಂದಿತ್ತು. ಸುಮಾರು 8,260 ಕೋಟಿ ರು ಷೇರುಗಳನ್ನು ಬೈಬ್ಯಾಕ್ ಮಾಡುವುದಾಗಿ ಘೋಷಿಸಿದರೂ ಲಾಭದಲ್ಲಿ ಏರಿಕೆ ಕಂಡು ಬಂದಿಲ್ಲ.

ಇನ್ಫೋಸಿಸ್ ನಿಂದ ಮತೊಬ್ಬ ಉನ್ನತ ಅಧಿಕಾರಿ ನಿರ್ಗಮನ ಇನ್ಫೋಸಿಸ್ ನಿಂದ ಮತೊಬ್ಬ ಉನ್ನತ ಅಧಿಕಾರಿ ನಿರ್ಗಮನ

ಡಿಸೆಂಬರ್ ಅಂತ್ಯಕ್ಕೆ ಸಂಸ್ಥೆಯ ಒಟ್ಟು ಆದಾಯದಲ್ಲಿ ಶೇ 20.3ರಷ್ಟು ಏರಿಕೆ ಕಂಡು 21,400 ಕೋಟಿ ರು ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಆದಾಯ 17,794 ಕೋಟಿ ರು ನಷ್ಟಿತ್ತು.

Infosys Q3 net profit falls 30 pc to Rs 3,610 crore

ಪ್ರತಿ ಷೇರಿಗೆ 800 ರು ನಂತೆ ಸುಮಾರು 1.8 ಮಿಲಿಯನ್ ಯುಎಸ್ ಡಿ(8,260 ಕೋಟಿ ರು) ಮೌಲ್ಯದ ಷೇರುಗಳ ಖರೀದಿಯನ್ನು ಇನ್ಫೋಸಿಸ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 4 ರು ಪ್ರತಿ ಷೇರಿನಂತೆ ವಿಶೇಷ ಡಿವಿಡೆಂಡ್ ಘೋಷಿಸಿರುವುದರಿಂದ ಸಂಸ್ಥೆಗೆ 2,107 ಕೋಟಿ ರು ಹೊರೆ ಆಗಲಿದೆ.

ಟಿಸಿಎಸ್ 3ನೇ ತ್ರೈಮಾಸಿಕ ವರದಿ: ಸಂಸ್ಥೆಗೆ ಶೇ 24 ರಷ್ಟು ನಿವ್ವಳ ಲಾಭಟಿಸಿಎಸ್ 3ನೇ ತ್ರೈಮಾಸಿಕ ವರದಿ: ಸಂಸ್ಥೆಗೆ ಶೇ 24 ರಷ್ಟು ನಿವ್ವಳ ಲಾಭ

2018-19ಆರ್ಥಿಕ ಪ್ರಗತಿ ಮಾರ್ಗದರ್ಶಿ ಪ್ರಮಾಣವನ್ನು ಶೇ 8.5 ರಿಂದ 9 ಎಂದು ಸೂಚಿಸಲಾಗಿದೆ. ಡಿಜಿಟಲ್ ವಿಭಾಗದಲ್ಲಿ ಶೇ33.1ರಷ್ಟು ಪ್ರಗತಿ ಕಂಡಿದ್ದು, 1.57 ಬಿಲಿಯನ್ ಮೌಲ್ಯದ ಒಪ್ಪಂದಗಳು ಸಾಧ್ಯವಾಗಿವೆ ಎಂದು ಇನ್ಫೋಸಿಸ್ ಸಿಇಒ ಹಾಗೂ ಎಂಡಿ ಸಲೀಲ್ ಪರೇಖ್ ಹೇಳಿದ್ದಾರೆ.(ಪಿಟಿಐ)

English summary
IT major Infosys Friday said its net profit declined by nearly 30 per cent to Rs 3,610 crore during the December 2018 quarter, even as it announced a share buyback plan of up to Rs 8,260 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X